ಯಾದಗಿರಿ: ಹೊಲಕ್ಕೆ ದೃಷ್ಟಿಯಾಗಬಾರದೆಂದು ಸನ್ನಿ ಲಿಯೋನ್ ಫೋಟೋ ಇಟ್ಟ ರೈತ!
ಕಷ್ಟಪಟ್ಟು ಉತ್ತು, ಬಿತ್ತಿ ಬೆಳೆದ ಬೆಳೆಯನ್ನ ಉಳಿಸಿಕೊಳ್ಳಲು ರೈತರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಆದರೆ ಯಾದಗಿರಿಯಲ್ಲಿ ರೈತನೊಬ್ಬ ಮಾಡಿರುವ ಪ್ಲ್ಯಾನ್ ಸದ್ಯ ವೈರಲ್ ಆಗಿದೆ. ತನ್ನ ಹೊಲಕ್ಕೆ ಯಾರ ದೃಷ್ಟಿಯೂ ಬೀಳಬಾರದು ಎಂದು ಆತ ದೃಷ್ಟಿಬೊಂಬೆ ಹಾಕೋ ಬದಲು, ಮಾದಕ ತಾರೆ ಸನ್ನಿ ಲಿಯೋನ್ ಫೋಟೋ ಹಾಕಿದ್ದಾನೆ. ಇದರಿಂದ ಜನರ ದೃಷ್ಟಿ ಹೊಲದತ್ತ ಹೋಗದೆ ಭಾವಚಿತ್ರದ ಕಡೆ ಇರುತ್ತೆ ಎಂಬುದು ಆತನ ನಂಬಿಕೆ.
ಯಾದಗಿರಿ, ನವೆಂಬರ್ 28: ಬೆಳೆದ ಬೆಳೆ ಕಾಪಾಡಿಕೊಳ್ಳಲು ರೈತರು ನಾನಾ ಪ್ರಯತ್ನ ಮಾಡೋದನ್ನ ನಾವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ಯಾದಗಿರಿಯ ಮುದನೂರ ಗ್ರಾಮದ ರೈತನೊಬ್ಬ ತಾನು ಬೆಳೆದ ಹತ್ತಿ ಬೆಳೆಗೆ ಯಾರ ದೃಷ್ಟಿಯಾಗದಿರಲಿ ಎಂದು ಹೊಲದ ಬಳಿ ಮಾದಕ ತಾರೆ ಸನ್ನಿ ಲಿಯೋನ್ ಫೋಟೋ ಇಟ್ಟಿದ್ದಾನೆ. ಫಸಲೊಡೆದ ಹತ್ತಿ ಬೆಳೆಗೆ ಜನರ ದೃಷ್ಟಿ ಬೀಳಬಾರದು. ಹೀಗಾಗಿ ಸನ್ನಿ ಲಿಯೋನ್ ಫೋಟೋ ಹಾಕಿದ್ದೇನೆ. ಇದರಿಂದಾಗಿ ಜನರ ಗಮನ ಹೊಲದತ್ತ ಹೋಗೋ ಬದಲು ಫೋಟೋ ಕಡೆ ಹೋಗುತ್ತೆ ಎಂದು ರೈತ ತಿಳಿಸಿದ್ದಾನೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
