ಬೆಂಗಳೂರು, ಮೇ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತರ ಹೆಸರಲ್ಲಿ ಫೇಕ್ ವಾಟ್ಸಾಪ್ ತೆರೆಯಲಾಗಿದೆ. 9428053334 ಸಂಖ್ಯೆಯಿಂದ ಅಧಿಕಾರಿಗಳಿಗೆ ತಪ್ಪು ಮಾಹಿತಿ ರವಾನೆ ಮಾಡಲಾಗುತ್ತಿದೆ. ಹೀಗಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Giri Nath) ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ನಕಲಿ ನಂಬರ್ನಿಂದ ಸಂದೇಶ ರವಾನೆ ಆಗುತ್ತಿದ್ದಂತೆ ಪಾಲಿಕೆ ಅಲರ್ಟ್ ಆಗಿದ್ದು, ನಕಲಿ ನಂಬರ್ನಿಂದ ಬರುವ ಸಂದೇಶಗಳಿಗೆ ಸ್ಪಂದನೆ ಮಾಡಬೇಡಿ. ಈ ನಂಬರ್ನಿಂದ ಕರೆ ಬಂದರೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಎಂದು ತಿಳಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರ ಹೆಸರು, ಪದನಾಮ ಹಾಗೂ ಭಾವಚಿತ್ರವನ್ನು ಅಪರಿಚಿತ ದೂರವಾಣಿ ಸಂಖ್ಯೆ: 9428053334 ಯಿಂದ ವ್ಯಾಟ್ಸಪ್ ಮೂಲಕ ಅಧಿಕಾರಿಗಳಿಗೆ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಅನಧಿಕೃತವಾಗಿ ಮುಖ್ಯ ಆಯುಕ್ತರ ಹೆಸರು, ಪದನಾಮ ಹಾಗೂ ಭಾವಚಿತ್ರವನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿರುತ್ತದೆ.
ಇದನ್ನೂ ಓದಿ: ಜನರಿಗೆ ಕೋಟಿ ಕೋಟಿ ರೂ. ಪಂಗನಾಮ: ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಮಾಜಿ ಪಿಎ ಅರೆಸ್ಟ್
ಈ ನಿಟ್ಟಿನಲ್ಲಿ ಪಾಲಿಕೆ ಮಾಹಿತಿ ತಂತ್ರಜ್ಞಾನ ವಿಭಾಗದ ಉಪ ಮುಖ್ಯ ಮಾಹಿತಿ ಅಧಿಕಾರಿಯಾದ ಶ್ರೀ ಪ್ರಭಾಕರ್ ರವರು ತಕ್ಷಣ ಸೈಬರ್ ಕ್ರೈಮ್‌ನಲ್ಲಿ ದೂರು ದಾಖಲಿಸಿದ್ದಾರೆ. ಪಾಲಿಕೆಯ ಅಧಿಕಾರಿಗಳು ಅಥವಾ ನಾಗರೀಕರು 9428053334 ಸಂಖ್ಯೆಯಿಂದ ವ್ಯಾಟ್ಸಪ್ ಮೂಲಕ ಬರುವ ಸಂದೇಶಗಳಿಗೆ ಸ್ಪಂದಿಸದಂತೆ ಮುಖ್ಯ ಆಯುಕ್ತರು ಕೋರಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಬಳಿಕ ಬಿಬಿಎಂಪಿ ಎಲೆಕ್ಷನ್? ಡಿಕೆ ಶಿವಕುಮಾರ್ ಆ ಸೂಚನೆಯಿಂದ ಮೂಡಿತು ಕುತೂಹಲ
ಈ ರೀತಿಯ ಸಂದೇಶಗಳು ಯಾರಿಗಾದರೂ ಬಂದಲ್ಲಿ ಅಥವಾ ಯಾವುದೇ ಅನುಮಾನಗಳಿದ್ದಲ್ಲಿ ಕೂಡಲೆ ಮುಖ್ಯ ಆಯುಕ್ತರ ಕಛೇರಿಗೆ ವರದಿ ಮಾಡುವಂತೆ ಅಥವಾ ಸೈಬರ್ ಕ್ರೈಮ್‌ಗೆ ದೂರು ನೀಡುವಂತೆ ವಿನಂತಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.