ಕಾರಿನ ಮೇಲೆ‌ ಒಂಟಿಸಲಗ ದಾಳಿ; ಓಡಿ ಹೋಗಿ ಪ್ರಾಣ ಉಳಿಸಿಕೊಂಡ ತಾ.ಪಂ. ಮಾಜಿ ಸದಸ್ಯೆ ಮತ್ತು ಮಗ

ತಾ.ಪಂ. ಮಾಜಿ ಸದಸ್ಯೆ ಚೈತ್ರಾ ಮತ್ತು ಆಕೆಯ ಮಗ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿತ್ತು. ಆಗ ಚೈತ್ರಾ ಹಾಗೂ ಅವರ ಪುತ್ರ ಕಾರಿನಿಂದ ಇಳಿದು ಓಡಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ಕಾರಿನ ಮೇಲೆ‌ ಒಂಟಿಸಲಗ ದಾಳಿ; ಓಡಿ ಹೋಗಿ ಪ್ರಾಣ ಉಳಿಸಿಕೊಂಡ ತಾ.ಪಂ. ಮಾಜಿ ಸದಸ್ಯೆ ಮತ್ತು ಮಗ
ಕಾರಿನ ಮೇಲೆ‌ ಒಂಟಿಸಲಗ ದಾಳಿ
Updated By: ಆಯೇಷಾ ಬಾನು

Updated on: Jul 05, 2021 | 2:37 PM

ಹಾಸನ: ಚಲಿಸುತ್ತಿದ್ದ ಕಾರಿನ ಮೇಲೆ‌ ಒಂಟಿಸಲಗ ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಲಸುಲಿಗೆ ಬಳಿ ನಡೆದಿದೆ. ಕಾರಿನಲ್ಲಿ ತಾಯಿ-ಮಗ ಇಬ್ಬರೂ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಚೈತ್ರಾ, ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾ.ಪಂ. ಮಾಜಿ ಸದಸ್ಯೆ ಚೈತ್ರಾ ಮತ್ತು ಆಕೆಯ ಮಗ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿತ್ತು. ಆಗ ಚೈತ್ರಾ ಹಾಗೂ ಅವರ ಪುತ್ರ ಕಾರಿನಿಂದ ಇಳಿದು ಓಡಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಕಾಡಾನೆ ಕಾರನ್ನು ಜಖಂಗೊಳಿಸಿ ಕಾಫಿ ತೋಟದತ್ತ ಮರೆಯಾಗಿದೆ. ಘಟನೆಯಲ್ಲಿ ಚೈತ್ರಾರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸದ್ಯ ಚೈತ್ರಾ ಮತ್ತು ಆಕೆಯ ಮಗ ಬೇರೆ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರಿನ ಮೇಲೆ‌ ಒಂಟಿಸಲಗ ದಾಳಿ

ಇದನ್ನೂ ಓದಿ: ಆನೆ ದಾಳಿ: ಅರಣ್ಯ ಇಲಾಖೆ ಅಧಿಕಾರಿ ಸೇರಿ ಇಬ್ಬರ ಸಾವು.. ಎಲ್ಲಿ?