ಗಣಿನಾಡಿನಲ್ಲಿ ಎರಿತಾತಯ್ಯ ಮಹಿಮೆ ಸಿನಿಮಾ ಚಿತ್ರೀಕರಣ: ಪೊಷಕರ ಪಾತ್ರದಲ್ಲಿ ಗ್ರಾಮಸ್ಥರು

ಚಿತ್ರಕಥೆ, ಹಾಡು, ಸಂಭಾಷಣೆ, ಸಾಹಿತ್ಯ ರಚನೆ ಹಾಗೂ ಚಿತ್ರ ನಿರ್ದೇಶನದ ಜವಾಬ್ದಾರಿಯನ್ನ ಬಿ.ಎ.ಪುರುಷೋತ್ತಮ ಓಂಕಾರ ಅವರು ಹೊತ್ತಿದ್ದು, ಕಳೆದ 3 ದಿನಗಳಿಂದಲೂ ಈ ಎರಿತಾತನ ಮಹಿಮೆ ಎಂಬ ಸಿನಿಮಾ ಶೂಟಿಂಗ್ ಸದ್ದಿಲ್ಲದೇ ಚೆಳ್ಳ ಗುರ್ಕಿ ಎರಿತಾತನ ಸನ್ನಿಧಿಯಲ್ಲಿ ನಡೆಯುತ್ತದೆ.

ಗಣಿನಾಡಿನಲ್ಲಿ ಎರಿತಾತಯ್ಯ ಮಹಿಮೆ ಸಿನಿಮಾ ಚಿತ್ರೀಕರಣ: ಪೊಷಕರ ಪಾತ್ರದಲ್ಲಿ ಗ್ರಾಮಸ್ಥರು
ಎರಿತಾತನ ಮಹಿಮೆ ಸಿನಿಮಾ ತಂಡ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2021 | 9:17 PM

ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶದ ಗಡಿಭಾಗಕ್ಕೆ ಅಂಟಿಕೊಂಡಿರುವ ಚೆಳ್ಳಗುರ್ಕಿ ಎರಿತಾತನ ಸನ್ನಿಧಿಯಲ್ಲಿ ಗಂಗಾ ಬ್ಯಾನರ್ ಅಡಿಯಲ್ಲಿ ಚೆಳ್ಳಗುರ್ಕಿ ಎರಿತಾತಯ್ಯ ಮಹಿಮೆ ಎಂಬ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರು ಎರಿತಾತನ ಪಾತ್ರದಲ್ಲಿ ಕಾಣಿಸಿ ಕೊಂಡು ವಿಶೇಷ ಗಮನ ಸೆಳೆದಿದ್ದಾರೆ.

ಚಿತ್ರಕಥೆ, ಹಾಡು, ಸಂಭಾಷಣೆ, ಸಾಹಿತ್ಯ ರಚನೆ ಹಾಗೂ ಚಿತ್ರ ನಿರ್ದೇಶನದ ಜವಾಬ್ದಾರಿಯನ್ನ ಬಿ.ಎ.ಪುರುಷೋತ್ತಮ ಓಂಕಾರ ಅವರು ಹೊತ್ತಿದ್ದು, ಕಳೆದ 3 ದಿನಗಳಿಂದಲೂ ಈ ಎರಿತಾತನ ಮಹಿಮೆ ಸಿನಿಮಾ ಶೂಟಿಂಗ್ ಸದ್ದಿಲ್ಲದೇ ಚೆಳ್ಳ ಗುರ್ಕಿ ಎರಿತಾತನ ಸನ್ನಿಧಿಯಲ್ಲಿ ನಡೆಯುತ್ತದೆ. ಈ ಸಿನಿಮಾದಲ್ಲಿ ರಂಗಭೂಮಿ ಕಲಾವಿದ ರಮೇಶಗೌಡ ಪಾಟೀಲರು ಸ್ಥಳೀಯ ಕಲಾವಿದರನ್ನ ಪೋಷಕ ಹಾಗೂ ಸಹ ಪೋಷಕ ನಟರನ್ನಾಗಿ ಬಳಸಿಕೊಂಡಿದ್ದಾರೆ.

ಮುಂದಿನ 35 ದಿನಗಳ ಕಾಲ ಈ ಎರಿತಾತನ ಮಹಿಮೆ ಸಿನಿಮಾದ ಚಿತ್ರೀಕರಣ ನಡೆಯಲಿದ್ದು, ಇದೊಂದು ಧಾರ್ಮಿಕ ಚರಿತ್ರೆಯ ಹಿನ್ನಲೆಯುಳ್ಳ ಕಥೆಯಾಗಿದೆ.‌‌ ಕೇವಲ‌ ಕಮರ್ಷಿಯಲ್ ಆಧಾರಿತ ಚಿತ್ರಗಳು ಮಾಡುವುದರ ಜೊತೆಗೆ ಆಗಾಗ, ಇಂತಹ ಧಾರ್ಮಿಕ ಚರಿತ್ರೆಯನ್ನಾಧರಿಸಿದ ಸಿನಿಮಾ ಮಾಡುವುದು ಒಂದು ರೀತಿಯ ಸಂತೋಷವನ್ನು ಮನಸ್ಸಿಗೆ ನೀಡುತ್ತದೆ ಎಂದು ಚಿತ್ರ ನಿರ್ದೇಶಕ ಬಿ.ಎ.ಪುರುಷೋತ್ತಮ ಓಂಕಾರ ತಿಳಿಸಿದ್ದಾರೆ.

film shooting

ಎರಿತಾತಯ್ಯ ಮಹಿಮೆ ಸಿನಿಮಾ ಚಿತ್ರೀಕರಣ

ಕನ್ನಡ ಚಲನಚಿತ್ರ ರಂಗದಲ್ಲಿ ಈವರೆಗೆ ಅಂದಾಜು 360ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾನು ನಟನಾಗಿ ನಟಿಸಿರುವೆ. ಅದರಲ್ಲೂ ಈ ಪಾತ್ರ ಬಹಳ ಅಚ್ಚುಮೆಚ್ಚಿನ ಪಾತ್ರವಾಗಿದೆ.‌ ಕರ್ನಾಟಕ-ಆಂಧ್ರ ಪ್ರದೇಶದ ಗಡಿಭಾಗದ ಜನರ ಆರಾಧ್ಯ ದೈವ ಎರಿತಾತನವರ ಪಾತ್ರದಲ್ಲಿ ನಟಿಸುವುದು ಎಂದರೆ ಬಹಳ ದೊಡ್ಡ ಮಾತು.‌ ಇಂತಹ ಪಾತ್ರವನ್ನ ನಿರ್ವಹಿಸುವ ಜವಾಬ್ದಾರಿ ನನಗೆ ಸಿಕ್ಕಿದೆ ಎಂದು ಹಿರಿಯ ನಟ ಜೆ.ಕೆ.ಶ್ರೀನಿವಾಸ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಗಡಿ- ಗಣಿನಾಡಿನ ಆರಾಧ್ಯದೈವ ಎರಿತಾತನವರ ಮಹಿಮೆ ಸಿನಿಮಾ ಮಾಡುವುದು ನನಗಂತೂ ಬಹಳಷ್ಟು ಖುಷಿ ತಂದಿದೆ.‌ ಕನ್ನಡ ಚಲನಚಿತ್ರ ರಂಗದ ಹಿರಿಯ ನಟರು ಈ ಸಿನಿಮಾದ ಚಿತ್ರೀಕರಣಕ್ಕೆ ಸನ್ನಿಧಿಗೆ ಬಂದು ಸಿನಿಮಾ ಚಿತ್ರೀಕರಣ ಮಾಡುವುದೇ ದೊಡ್ಡದು ಎಂದು ಎರಿತಾತ ಜೀವ ಸಮಾಧಿ ಟ್ರಸ್ಟ್​ನ ಅಧ್ಯಕ್ಷ ಬಾಳನಗೌಡ ತಿಳಿಸಿದ್ದಾರೆ.

Telugu Film Chamber Of Commerce ಕನ್ನಡ ಸಿನಿಮಾಗಳ ರಿಲೀಸ್​ಗೆ ಯಾವುದೇ ಅಡ್ಡಿ ಇಲ್ಲ; ತೆಲುಗು ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸ್ಪಷ್ಟನೆ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು