ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಪೊಲೀಸರ ದಾಳಿ.. ಮುಂದೇನಾಯ್ತು?
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗ್ರಾಮಗಳಲ್ಲಿ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ, 100 ಲೀಟರ್ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ.
ರಾಯಚೂರು: ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿದ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಗ್ರಾಮಗಳಲ್ಲಿ ನಡೆದಿದ್ದು, 100 ಲೀಟರ್ ಕಳ್ಳಭಟ್ಟಿಯನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ.
ಕಳ್ಳಭಟ್ಟಿ ತಯಾರಿಸುವುದು ಕಾನೂನು ಉಲ್ಲಂಘನೆ ಆದರೂ ಅಲ್ಕೋಡ ಹಾಗೂ ಯಲದೊಡ್ಡಿ ಗ್ರಾಮಗಳಲ್ಲಿ ಇದನ್ನು ತಯಾರಿಸುತ್ತಿದ್ದರು. ಇದನ್ನು ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ 150 ಕೆಜಿ ಕೊಳೆತ ಬೆಲ್ಲ ಮತ್ತು 370 ಲೀಟರ್ ಬೆಲ್ಲದ ಕೊಳೆಯ ಜೊತೆಗೆ 100 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ನಾಶಪಡಸಿದ್ದಾರೆ. ಕಳ್ಳಭಟ್ಟಿ ತಯಾರಿಸುತ್ತಿದ್ದ ಓರ್ವ ವ್ಯಕ್ತಿ ಪರಾರಿಯಾಗಿದ್ದು, ಮಾನ್ವಿ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬಕಾರಿ ಪೊಲೀಸರ ದಾಳಿ:
ಮದ್ಯಪ್ರಿಯರೇ ಎಚ್ರಾ.. ಕಲಬೆರಕೆ ಮದ್ಯ ಮಾರಾಟ, ಬಾಟಲಿಗಳು ಸೀಜ್! ಎಲ್ಲಿ?
Published On - 10:35 am, Sun, 20 December 20