ಹಂಪಿ ವಿಶ್ವವಿದ್ಯಾಲಯದಲ್ಲಿ ಜಕಣಾಚಾರಿ ಅಧ್ಯಯನ ಪೀಠ ಸ್ಥಾಪನೆ: ಸಿದ್ದರಾಮಯ್ಯ ಭರವಸೆ
ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಂಪಿ ವಿಶ್ವವಿದ್ಯಾಲಯದಲ್ಲಿ ಜಕಣಾಚಾರಿ ಅಧ್ಯಯನ ಪೀಠ ಸ್ಥಾಪನೆಯ ಭರವಸೆ ನೀಡಿದರು. ವಿಶ್ವಕರ್ಮ ಸಮುದಾಯದ ಸ್ವಾಮೀಜಿ ಮಠಕ್ಕೆ ಸಹಾಯ ಕೇಳಿದ್ದಾರೆ. ಸರ್ಕಾರದ ವತಿಯಿಂದ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದರು.
ಬೆಂಗಳೂರು, ಜ.1: ಹಂಪಿ ವಿಶ್ವವಿದ್ಯಾಲಯದಲ್ಲಿ ಜಕಣಾಚಾರಿ ಅಧ್ಯಯನ ಪೀಠ (Jakanachari Study Centre) ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಿಗೆ ಶುಭಾಶಯ ಕೋರಿದರು.
ಇತಿಹಾಸವನ್ನು ತಿರುಚುವ ಕೆಲಸವನ್ನ ಕೆಲವರು ಮಾಡುತ್ತಾರೆ. ರಾಜ್ಯದ ಪ್ರತಿಯೊಬ್ಬ ಇತಿಹಾಸಕಾರರ ಬಗ್ಗೆ ಅಧ್ಯಯನ ಆಗಬೇಕು. ಹೀಗಾಗಿ ಹಂಪಿ ವಿವಿಯಲ್ಲೇ ಜಕಣಾಚಾರಿ ಅಧ್ಯಯನ ಪೀಠ ಮಾಡೋಣ. ವಿಶ್ವಕರ್ಮ ಅಭಿವೃದ್ಧಿ ನಿಗಮ ನಾವೇ ಮಾಡಿದ್ದು. ಅಧ್ಯಯನ ಪೀಠ ಕೂಡ ಮಾಡೋಣ ಎಂದು ಸ್ವಾಮೀಜಿಗೆ ಭರವಸೆ ನೀಡಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್: ಆರ್.ಅಶೋಕ್ ವಾಗ್ದಾಳಿ
ಜಾತಿ ರಹಿತ, ವರ್ಗ ರಹಿತವಾದ ಸಮ ಸಮಾಜ ನಿರ್ಮಾಣ ನಮ್ಮ ಗುರಿ. ವಿಶ್ವಕರ್ಮ ಸಮಾಜದ ಜೊತೆ ನಾವು ಇರುತ್ತೇವೆ. ವಿಶ್ವಕರ್ಮ ಸಮುದಾಯದ ಸ್ವಾಮೀಜಿ ಮಠಕ್ಕೆ ಸಹಾಯ ಕೇಳಿದ್ದಾರೆ. ಸರ್ಕಾರದ ವತಿಯಿಂದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ ಅವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಮಹಾನ್ ವ್ಯಕ್ತಿಗಳ ಜೀವನ ಸಾಧನೆಗಳು, ಆದರ್ಶಗಳನ್ನು ಇಂದಿನ ತಲೆಮಾರು ಮೈಗೂಡಿಸಿಕೊಳ್ಳಬೇಕಾದರೆ ಅವರ ಬಗ್ಗೆ ಅಧ್ಯಯನಗಳು ನಡೆಯಬೇಕು. ಈ ಉದ್ದೇಶದಿಂದ ವಿಶ್ವಕರ್ಮ ಅಧ್ಯಯನ ಪೀಠ ಸ್ಥಾಪಿಸಲು ನಿರ್ಧರಿಸಲಾಗಿದೆ. – ಮುಖ್ಯಮಂತ್ರಿ @siddaramaiah #ವಿಶ್ವಕರ್ಮ pic.twitter.com/Vn9lQWdHAm
— CM of Karnataka (@CMofKarnataka) January 1, 2024
ಜಕಣಾಚಾರಿ ಕಾಲ್ಪನಿಕ ವ್ಯಕ್ತಿ ಎಂದು ಕೆಲವರು ಹೇಳುತ್ತಾರೆ, ಅದು ಸುಳ್ಳು. ಜಕಣಾಚಾರಿ ಎಷ್ಟು ಎತ್ತರಕ್ಕೆ ಬೆಳೆದಿದ್ದರು ಎಂದು ವಿಶ್ವಕರ್ಮ ಸಮುದಾಯಕ್ಕೆ ತಿಳಿಯಬಾರದು ಎಂದು ಹೀಗೆ ಹೇಳುತ್ತಾರೆ ಎಂದರು. ಸರ್ಕಾರ ಇವತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಕಣಾಚಾರಿ ಸಂಸ್ಮರಣ ದಿನಾಚರಣೆ ಆಚರಣೆ ಮಾಡುತ್ತಿದೆ. ಎಲ್ಲ ಜಯಂತಿಗಳನ್ನು ಕರ್ನಾಟಕ ರಾಜಧಾನಿ ಬೆಂಗಳೂರಲ್ಲೇ ಆಚರಣೆ ಮಾಡಬೇಕು ಅಂತ ಹೇಳಿ ಆಚರಣೆ ಮಾಡುತ್ತಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ