ಯಾದಗಿರಿ; ಪರಿಚಿತ ಮಹಿಳೆಯನ್ನು ಪಾಳುಬಿದ್ದ ಮನೆಗೆ ಕರೆತಂದು ಅತ್ಯಾಚಾರ, ಆರೋಪಿ ಅರೆಸ್ಟ್

ಯಾದಗಿರಿ ನಗರದ ಹೊರಭಾಗದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ನಡೆದಿದೆ. ಪಾಳು ಬಿದ್ದ ಮನೆಗೆ ಪರಿಚಿತ ವಿವಾಹಿತೆಯನ್ನು ಬೈಕ್​ನಲ್ಲಿ ಕರೆದೊಯ್ದು ಕಾಮುಕ ಹೇಮಂತ್ ಎಂಬಾತ ದುಷ್ಕೃತ್ಯ ಮೆರೆದಿದ್ದಾನೆ. ಶನಿವಾರ ರಾತ್ರಿ ಘಟನೆ ನಡೆದಿದ್ದು, ನಿತ್ರಾಣಗೊಂಡು ಮಹಿಳೆ ಪಾಳು ಮನೆಯಲ್ಲಿ ಬಿದ್ದಿದ್ದರು. ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಹಿಳೆಗೆ ಚಿಕಿತ್ಸೆ ನೀಡಲಾಗ್ತಿದೆ.

ಯಾದಗಿರಿ; ಪರಿಚಿತ ಮಹಿಳೆಯನ್ನು ಪಾಳುಬಿದ್ದ ಮನೆಗೆ ಕರೆತಂದು ಅತ್ಯಾಚಾರ, ಆರೋಪಿ ಅರೆಸ್ಟ್
ಸಾಂದರ್ಭಿಕ ಚಿತ್ರ
Updated By: ಆಯೇಷಾ ಬಾನು

Updated on: Aug 19, 2024 | 7:16 AM

ಯಾದಗಿರಿ, ಆಗಸ್ಟ್​.19: ಪರಿಚಿತ ಮಹಿಳೆಯನ್ನು ಪಾಳುಬಿದ್ದ ಮನೆಗೆ ಕರೆತಂದು ಅತ್ಯಾಚಾರ ಎಸಗಿರುವ ಘಟನೆ ಯಾದಗಿರಿ (Yadgir) ಹೊರವಲಯದಲ್ಲಿ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ತನಗೆ ಪರಿಚಯವಿದ್ದ ವಿವಾಹಿತ ಮಹಿಳೆಯನ್ನು ಬೈಕ್​ನಲ್ಲಿ ಪಾಳುಬಿದ್ದ ಮನೆಗೆ ಕರೆದುಕೊಂಡು ಬಂದ ಹೇಮಂತ್ ಎಂಬಾ ಆರೋಪಿ ವಿವಾಹಿತೆ ಎಂಬುವುದನ್ನೂ ಲೆಕ್ಕಿಸದೆ ಅತ್ಯಾಚಾರ ನಡೆಸಿ ದುಷ್ಕೃತ್ಯ ಮೆರೆದಿದ್ದಾನೆ.

ಶನಿವಾರ ರಾತ್ರಿ ಘಟನೆ ನಡೆದಿದ್ದು, ನಿನ್ನೆ ರಾತ್ರಿಯಿಂದ ನಿತ್ರಾಣಗೊಂಡು ಮಹಿಳೆ ಪಾಳು ಮನೆಯಲ್ಲೇ ಬಿದ್ದಿದ್ದರು. ನಂತರ ಸ್ಥಳೀಯರು ಮಹಿಳೆಯನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಹಿಳೆಗೆ ಚಿಕಿತ್ಸೆ ನೀಡಲಾಗ್ತಿದೆ. ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹೇಮಂತ್​ನನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ 2 ಗಂಟೆ‌ ಸುಮಾರಿಗೆ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಊಟದ ವೇಳೆ ಇಲಿ ಪಾಷಾಣ ಸ್ಪ್ರೇ! 20ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ

ಲೈಂಗಿಕ ದೌರ್ಜನ್ಯ ಆರೋಪ, 9 ಮಂದಿ ಅರೆಸ್ಟ್

ಮಹಿಳೆ, ಮಗನನ್ನು ಅಪಹರಿಸಿ ದೈಹಿಕ & ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸರು, ಇಬ್ಬರು ರೌಡಿಶೀಟರ್​ಗಳು ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ. ಕಳ್ಳತನ ಮಾಡ್ತಿದ್ದ ಮಹಿಳೆ ಮತ್ತು ಆಕೆಯ ಮಗನಿಗೆ ಹಣ ನೀಡುವಂತೆ ಬೆದರಿಸಿದ್ದಾರೆ. ಹಣ ನೀಡದಿದ್ದಾಗ ಅಪಹರಣ ಮಾಡಿ ಕೂಡಿ ಹಾಕಿ ದೈಹಿಕ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೇ, 2 ಲಕ್ಷ ಹಣ ಕೊಡುವಂತೆ ಕಿರುಕುಳ ನೀಡಿದ್ದಾರೆ ಅಂತಾ ಆರೋಪಿಸಿ ಮಹಿಳೆ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ರು. ಹೀಗಾಗಿ 9 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೌಲಾನಾ ಮೇಲೆ ಯುವಕರಿಂದ ಹಲ್ಲೆ

ಬಾಗಲಕೋಟೆಯ ಕಾಳಿದಾಸ ವೃತ್ತದ ಮಸೀದಿ ಮೌಲಾನಾ ಜಹಾಂಗೀರ್ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ನವನಗರ ಸೆಕ್ಟರ್ ನಂ. 4ರಲ್ಲಿ ಟೀ ಕುಡಿಯುತ್ತಿದ್ದವನ ಮೇಲೆ ಹಲ್ಲೆ ನಡೆದಿದ್ದು, ನವನಗರ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಸಮುದಾಯದವರು ಜಮಾವಣೆಗೊಂಡಿದ್ರು. ಹಲ್ಲೆಕೋರರ ಮೇಲೆ ಕೂಡಲೇ FIR ಹಾಕಿ ಬಂಧಿಸುವಂತೆ ಆಗ್ರಹಿಸಿದ್ರು. ಪ್ರಕರಣ ಸಂಬಂಧ ಕಾರ್ತಿಕ್, ಪ್ರೀತಮ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಮುಖ ಆರೋಪಿ ನಾಗರಾಜ್​ಗಾಗಿ ಶೋಧ ಮುಂದುವರಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:13 am, Mon, 19 August 24