ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಶಶಿಕಲಾ ವಾಸ್ತವ್ಯ.. ಸಂಬಂಧಿಕರು, ಬೆಂಬಲಿಗರ ಭೇಟಿ ನಿರಾಕರಿಸಿದ ಚಿನ್ನಮ್ಮ

ನಾಲ್ಕು ವರ್ಷಗಳ ಕಾಲ ನಾಲ್ಕು ಗೋಡೆಯ ಮಧ್ಯೆಯೆ ಕಾಲ ಕಳೆದಿದ್ದ ಚಿನ್ನಮ್ಮ ಆಸ್ವತ್ರೆಯಿಂದ ಬಿಡುಗಡೆಯಾಗಿ ಬಂದು ರೆಸಾರ್ಟ್ ಸೇರಿದ್ರು. ಇನ್ನೂ ರೆಸಾರ್ಟ್ನಲ್ಲಿ ಮೊದಲ ದಿನ ಕಳೆದ ತಮಿಳರ ಚಿನ್ನಮ್ಮ ಎರಡನೇ ದಿನವೂ ಒಂಟಿಯಾಗೆ ಕಾಲ ಕಳೆದಿದ್ದು, ಏನೆಲ್ಲ ಮಾಡಿದ್ರು ಅನ್ನೂ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ.

ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಶಶಿಕಲಾ ವಾಸ್ತವ್ಯ.. ಸಂಬಂಧಿಕರು, ಬೆಂಬಲಿಗರ ಭೇಟಿ ನಿರಾಕರಿಸಿದ ಚಿನ್ನಮ್ಮ
ವಿ.ಕೆ. ಶಶಿಕಲಾ
Ayesha Banu

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 10, 2021 | 3:05 PM

ದೇವನಹಳ್ಳಿ: ದಿವಂಗತ ಜಯಲಲಿತಾ ಆಪ್ತೆ ಜೈಲಿನಿಂದ ಬಿಡುಗಡೆಯಾಗಿ, ಕೊರೊನಾದಿಂದ ಗುಣಮುಖರಾಗಿ ಇದೀಗ ದೇವನಹಳ್ಳಿ ಬಳಿಯಿರುವ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. 7 ದಿನಗಳ ಕಾಲ ಹೋಂ ಕ್ವಾರಂಟೈನ್ ಇರಬೇಕಾಗಿರುವ ಹಿನ್ನೆಲೆಯಲ್ಲಿ ರೆಸಾರ್ಟ್‌ನಲ್ಲಿರುವ ವಿಲ್ಲಾದಲ್ಲಿ ಶಶಿಕಲಾ ತಂಗಿದ್ದಾರೆ.

ಚಿನ್ನಮ್ಮ ರೆಸಾರ್ಟ್‌ಗೆ ಆಗಮಿಸುತ್ತಿದ್ದಂತೆ ಸಂಬಂಧಿಕರು, ಆಪ್ತರು, ಬೆಂಬಲಿಗರು ಕುಶಲೋಪರಿ ವಿಚಾರಿಸಲು ಮುಂದಾದ್ರು. ಆದ್ರೆ ಯಾರ ಜತೆಯು ಮಾತನಾಡದೆ ನೇರವಾಗಿ ತಮಗಾಗಿ ಮೀಸಲಿಟ್ಟಿದ್ದ ವಿಲ್ಲಾಗೆ ತೆರಳಿದ ಶಶಿಕಲಾ ತಮ್ಮ ಕೊಠಡಿಯಲ್ಲಿ ಒಂಟಿಯಾಗಿ ಕಾಲ ಕಳೆದಿದ್ದಾರೆ.

ಇಂದು ತಮಿಳುನಾಡಿನ ಎಂಪಿಗಳ ಜೊತೆ ಮಾತುಕತೆ ಇಂದು ಒಂದಷ್ಟು ಆಪ್ತರ ಜೊತೆ ರೆಸಾರ್ಟ್‌ನಲ್ಲಿ ಚಿನ್ನಮ್ಮ ಚರ್ಚೆ ನಡೆಸುವ ಸಾಧ್ಯತೆಯಿದ್ದು, ತಮಿಳುನಾಡಿನ ಎಂಪಿ ಮತ್ತು ರಾಜಕೀಯ ನಾಯಕರು ಶಶಿಕಲಾರನ್ನ ಭೇಟಿಯಾಗುವ ಸಾಧ್ಯತೆಯಿದೆ. ಇನ್ನು ಬೃಹತ್ ಱಲಿ ಮೂಲಕ ತಮಿಳುನಾಡಿಗೆ ಎಂಟ್ರಿಕೊಡಲು ಶಶಿಕಲಾ ಒಂದಷ್ಟು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಒಟ್ನಲ್ಲಿ ನಾಲ್ಕು ವರ್ಷಗಳ ಬಳಿಕೆ ಜೈಲಿನಿಂದ ಹೊರಬಂದಿರುವ ಚಿನ್ನಮ್ಮ ಸೈಲೆಂಟಾಗಿ ರೆಸಾರ್ಟ್ ನಲ್ಲಿ ಕುಳಿತು ತನ್ನದೇ ಆದ ಲೆಕ್ಕಾಚಾರಗಳನ್ನ ಹಾಕ್ತಿದ್ದಾರೆ. ಚಿನ್ನಮ್ಮರ ಮುಂದಿನ ಹೆಜ್ಜೆ ಬಗ್ಗೆ ತಮಿಳುನಾಡಿನಲ್ಲಿ ಬಹಳ ಕುತೂಹಲ ಕೆರಳಿಸಿದೆ.

ಶಶಿಕಲಾ ನಟರಾಜನ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಅಮಾವಾಸ್ಯೆ ನಂತರ ತಮಿಳುನಾಡಿಗೆ ಗ್ರ್ಯಾಂಡ್ ಎಂಟ್ರಿ ನೀಡಲು ಸಿದ್ದತೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada