ಚಿತ್ರಮಂದಿರ ಪ್ರವೇಶಕ್ಕೆ ನಿರ್ಬಂಧವೇಕೆ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿದ ಎಚ್​.ಡಿ.ಕುಮಾರಸ್ವಾಮಿ

|

Updated on: Feb 03, 2021 | 4:34 PM

ಎಲ್ಲ ಕಡೆ ಜನರು ನಿರ್ಭಯವಾಗಿ ಸಂಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಸಿನಿಮಾ ಮಂದಿರಗಳ ಶೇ 100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಅಂಥದ್ದರಲ್ಲಿ ಈ ನಿರ್ಬಂಧದ ಅವಶ್ಯಕತೆ ಏನಿತ್ತು ಎಂದು ಎಚ್​ಡಿಕೆ ಪ್ರಶ್ನಿಸಿದ್ದಾರೆ.

ಚಿತ್ರಮಂದಿರ ಪ್ರವೇಶಕ್ಕೆ ನಿರ್ಬಂಧವೇಕೆ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿದ ಎಚ್​.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ
Follow us on

ಮೈಸೂರು: ಚಿತ್ರಮಂದಿರ ಸಾಮರ್ಥ್ಯದ ಅರ್ಧದಷ್ಟು ಮಾತ್ರವೇ ಪ್ರೇಕ್ಷಕರಿಗೆ ಪ್ರವೇಶಾವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ನಿರ್ದೇಶನದ ಬಗ್ಗೆ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಥಿಯೇಟರ್ ಮಾಲೀಕರಿಂದ ಕಲೆಕ್ಷನ್ ಮಾಡಲು ಸರ್ಕಾರ ಇಂಥ ಆದೇಶ ಹೊರಡಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ ಎಚ್​ಡಿಕೆ, ದುಡ್ಡು ತಂದು ಕೊಡಲಿ ಎಂದು ಈ ಆದೇಶ ಮಾಡಿರಬಹುದು ಎಂದು ಲೇವಡಿ ಮಾಡಿದರು.

ಎಲ್ಲ ಕಡೆ ಜನರು ನಿರ್ಭಯವಾಗಿ ಸಂಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಸಿನಿಮಾ ಮಂದಿರಗಳ ಶೇ 100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಅಂಥದ್ದರಲ್ಲಿ ಈ ನಿರ್ಬಂಧದ ಅವಶ್ಯಕತೆ ಏನಿತ್ತು ಎಂದು ಎಚ್​ಡಿಕೆ ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ಹೊರಡಿಸಿರುವ ಈ ಆದೇಶದ ಹಿಂದಿನ ಉದ್ದೇಶಗಳನ್ನು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

Dhruva Sarja Tweet ರಾಜ್ಯ ಸರ್ಕಾರದ ವಿರುದ್ಧ ಧ್ರುವ ಸರ್ಜಾ ತೀವ್ರ ಅಸಮಾಧಾನ; ಟ್ವಿಟರ್​ನಲ್ಲಿ 3 ಪ್ರಶ್ನೆ ಮುಂದಿಟ್ಟ ನಟ

ಶಿವರಾಜ್​ಕುಮಾರ್ ಟ್ವೀಟ್: ಸಿನಿಮಾ ಹಾಲ್​ ಭರ್ತಿಯಾಗುವಷ್ಟು ಪ್ರೇಕ್ಷಕರು ಬರಲು ಅವಕಾಶ ಬೇಕು

Published On - 4:33 pm, Wed, 3 February 21