ಪಡಿತರ ವಿತರಕರ ಪ್ರತಿಭಟನೆ: ನ.7ರ ವರೆಗೆ ನ್ಯಾಯಬೆಲೆ ಅಂಗಡಿ ಬಂದ್​

ಅಕ್ಕಿ ಬದಲು ಫಲಾನುಭವಿಗಳಿಗೆ ಹಣ ನೀಡುವುದನ್ನು ವಿರೋಧಿಸಿ ನ್ಯಾಯಬೆಲೆ ವಿತರಕರ ಸಂಘ ಅಕ್ಟೋಬರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ರಾಜ್ಯಾದ್ಯಂತ 20,350 ನ್ಯಾಯಬೆಲೆ ಅಂಗಡಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದವು. ಇದೀಗ ಮತ್ತೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ.

ಪಡಿತರ ವಿತರಕರ ಪ್ರತಿಭಟನೆ: ನ.7ರ ವರೆಗೆ ನ್ಯಾಯಬೆಲೆ ಅಂಗಡಿ ಬಂದ್​
ನ್ಯಾಯಬೆಲೆ ಅಂಗಡಿ
Follow us
Poornima Agali Nagaraj
| Updated By: ವಿವೇಕ ಬಿರಾದಾರ

Updated on:Nov 02, 2023 | 3:03 PM

ಬೆಂಗಳೂರು ನ.02: ಫೇರ್‌ಪ್ರೈಸ್ ಷಾಪ್ ಡೀಲರ್ಸ್ ಅಸೋಸಿಯೇಷನ್ ​​ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟು ನವೆಂಬರ್ 7 ರವರೆಗೆ ಪಡಿತರ ವಿತರಣೆ (Ration Distribution) ಮಾಡದಿರಲು ನಿರ್ಧರಿಸಿದೆ. ನವೆಂಬರ್ 7 ರಂದು ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನ್ಯಾಯಬೆಲೆ ಅಂಗಡಿಕಾರರು ನಿರ್ಧರಿಸಿದ್ದಾರೆ. ಸರಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸಬೇಕು ಎಂಬುದು ನ್ಯಾಯಬೆಲೆ ಅಂಗಡಿ (Fair Price Shop) ನಡೆಸುವವರ ಪ್ರಮುಖ ಬೇಡಿಕೆಯಾಗಿದೆ.

ಬೇಡಿಕೆಗಳು ಏನು?

  1. ಇ-ಕೆವೈಸಿ (Know Your Customer) ಕೆಲಸ ನಿರ್ವಹಿಸಲು ಸರ್ಕಾರವು 23.75 ಕೋಟಿ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು.
  2. ಗೋವಾ, ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಹೇಗೆ ನೀಡುತ್ತಿವೆಯೋ ಹಾಗೆಯೇ ಕರ್ನಾಟಕದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಕಮಿಷನ್ ಹಣವನ್ನು ನೀಡಬೇಕು.
  3.  ಪ್ರತಿ ಕ್ವಿಂಟಾಲ್ ಅಕ್ಕಿ ವಿತರಿಸಲು 250 ರೂಪಾಯಿ ಕಮಿಷನ್ ನೀಡಬೇಕು
  4.  ಅಂಗಡಿ ನಿರ್ವಾಹಕರು ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು
  5. ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿ ಜಿಲ್ಲೆಗೂ ಪ್ರತ್ಯೇಕ ಸರ್ವರ್ ಸೆಂಟರ್ ಕಲ್ಪಿಸಬೇಕು
  6. 5 ಕೆಜಿ ಅಕ್ಕಿ ಹಣವನ್ನು ಡಿಬಿಟಿ ಮಾಡುವ ಬದಲು ಬೇರೆ ಆಹಾರ ಪದಾರ್ಥಗಳನ್ನು ನೀಡಬೇಕು
  7. DBT ಮೂಲಕವೇ ಕಮಿಷನ್ ಹಣವನ್ನು ಪಡಿತರ ವಿತರಕರಿಗೆ ನೀಡಬೇಕು

ಇದನ್ನೂ ಓದಿ: ಅಕ್ಕಿ ಬದಲು ಹಣ ನೀಡುವುದರ ವಿರುದ್ಧ ಸಿಡಿದ ಪಡಿತರ ವಿತರಕರು 

ಅಕ್ಕಿ ಬದಲು ಫಲಾನುಭವಿಗಳಿಗೆ ಹಣ ನೀಡುವುದನ್ನು ವಿರೋಧಿಸಿ ನ್ಯಾಯಬೆಲೆ ವಿತರಕರ ಸಂಘ ಅಕ್ಟೋಬರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ರಾಜ್ಯಾದ್ಯಂತ 20,350 ನ್ಯಾಯಬೆಲೆ ಅಂಗಡಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದವು. ಇದೀಗ ಮತ್ತೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ.

ನ್ಯಾಯಬೆಲೆ ಅಂಗಡಿಯ ನಿರ್ವಾಹಕರು ಪ್ರತಿಭಟನೆ ಏಕೆ?

ರಾಜ್ಯದಲ್ಲಿ 4.30 ಕೋಟಿ ಫಲಾನುಭವಿಗಳು ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅರ್ಹರಾಗಿದ್ದಾರೆ. ವರದಿಗಳ ಪ್ರಕಾರ, ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯನ್ನು ವಿತರಿಸಲು ಸರ್ಕಾರಕ್ಕೆ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಪ್ರತಿ ಫಲಾನುಭವಿಗೆ 10 ಕೆಜಿ ನೀಡುವಷ್ಟು ಅಕ್ಕಿ ಸರ್ಕಾರಕ್ಕೆ ಸಿಗಲಿಲ್ಲ. ನೇರ ವರ್ಗಾವಣೆ (ಡಿಬಿಟಿ) ವಿಧಾನದ ಮೂಲಕ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ 170 ರೂ.ಗಳನ್ನು ಸರ್ಕಾರ ನೀಡುತ್ತಿದೆ.

ಒಬ್ಬ ಫಲಾನುಭವಿಗೆ 1 ಕೆಜಿ ಅಕ್ಕಿಯನ್ನು ವಿತರಿಸಲು ಪಡಿತರ ವಿತರಕರು 1.24 ರೂ. ಕಮಿಷನ್ ಪಡೆಯುತ್ತಾರೆ. ಸರ್ಕಾರವು ಅಕ್ಕಿಯ ಬದಲು ಫಲಾನುಭವಿಗಳಿಗೆ ಹಣವನ್ನು ನೀಡಿದರೆ ಪಡಿತರ ವಿತರಕರು ಈ ಕಮಿಷನ್ ಪಡೆಯುವುದಿಲ್ಲ. ಡಿಬಿಟಿ ಮೂಲಕ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಲು ಸರ್ಕಾರಕ್ಕೆ 733 ಕೋಟಿ ರೂ. ಬೇಕಾಗುತ್ತದೆ. ಸರ್ಕಾರ ಜನರಿಗೆ ಅಕ್ಕಿ ನೀಡಿದರೆ, ಪಡಿತರ ವಿತರಕರಿಗೆ ತಿಂಗಳಿಗೆ 856 ಕೋಟಿ ರೂ. ಕಮಿಷನ್ ಹಣ ನೀಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Thu, 2 November 23

ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್