Mangli: ಮಸ್ಕಿಯಲ್ಲಿ ಮತಬೇಟೆಗಿಳಿದ ಮಂಗ್ಲಿ; ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ
Maski Bypoll 2021: ಮಸ್ಕಿ ಕ್ಷೇತ್ರದ ಅಡವಿಭಾವಿ ತಾಂಡಾದಲ್ಲಿ ಗಾಯಕಿ ಮಂಗ್ಲಿ ಮತಬೇಟೆ ನಡೆಸಿದ್ದಾಳೆ. ಈ ತಾಂಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯದ ಮತದಾರರಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮಂಗ್ಲಿ ವಿನಂತಿ ಮಾಡಿದ್ದಾಳೆ.

ರಾಯಚೂರು: ಮಸ್ಕಿಯ ಜನರಿಗೆ ಪ್ರಸಿದ್ಧ ಗಾಯಕಿ ಸತ್ಯವತಿ ರಾಥೋಡ್ ಅಲಿಯಾಸ್ ಮಂಗ್ಲಿಯನ್ನು ನೋಡುವ ಸೌಭಾಗ್ಯ ದೊರೆತಿದೆ. ‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಸಾವಿರಾರು ಜನರ ಹೃದಯ ಕದ್ದ ಗಾಯಕಿ ಏಪ್ರಿಲ್ 17ರಂದು ನಡೆಯಲಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಪ್ರಚಾರ ನಡಿಸಿದ್ದಾರೆ. ಮಸ್ಕಿ ಕ್ಷೇತ್ರದ ಅಡವಿಭಾವಿ ತಾಂಡಾದಲ್ಲಿ ಗಾಯಕಿ ಮಂಗ್ಲಿ ಮತಬೇಟೆ ನಡೆಸಿದ್ದಾರೆ. ತಾಂಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯದ ಮತದಾರರಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮಂಗ್ಲಿ ವಿನಂತಿ ಮಾಡಿದ್ದಾರೆ.. ಗಾಯಕಿ ಮಂಗ್ಲಿಯನ್ನು ನೋಡಲು ಅಭಿಮಾನಿಗಳು ಒಬ್ಬರ ಮೇಲೊಬ್ಬರು ಮುಗಿಬಿದ್ದರು.
ಮಂಗ್ಲಿ ಅವರ ಕಾರಿನ ಮೇಲೆ ಹೂ ಎರಚಿ ಜನರು ಸ್ವಾಗತಿಸಿದರು. ಮಂಗ್ಲಿ ಅವರಿದ್ದ ಕಾರು ಗ್ರಾಮ ಪ್ರವೇಶಿಸಿದಾಗ ಪಟಾಕಿ ಹೊಡೆದು ಸಂಭ್ರಮಿಸಿದರು. ಮೊದಲು ನೆರೆದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯ ಕೋರಿದ ಅವರು, ಎಲ್ಲರಿಗೂ ಹೊಸ ವರ್ಷದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸಿದರು. ನಂತರ ಬಿಜೆಪಿ ಅಭ್ಯರ್ಥಿ ಪ್ರತಾಪ್ಗೌಡ ಪಾಟೀಲ್ಗೆ ಮತ ಹಾಕುವಂತೆ ವಿನಂತಿ ಮಾಡಿದ್ದಾರೆ.
20ರಿಂದ 25 ಸಾವಿರ ಮತಗಳಿಂದ ಗೆಲ್ಲಿಸಿ ಕನ್ನಡದಲ್ಲೇ ‘ಕಣ್ಣು ಹೊಡಿಯಾಕ..ಮೊನ್ನೆ ಕಲ್ತಾನಿ..’ ಹಾಡು ಹೇಳಿದ ಅವರ ಹಾಡಿಗೆ ನೆರೆದ ಜನಸ್ತೋಮ ಭರ್ಜರಿ ಪ್ರತಿಕ್ರಿಯೆ ನೀಡಿತು. ಪ್ರತಾಪ್ಗೌಡ ಪಾಟೀಲ್ ಅವರಿಗೆ ತಾವೆಲ್ಲರೂ ಬೆಂಬಲ ಕಟ್ಟು ಗೆಲ್ಲಿಸಬೇಕು. ಸುಮಾರು 20ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ, ಜಯಭೇರಿ ಭಾರಿಸಿ ಎಂದು ಇದೇ ವೇಳೆ ವಿನಂತಿಸಿಕೊಂಡಿದ್ದಾರೆ.

ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಖ್ಯಾತ ಗಾಯಕಿ ಮಸ್ಕಿ ಬಿಜೆಪಿ ಪರ ಮತಯಾಚಿಸಿದರು. ಮಂಗ್ಲಿ ಇದ್ದ ಕಾರಿನ ಮೇಲೆ ಹೂ ಎರಚಿ ಜನರು ಸ್ವಾಗತಿಸಿದರು.
Published On - 6:45 pm, Tue, 13 April 21



