ಹಾವೇರಿ: ಸಾಲಬಾಧೆಯಿಂದ ಬೇಸತ್ತು ದೊಡ್ಡಕೆರೆಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ. ಮಕರಿ ಗ್ರಾಮದ ಬಳಿ ವೀರಬಸಪ್ಪ ಹುಲ್ಮನಿ(43) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
11 ಎಕರೆ ಜಮೀನು ಹೊಂದಿದ್ದ ರೈತ ವೀರಬಸಪ್ಪ ಹುಲ್ಮನಿ ಕೃಷಿಗಾಗಿ ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳಿಂದ 10 ಲಕ್ಷ ರೂ. ಸಾಲಮಾಡಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾವು ಬೆಳೆದಿದ್ದ ಹತ್ತಿ ಮತ್ತು ಮೆಕ್ಕೆಜೋಳ ಹಾಳಾಗಿದ್ದರಿಂದ ವೀರಬಸಪ್ಪ ಬೇಸತ್ತಿದ್ದರು.
ಇವೆಲ್ಲದರಿಂದ ಮನನೊಂದ ರೈತ ಮಕರಿ ಗ್ರಾಮದ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡ್ರೆಸ್ ಕೇಳೋ ನೆಪದಲ್ಲಿ.. ಹೊಲದಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾದ ಕಿರಾತಕರು!
Published On - 10:44 pm, Mon, 1 February 21