AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದಿಂದ ಹೊಸ ಪ್ರಯೋಗ, ‌ಆಹಾರ ಇಲಾಖೆಯಿಂದ ಮನೆ ಮನೆಗೆ ಪಡಿತರ ಸರಬರಾಜು

ರಾಜ್ಯ ಸರ್ಕಾರ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಇನ್ಮುಂದೆ ಅಂಗವಿಕಲರು ಮತ್ತು 90 ವರ್ಷ ಮೇಲ್ಪಟ್ಟ ಬಿಪಿಎಲ್​ ಕಾರ್ಡ್​ದಾರರು ನ್ಯಾಯಬೆಲೆ ಅಂಗಡಿ ಪಾಳಿಯದಲ್ಲಿ ನಿಲ್ಲುವುದು ಅವಶ್ಯಕತೆ ಇಲ್ಲ. ಏಕೆಂದರೆ ಆಹಾರ ಇಲಾಖೆಯೇ ಸ್ವತಃ ಪಡಿತರವನ್ನು ಮನೆ ಮನೆ ತಲುಪಿಸಲು ನಿರ್ಧರಿಸಿದೆ.

ಸರ್ಕಾರದಿಂದ ಹೊಸ ಪ್ರಯೋಗ, ‌ಆಹಾರ ಇಲಾಖೆಯಿಂದ ಮನೆ ಮನೆಗೆ ಪಡಿತರ ಸರಬರಾಜು
ಪಡಿತರ
Poornima Agali Nagaraj
| Updated By: ವಿವೇಕ ಬಿರಾದಾರ|

Updated on:Oct 19, 2023 | 12:51 PM

Share

ಬೆಂಗಳೂರು ಅ.19: ಒಂದಡೆ ಸರ್ಕಾರದ ವಿರುದ್ಧ ಪಡಿತರ ವಿತರಕರು (Ration Distributors) ಸರ್ಕಾರದ ವಿರುದ್ಧ ಸಿಡಿದೆದ್ದರೇ ಮತ್ತೊಂದಡೆ ಆಹಾರ ಇಲಾಖೆ (Food Department) ಪ್ರಾಯೋಗಿಕವಾಗಿ ಮನೆ ಮನೆಗೆ ಪಡಿತರ ಸರಬರಾಜು ಮಾಡುತ್ತಿದೆ. ಹೌದು ಬಿಪಿಎಲ್​ ಕಾರ್ಡ್​​ ಹೊಂದಿದ ಅಂಗವಿಕಲರು, 90 ವರ್ಷ ಮೇಲ್ಪಟ್ಟ ಫಲಾನುಭವಿಗಳ ಮನೆಗಳಿಗೆ ಆಹಾರ ಇಲಾಖೆ ಪ್ರಾಯೋಗಿಕವಾಗಿ ಪಡಿತರ ಸರಬರಾಜು ಮಾಡುತ್ತಿದೆ.

ಆಹಾರ ಇಲಾಖೆ ಈಗಾಗಲೆ ಅಂಗವಿಕಲರು ಮತ್ತು 90 ವರ್ಷ ಮೇಲ್ಪಟ್ಟವರ ಮಾಹಿತಿ ಸಂಗ್ರಹಿಸಿದೆ. ಈ ಮನೆಗಳಿಗೆ ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಪಡಿತರ ನೀಡುತ್ತಿದೆ. ಈ ಬಗ್ಗೆ ಜನರ ಅಭಿಪ್ರಾಯ ತಿಳಿದ ನಂತರ ಅಧಿಕೃತವಾಗಿ ಜಾರಿ ಮಾಡಲಿದೆ. ಆಹಾರ ಇಲಾಖೆ ಮೊದಲು ಉಚಿತವಾಗಿ ಪಡಿತರ ಸರಬರಾಜು ಮಾಡಲು ನಿರ್ಧರಿಸಿದ್ದು, ನಂತರ 50 ರೂ. ದರ ನಿಗದಿ ಮಾಡಲು ಆಹಾರ ಇಲಾಖೆ ಪ್ಲ್ಯಾನ್​ ಮಾಡಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸದ ಕೊಡಲೇ ಅಧಿಕೃತವಾಗಿ ಹೋಂ ಡೆಲಿವರಿ ಆರಂಭವಾಗುತ್ತದೆ.

ಇದನ್ನೂ ಓದಿ: ಅಕ್ಕಿ ಬದಲು ಹಣ ನೀಡುವುದರ ವಿರುದ್ಧ ಸಿಡಿದ ಪಡಿತರ ವಿತರಕರು: ಇಂದು ರಾಜ್ಯಾದ್ಯಂತ ನ್ಯಾಯಬೆಲೆ‌ ಅಂಗಡಿಗಳು ಬಂದ್

ಸದ್ಯ ರಾಜ್ಯದೆಲ್ಲೆಡೆ ಹೋಮ್ ಡೆಲಿವರಿ ಆರಂಭವಾಗಿದೆ. ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಜನರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಾಳೆ ಈ ಕುರಿತಾಗಿ ಸಚಿವರೊಂದಿಗೆ ಸಭೆ ಇದೆ. ಸಭೆ ಬಳಿಕ ಸಚಿವರು ಈ ಕುರಿತಾಗಿ ಮಾಹಿತಿ ನೀಡಲಿದ್ದಾರೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಘ್ಯಾನೆಂದ್ರ ಕುಮಾರ್ ಹೇಳಿದರು.

ಇನ್ನು ಡಿಬಿಟಿ ಪ್ರೋಸೆಸ್ ಚೆನ್ನಾಗಿ ನಡೆಯುತ್ತಿದೆ. ನೆವೆಂಬರ್ ತಿಂಗಳಲ್ಲಿ ಒಟ್ಟು ಶೇ 94 ರಷ್ಟು ಡಿಬಿಟಿ ಆಗಿದೆ. ಅನ್ನಭಾಗ್ಯದ 10 ಕೆಜೆ ಅಕ್ಕಿಕೊಡಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಕ್ಕಿಸಿಗುವವರೆಗೂ ಡಿಬಿಟಿಯನ್ನ ಮುಂದುವರಿಸಲಾಗುತ್ತದೆ. ಸದ್ಯ ರೇಷನ್ ವಿತರಕರ ಸಂಘ ಕೊಟ್ಟಿರುವ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುತ್ತೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Thu, 19 October 23