TV9 Byelection Exit Poll: ಬೆಳಗಾವಿಯಲ್ಲಿ ಬಿಜೆಪಿಯ ಮಂಗಳಾ ಸುರೇಶ್​ ಅಂಗಡಿಗೆ ಗೆಲುವಿನ ಸಾಧ್ಯತೆ

| Updated By: Digi Tech Desk

Updated on: Apr 29, 2021 | 7:16 PM

Belagavi Byelection Exit Poll: ಏಪ್ರಿಲ್​ 17 ರಂದು ಲೋಕಸಭಾ ಉಪಚುನಾವಣೆ ನಡೆದಿತ್ತು. ಮತ ಎಣಿಕೆ ರವಿವಾರ ನಡೆಯಲಿದೆ. ಟಿವಿ9 ನಡೆಸಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ಮಂಗಳಾ ಸುರೇಶ್​ ಅಂಗಡಿ ಗೆಲ್ಲುವ ಸಾಧ್ಯತೆ ಕಾಣುತ್ತಿದೆ.

TV9 Byelection Exit Poll: ಬೆಳಗಾವಿಯಲ್ಲಿ ಬಿಜೆಪಿಯ ಮಂಗಳಾ ಸುರೇಶ್​ ಅಂಗಡಿಗೆ ಗೆಲುವಿನ ಸಾಧ್ಯತೆ
ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ
Follow us on

ಬೆಳಗಾವಿ: ಏಪ್ರಿಲ್ 17ರಂದು ನಡೆದಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ರವಿವಾರದಂದು ನಡೆಯಲಿದೆ. ಈ ನಡುವೆ ಟಿವಿ9 ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಮಂಗಳಾ ಸುರೇಶ್​ ಅಂಗಡಿ ಗೆಲ್ಲುವ ಸಾಧ್ಯತೆ ಕಾಣುತ್ತಿದೆ.

ಬೆಳಗಾವಿಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಕಣದಲ್ಲಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿ ಹೋರಾಟ ನಡೆಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಚುನಾವಣೆ ಕಾವು ಹೇಗಿತ್ತೆಂದರೆ ಸ್ವತಃ ಬಿಜೆಪಿ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಚಾರದಿಂದ ಬಸವಳಿದು, ಇಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ದಿವಂಗತ ಸಚಿವ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ್ ಅಂಗಡಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವು ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿತ್ತು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2566 ಮತಗಟ್ಟೆಯಿದ್ದು. ಕ್ಷೇತ್ರದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ 41,535 ಮತದಾರರಿದ್ದಾರೆ. 12,290 7,925 ಸೇವಾ ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗಾವಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 18,07,250. ಈ ಪೈಕಿ 9,08,103 ಪುರುಷರು ಮತ್ತು 8,99,091 ಮಹಿಳೆಯರು ಇದ್ದಾರೆ. ಇವರ ಪೈಕಿ ಶೇ. 55 ಮಂದಿ ಮತ ಚಲಾಯಿಸಿದ್ದರು. ಈ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲಿ ಶೇ. 67ರಷ್ಟು ಮತದಾನವಾಗಿತ್ತು. ವಾಡಿಕೆಯಂತೆ ಇದೀಗ ಮತಗಟ್ಟೆ ಸಮೀಕ್ಷೆ ಎಕ್ಸಿಟ್​ ಪೋಲ್​ ರಿಸಲ್ಟ್​ ಹೊರಬಿದ್ದಿದೆ.

ಮತದಾನೋತ್ತರ ಸಮೀಕ್ಷೆಯಲ್ಲಿ ಯಾವೆಲ್ಲ ಪ್ರಶ್ನೆ ಕೇಳಲಾಗಿತ್ತು ಮತ್ತು ಅದಕ್ಕೆ ಜನ ಹೇಗೆ ಪ್ರತಿಕ್ರಿಯಿಸಿದರು ಎಂಬ ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು.

ಬೆಳಗಾವಿ ಲೋಕಸಭಾ ಕ್ಷೇತ್ರ ಉಪ ಚುನಾವಣೆ – ಎಕ್ಸಿಟ್ ಪೋಲ್ ಫಲಿತಾಂಶ

Q6 ಈ ಉಪ ಚುನಾವಣೆಯಲ್ಲಿ ಮತ ಹಾಕುವಾಗ ನೀವು ಪರಿಗಣಿಸಿದ ನಿರ್ಣಾಯಕ ಅಂಶ ಯಾವುದು ?
ಉತ್ತರ 1 ಮುಂದುವರಿಕೆ 48% 2 ಬದಲಾವಣೆ 37% 3 ಹೇಳೋಕಾಗಲ್ಲ 15%
Q7 ಈ ಉಪ ಚುನಾವಣೆಯಲ್ಲಿ ಮರಾಠ ವಿಚಾರ ನಿಮ್ಮ ಮೇಲೆ ಪ್ರಭಾವ ಬೀರಿದೆಯೇ?
ಉತ್ತರ 1 ಹೌದು 27% 2 ಇಲ್ಲ 59% 3 ಹೇಳೋಕಾಗಲ್ಲ 14%
Q8 ಈ ಉಪ ಚುನಾವಣೆಯಲ್ಲಿ ನಿಮ್ಮ ಪ್ರಕಾರ ಸಿಡಿ ಪ್ರಕರಣ ಯಾವ ಪಕ್ಷಕ್ಕೆ ಹೆಚ್ಚು ಹೊಡೆತ ಕೊಟ್ಟಿದೆ?
ಉತ್ತರ 1 ಬಿಜೆಪಿ 63% 2 ಕಾಂಗ್ರೆಸ್ 18% 3 ಇತರೆ 19%
Q9 ನಿಮಗೆ ಮೋದಿ ಸರ್ಕಾರದ ಕಾರ್ಯವೈಖರಿ ತೃಪ್ತಿ ತಂದಿದೆಯೆ?
ಉತ್ತರ 1 ಹೌದು 48% 2 ಇಲ್ಲ 37% 3 ಹೇಳೋಕಾಗಲ್ಲ 15%
Q10 ನೀವು ಯಾರಿಗೆ ಮತ ಹಾಕಿದ್ದೀರಿ?
ಉತ್ತರ 1 ಬಿಜೆಪಿ 46% 2 ಕಾಂಗ್ರೆಸ್ 40% 3 ಎಂಇಎಸ್ 7% 4 ಇತರೆ 7%

ಇದನ್ನೂ ಓದಿ: Mangli: ಮಸ್ಕಿಯಲ್ಲಿ ಮತಬೇಟೆಗಿಳಿದ ಮಂಗ್ಲಿ; ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ

ಇದನ್ನೂ ಓದಿ: ಜನರ ಜೀವ, ಜೀವನಕ್ಕಿಂತ ಇವರಿಗೆ ಉಪಚುನಾವಣೆಯೇ ಮುಖ್ಯ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಎಚ್​.ಡಿ.ಕುಮಾರಸ್ವಾಮಿ

(Exit poll held by TV9 suggests Mangala Suresh Angadi has better chance to win Belagavi LS bypoll)

Published On - 7:14 pm, Thu, 29 April 21