ನೂರಾರು ರೈತರಿಂದ ರಸ್ತೆತಡೆ: ಪೊಲೀಸರ ವಶಕ್ಕೆ ರೈತ ಮುಖಂಡರು
ರಸ್ತೆ ಮೇಲೆ ವಾಹನಗಳಿಗೆ ಅಡ್ಡಲಾಗಿ ಮಲಗಿದ ರೈತರು ಸರ್ಕಾರ ಮತ್ತು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ವಿಧಾನ ಪರಿಷತ್ನಲ್ಲಿ ಭೂಸುಧಾರಣಾ ವಿಧೇಯಕ ಅಂಗೀಕಾರ ಹಿನ್ನೆಲೆಯಲ್ಲಿ ನಗರದ ಆನಂದರಾವ್ ವೃತ್ತದಲ್ಲಿ ನೂರಾರು ರೈತರು ರಸ್ತೆತಡೆ ಚಳವಳಿ ನಡೆಸಿದರು. ಈ ಸಂದರ್ಭ ಪೊಲೀಸರು ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ಮತ್ತು ಬಡಗಲೂರು ನಾಗೇಂದ್ರ ಅವರನ್ನು ವಶಕ್ಕೆ ತೆಗೆದುಕೊಂಡರು.
ರಸ್ತೆ ಮೇಲೆ ವಾಹನಗಳಿಗೆ ಅಡ್ಡಲಾಗಿ ಮಲಗಿದ ರೈತರು ಸರ್ಕಾರ ಮತ್ತು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ವಿವಾದಿತ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ವಿರೋಧದ ನಡುವೆಯೂ, ಜೆಡಿಎಸ್ ಬೆಂಬಲದೊಂದಿಗೆ ಅಂಗೀಕಾರದ ಮುದ್ರೆ ದಕ್ಕಿಸಿಕೊಂಡಿತು. ವಿಧೇಯಕದ ಪರ 31 ಹಾಗೂ ವಿರುದ್ಧ 27 ಮತಗಳು ಬಿದ್ದವು.
ಈ ವಿಧೇಯಕ ವಿಧಾನಸಭೆಯಲ್ಲಿ ಸೆಪ್ಟೆಂಬರ್ನಲ್ಲಿ ಅಂಗೀಕಾರವಾಗಿತ್ತು. ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದಾಗ, ಸರ್ಕಾರಕ್ಕೆ ತರಾತುರಿ ಏಕೆ ಎಂದು ಪ್ರಶ್ನಿಸಿದ್ದ ಎಚ್.ಡಿ.ಕುಮಾರಸ್ವಾಮಿಯವರ ಪಕ್ಷ ಇಂದು ವಿಧಾನಪರಿಷತ್ನಲ್ಲಿ ಬಿಲ್ ಬೆಂಬಲಿಸಿದ್ದು ಗಮನ ಸೆಳೆಯಿತು
ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ನಲ್ಲಿ ಅಂಗೀಕಾರ; JDS ಬೆಂಬಲ
Published On - 7:09 pm, Tue, 8 December 20