ನಿವೃತ್ತಿ ಪಿಂಚಣಿಗೆ EPS ಮತ್ತು NPFನಲ್ಲಿ ಯಾವುದು ಉತ್ತಮ?
ಖಾಸಗಿ ವಲಯದ ಉದ್ಯೋಗಿಗಳು ನಿವೃತ್ತಿಯ ನಂತರದ ಪಿಂಚಣಿಗಾಗಿ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ನೌಕರರ ಭವಿಷ್ಯ ನಿಧಿ (ಇಪಿಎಫ್), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಫಂಡ್‌ಗಳ ಮೇಲೆ ಅವಲಂಬಿತರಾಗಿರುತ್ತಾರೆ.
ನವದೆಹಲಿ: ಖಾಸಗಿ ವಲಯದ ಉದ್ಯೋಗಿಗಳು ನಿವೃತ್ತಿಯ ನಂತರದ ಪಿಂಚಣಿಗಾಗಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ನೌಕರರ ಭವಿಷ್ಯ ನಿಧಿ (ಇಪಿಎಫ್), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಫಂಡ್‌ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಪಿಪಿಎಫ್, ಇಪಿಎಫ್ ಮತ್ತು ಎನ್‌ಪಿಎಸ್ ನಿವೃತ್ತಿ ಪಿಂಚಣಿಯ ಸಾಮಾನ್ಯ ಮಾರ್ಗಗಳಾಗಿದ್ದರೆ, ಇವುಗಳಲ್ಲಿ ಪಿಪಿಎಫ್ ಮತ್ತು ಇಪಿಎಫ್ ಮಾತ್ರ ತೆರಿಗೆ ಮುಕ್ತ ಆದಾಯವನ್ನು ನೀಡುತ್ತವೆ. ಆದರೆ ಪಿಪಿಎಫ್ನಲ್ಲಿ ಒಬ್ಬರು ಒಂದು ವರ್ಷದಲ್ಲಿ 1.5 ಲಕ್ಷ ರೂ. ಗಿಂತ ಹೆಚ್ಚು ಹೂಡಿಕೆ ಮಾಡಲು ಸಾಧ್ಯವಿಲ್ಲ.
ಇಪಿಎಫ್ ಮತ್ತು ಎನ್‌ಪಿಎಸ್ ನಿವೃತ್ತಿ ನಂತರದ ಪಿಂಚಣಿಗೆ ಉತ್ತಮ ಆಯ್ಕೆಗಳಾಗಿವೆ. ಎನ್‌ಪಿಎಸ್‌ನಲ್ಲಿ ಆದಾಯದ ಶೇ 60ರಷ್ಟು ಮಾತ್ರ ತೆರಿಗೆ ಮುಕ್ತ ಘಟಕವಾಗಿ ಹಿಂಪಡೆಯಬಹುದಾಗಿದೆ.
ಕೇಂದ್ರ ಬಜೆಟ್ 2021-22ರಲ್ಲಿ, ಇಪಿಎಫ್ ಬಡ್ಡಿಯನ್ನು ಒಂದು ವರ್ಷದಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚಿನ ತೆರಿಗೆ ವಿಧಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ನಿಯಮ ಜಾರಿಗೆ ಬಂದ ನಂತರ, ಹೆಚ್ಚಿನ ಆದಾಯ ಗಳಿಸುವವರು ಇಪಿಎಫ್ಅನ್ನು ಆಯ್ಕೆ ಮಾಡಿಕೊಳ್ಳುವುದು ಕಡಿಮೆಯಾಗಬಹುದು.
ಎನ್‌ಪಿಎಸ್, ಇಪಿಎಫ್‌ಗಿಂತ ಹೆಚ್ಚಿನ ಲಾಭವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದೆ. ಎನ್‌ಪಿಎಸ್ ಹೂಡಿಕೆದಾರರು ಇಕ್ವಿಟಿ, ಕಾರ್ಪೊರೇಟ್ ಸಾಲ, ಸರ್ಕಾರಿ ಬಾಂಡ್ ಮತ್ತು ಪರ್ಯಾಯ ಆಸ್ತಿ ನಿಧಿ ಎಂಬುದಾಗಿ ನಾಲ್ಕು ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ, ಇಪಿಎಫ್ ಹೂಡಿಕೆದಾರರು ಯಾವುದೇ ಆಯ್ಕೆಯನ್ನು ಹೊಂದಿರುವುದಿಲ್ಲ.
ಎನ್‌ಪಿಎಸ್ ಮತ್ತು ಇಪಿಎಫ್ ಎರಡೂ ಕೂಡಾ ತನ್ನದೇ ಆದ ಅರ್ಹತೆ ಮತ್ತು ಅನರ್ಹತೆಗಳನ್ನು ಹೊಂದಿದೆ. ಪ್ರತಿವರ್ಷ ಎನ್‌ಪಿಎಸ್‌ನಲ್ಲಿ ಹೆಚ್ಚಿನ ಆದಾಯ ಗಳಿಸಬಹುದಾಗಿದೆ.