AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

eHundi in Dargah: ವಕ್ಫ್ ಒಡೆತನದ ದರ್ಗಾ, ಮಸೀದಿಗಳಿಗೆ ಇಹುಂಡಿ ವ್ಯವಸ್ಥೆ, ಹೊಸ ಆ್ಯಪ್​​ ಬಿಡುಗಡೆ ಮಾಡಿದ ಸಚಿವ

ರಾಜ್ಯ ವಕ್ಫ್ ಮಂಡಳಿಗೆ ಸೇರಿದ ದರ್ಗಾ ಮತ್ತು ಮಸೀದಿಗಳಿಗೆ ದೇಣಿಗೆ ನೀಡಲು ಸರ್ಕಾರಿ ಸ್ವಾಮ್ಯದ ದೇವಸ್ಥಾನಗಳ ಮಾದರಿಯಂತೆ ವಿಶೇಷ ಹುಂಡಿ ಆ್ಯಪ್​​ನ್ನು ಅಭಿವೃದ್ಧಿಪಡಿಸಲಾಗಿದೆ.

eHundi in Dargah: ವಕ್ಫ್ ಒಡೆತನದ ದರ್ಗಾ, ಮಸೀದಿಗಳಿಗೆ ಇಹುಂಡಿ ವ್ಯವಸ್ಥೆ, ಹೊಸ ಆ್ಯಪ್​​ ಬಿಡುಗಡೆ ಮಾಡಿದ ಸಚಿವ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
| Updated By: Digi Tech Desk|

Updated on:Jun 28, 2023 | 12:10 PM

Share

ಹಿಂದೂ ಧರ್ಮದ ಕೆಲವೊಂದು ವಿಚಾರಗಳನ್ನು ಇತರ ಧರ್ಮಗಳು ಅನುಸರಿಸುವುದು ಹೊಸದೇನಲ್ಲ, ಆದರೆ ಇದೀಗ ಹಿಂದೂ ದೇವಾಲಯಗಳಲ್ಲಿ ತರಲಾದ ಸರ್ಕಾರಿ ಕ್ರಮಗಳನ್ನು ದರ್ಗಾ ಮತ್ತು ಮಸೀದಿಗಳಲ್ಲೂ ತರಲಾಗುವುದು, ಅಂದರೆ ದೇಣಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ದೇವಾಲಯಗಳ ಹುಂಡಿ ಹಣವನ್ನು ಪಡೆಯುತ್ತಿತ್ತು. ಇದೀಗ ಸರ್ಕಾರಿ ದೇಣಿಗೆ ಪಡೆಯಲು ಮುಸ್ಲಿಂ ಸಮುದಾಯಗಳು ಇದೆ ರೀತಿಯ ಕ್ರಮವನ್ನು ಅನುಸರಿಸುತ್ತಿದೆ. ರಾಜ್ಯ ವಕ್ಫ್ ಮಂಡಳಿಗೆ ಸೇರಿದ ದರ್ಗಾ ಮತ್ತು ಮಸೀದಿಗಳಿಗೆ ದೇಣಿಗೆ ನೀಡಲು ಸರ್ಕಾರಿ ಸ್ವಾಮ್ಯದ ದೇವಸ್ಥಾನಗಳ ಮಾದರಿಯಂತೆ ವಿಶೇಷ ಹುಂಡಿ ಆ್ಯಪ್​​ನ್ನು ಅಭಿವೃದ್ಧಿಪಡಿಸಲಾಗಿದೆ. ಮಂಗಳವಾರ (ಜೂನ್​​.28) ನಡೆದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಆ್ಯಪ್​​ನ್ನು ಬಿಡುಗಡೆ ಮಾಡಿದ್ದಾರೆ.

ಇನ್ನು ಮುಂದೆ ದರ್ಗಾ ಮತ್ತು ಮಸೀದಿಗಳಿಗೆ ಸರ್ಕಾರ ದೇಣಿಗೆ ನೀಡಬೇಕಾದರೆ. ಹಿಂದೂ ದೇವಾಲಯಗಳು ಹುಂಡಿಯ ಹಣವನ್ನು ಹೇಗೆ ಸರ್ಕಾರಕ್ಕೆ ನೀಡುತ್ತಿತ್ತು, ಅದೇ ರೀತಿಯಲ್ಲಿ ದರ್ಗಾ ಮತ್ತು ಮಸೀದಿಗಳು ಕೂಡ ನೀಡಬೇಕು ಎಂದು ಹೇಳಲಾಗಿದೆ. ಈ ದೃಷ್ಟಿಯಿಂದ ಆ್ಯಪ್​ವೊಂದನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಆ್ಯಪ್​​ ಮೂಲಕ ಎಷ್ಟು ಮೊತ್ತ, ಯಾವ ಕ್ಷೇತ್ರದಿಂದ ಬಂದಿದೆ ಎಂಬುದನ್ನು ಪತ್ತೆ ಮಾಡುವುದರ ಜತೆಗೆ, ಸರ್ಕಾರ ನೀಡಿದ ದೇಣಿಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಮತ್ತು ನಿರ್ದಿಷ್ಟ ಉದ್ದೇಶಗಳಿಗೆ ಬಳಸದಂತೆ ನೋಡಿಕೊಳ್ಳಲು ಈ ಆ್ಯಪ್​​ನ್ನು ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ: Fact Check: ‘ಮಸೀದಿಗಳಲ್ಲಿ ಸಂಗ್ರಹವಾದ ಹಣಕ್ಕೆ ತೆರಿಗೆ ಇಲ್ಲ’, ಚೀಲಗಳಲ್ಲಿ ನೋಟು ತುಂಬುತ್ತಿರುವ ವಿಡಿಯೊ ಭಾರತದ್ದಲ್ಲ

ಬೆಂಗಳೂರಿನ ಹಜರತ್ ತವಕ್ಕಲ್ ಮಸ್ತಾನ್ ಶಾ ದರ್ಗಾದಲ್ಲಿ ಇಹುಂಡಿ ಅಪ್ಲಿಕೇಶನ್​​ನ್ನು ಪ್ರಯೋಗಿಕವಾಗಿ ಅಭಿವೃದ್ಧಿ ಮಾಡಲಾಗಿದೆ, ಇನ್ನು ಮುಂದೆ ಇದು ವಕ್ಫ್ ಬೋರ್ಡ್ ಅಡಿಯಲ್ಲಿ ಬರುವ ಎಲ್ಲಾ 3,131 ದರ್ಗಾಗಳು ಮತ್ತು 10,398 ಮಸೀದಿಗಳನ್ನು ಒಳಗೊಳ್ಳಲಿದೆ. ಜನರು ಈ ಆ್ಯಪ್​​ನ್ನು ಬಳಸಿಕೊಂಡು, ಗೂಗಲ್ ಪೇ ಮುಂತಾದ ಮೊಬೈಲ್ ಆಧಾರಿತ ಪಾವತಿ ವ್ಯವಸ್ಥೆಗಳನ್ನು ಬಳಸಿಕೊಂಡು ಎಲ್ಲಿಂದಲಾದರೂ ದೇಣಿಗೆ ನೀಡಬಹುದು ಎಂದು ಅವರು ಹೇಳಿದರು.

ರಾಜ್ಯಾದ್ಯಂತ ವಕ್ಫ್ ಬೋರ್ಡ್ ಆಸ್ತಿಗಳ ಒತ್ತುವರಿ ಕುರಿತು, ಅಕ್ರಮ ಒತ್ತುವರಿ ತೆರವು ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದು ಹೇಳಿದರು. ಹಲವು ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಕೆಲವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಅಡ್ವೊಕೇಟ್ ಜನರಲ್ ಜತೆ ಚರ್ಚೆ ನಡೆಸಲಾಗುವುದು. ಬಜೆಟ್ ನಂತರ ವಕ್ಫ್ ಆಸ್ತಿ ಅದಾಲತ್ ನಡೆಯಲಿದೆ ಎಂದರು. ಇನ್ನೂ ಸರ್ಕಾರಿ ಸಂಸ್ಥೆಗಳು ವಕ್ಫ್​​ ಬೋರ್ಡ್​​ಗೆ ಸಂಬಂಧಿಸಿದ ಸ್ಥಳಗಳನ್ನು ಒತ್ತವರಿ ಮಾಡಿಕೊಂಡಿದ್ದು. ಖಾಸಗಿಯವರು ಕೂಡ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:08 pm, Wed, 28 June 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!