ಬೆರಳೆಣಿಕೆ ರೈತರಿಗಷ್ಟೇ ತೋಟಗಾರಿಕೆ ಬೆಳೆ ಹಾನಿ ಪರಿಹಾರ; ಅರ್ಹರ ನೆರವಿಗೆ ಅಡ್ಡಿಯಾದ ಸರ್ಕಾರದ ಷರತ್ತು

| Updated By: preethi shettigar

Updated on: Jun 16, 2021 | 3:11 PM

ಸರಕಾರ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರವೇನೋ ಘೋಷಣೆ ಮಾಡಿದೆ. ಆದರೇ ಆ ಪರಿಹಾರ ಕೊಡಬೇಕಾದರೆ ಅದಕ್ಕೆ ಹತ್ತಾರು ಷರತ್ತುಗಳನ್ನು ಕೂಡಾ ಹಾಕಿದೆ. ಇದರಿಂದಾಗಿ ಸಾವಿರಾರು ತೋಟಗಾರಿಕೆ ಬೆಳೆಗಾರರು ಸರಕಾರ ಕೊಡುವ ಪರಿಹಾರದಿಂದ ವಚಿಂತವಾಗುವ ಭೀತಿ ಎದುರಿಸುತ್ತಿದ್ದಾರೆ.

ಬೆರಳೆಣಿಕೆ ರೈತರಿಗಷ್ಟೇ ತೋಟಗಾರಿಕೆ ಬೆಳೆ ಹಾನಿ ಪರಿಹಾರ; ಅರ್ಹರ ನೆರವಿಗೆ ಅಡ್ಡಿಯಾದ ಸರ್ಕಾರದ ಷರತ್ತು
ಮಾರಾಟವಾಗದೇ ಉಳಿದ ಕಲ್ಲಂಗಡಿ ಬೆಳೆ
Follow us on

ಬೀದರ್: ಜಿಲ್ಲೆಯ ರೈತರು ಕಷ್ಟಪಟ್ಟು ತೋಟಗಾರಿಕೆ ಬೆಳೆ ಬೆಳೆದಿದ್ದರು. ಎಕರೆಗೆ ಸಾವಿರಾರು ರೂಪಾಯಿ ಖರ್ಚುಮಾಡಿದ್ದರಿಂದ ಭರಪೂರ ಬೆಳೆ ಕೂಡ ಬಂದಿತ್ತು. ಆದರೆ ಕಟಾವಿಗೆ ಬಂದ ಫಸಲನ್ನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಸರಕಾರ ಲಾಕ್​ಡೌನ್ ಘೋಷಿಸಿತ್ತು. ಇದರಿಂದಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹಣ್ಣು ತರಕಾರಿ ಹೊಲದಲ್ಲಿಯೇ ಕೊಳೆತು ಹೋಯಿತು. ರೈತರ ಬೆಳೆ ಹಾನಿ ನಷ್ಟ ಭರಿಸುವ ಉದ್ದೇಶದಿಂದ ಸರಕಾರ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿತ್ತು. ಆದರೆ ಈ ಹಣ ಮಾತ್ರ ಇನ್ನೂ ರೈತರ ಕೈಸೇರಿಲ್ಲ.

ಬೀದರ್ ಜಿಲ್ಲೆಯಲ್ಲಿ ಕಳೇದ ಎರಡು ವರ್ಷದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷ ಕೂಡ ತೋಟಗಾರಿಕೆ ಬೆಳೆಗಳಾದ ಕಲ್ಲಂಗಡಿ, ಮಾವು, ತರಕಾರಿ, ಬೆಳೆ ಬೆಳೆಸಿದ ರೈತರು ಇನ್ನೇನು ಮಾರುಕಟ್ಟೆಗೆ ತೆಗೆದಿಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಸರಕಾರ ರಾಜ್ಯದಲ್ಲಿ ಲಾಕ್​ಡೌನ್ ಜಾರಿ ಮಾಡಿತು, ಇದರ ಪರಿಣಾಮವಾಗಿ ಹೊಲದಲ್ಲಿ ಬೆಳೆದ ಬೆಳೆ ಮಾರಾಟ ಮಾಡಲಾಗದೆ, ರೈತರು ಅಸಹಾಯಕರಾಗಿದ್ದಾರೆ. ಇದನ್ನು ಅರಿತ ಸರಕಾರ ತೋಟಗಾರಿಕೆ ಬೆಳೆಗಾರರಿಗೆ ಎಕರೆಗೆ ಹತ್ತು ಸಾವಿರ ರೂಪಾಯಿ ಹಣ ಪರಿಹಾರ ಘೋಷಣೆ ಮಾಡಿತು. ಆದರೇ ಆ ಹಣವೂ ಕೂಡ ಇನ್ನೂ ರೈತರ ಕೈ ಸೇರಿಲ್ಲ ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸರಕಾರ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರವೇನೋ ಘೋಷಣೆ ಮಾಡಿದೆ. ಆದರೇ ಆ ಪರಿಹಾರ ಕೊಡಬೇಕಾದರೆ ಅದಕ್ಕೆ ಹತ್ತಾರು ಷರತ್ತುಗಳನ್ನು ಕೂಡಾ ಹಾಕಿದೆ. ಇದರಿಂದಾಗಿ ಸಾವಿರಾರು ತೋಟಗಾರಿಕೆ ಬೆಳೆಗಾರರು ಸರಕಾರ ಕೊಡುವ ಪರಿಹಾರದಿಂದ ವಚಿಂತವಾಗುವ ಭೀತಿ ಎದುರಿಸುತ್ತಿದ್ದಾರೆ. ಇನ್ನೂ ಕಳೆದ ವರ್ಷ ಲಾಕ್​ಡೌನ್​ನಲ್ಲಿಯೂ ಕೂಡಾ ಬೆಳೆಗಾರರಿಗೆ ಸರಕಾರ ಬೆಳೆ ನಾಶ ಪರಿಹಾರ ಘೋಷಣೆ ಮಾಡಿತ್ತು. ಆದರ ಹಣವೇ ಇನ್ನೂ ಕೆಲವೂ ರೈತರ ಕೈ ಸೇರಿಲ್ಲ ಎಂದು ರೈತ ಮಹಿಳೆ ಶಾಂತಮ್ಮ ತಿಳಿಸಿದ್ದಾರೆ.

ಕೆಲವು ರೈತರು ಹೋದ ವರ್ಷ ಕಲ್ಲಂಗಡಿ ಬೆಳೇಸಿದ್ದರು. ಆದರೇ ಈ ವರ್ಷ ಅವರು ಕಲ್ಲಂಗಡಿ ಬೆಳೆಸಿಲ್ಲ. ಆದರೇ ಅದೇ ರೈತನಿಗೆ ಈ ವರ್ಷ ಪರಿಹಾರ ಕೊಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ, ಜೊತೆಗೆ ಹೋದ ವರ್ಷ ಕಲ್ಲಂಗಡಿ ಬೆಳೆಸದ ರೈತರು ಈ ವರ್ಷ ಕಲ್ಲಂಗಡಿ ಬೆಳೇಸಿದ್ದಾರೆ. ಆದರೇ ಆ ರೈತರು ಸರಕಾರದ ಪರಿಹಾರದಿಂದ ವಂಚಿತರಾಗಬೇಕಾಗುತ್ತದೆ ತೋಟಗಾರಿಕೆ ಇಲಾಖೆ ಹೋದ ವರ್ಷ ಮಾಡಿದ ಸರ್ವೇಯನ್ನೇ ಈ ವರ್ಷ ಬಳಕೆ ಮಾಡುತ್ತಿರುವುದು ಹತ್ತಾರು ರೈತರನ್ನು ಸರಕಾರದ ಪರಿಹಾರದಿಂದ ವಂಚಿತರನ್ನಾಗಿ ಮಾಡುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಸಮೀಕ್ಷೆ ನಡೆದಿಲ್ಲ. ಹೀಗಾಗಿ ಕಲ್ಲಂಗಡಿ ಹೂ ಬೆಳೆದ ರೈತರು ಇದರಿಂದ ವಂಚಿತರಾಗಿದ್ದಾರೆ.

ತರಕಾರಿ ಹೂ ಹಣ್ಣು ಬೆಳೆದ ಜಿಲ್ಲೆಯ 470 ರೈತರು ಮಾತ್ರ ಈ ಪರಿಹಾರಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಒಟ್ಟು 28.91 ರೂಪಾಯಿ ಪರಿಹಾರ ಸಿಗಲಿದೆ. 200 ಹೆಕ್ಟೇರ್ ಹಣ್ಣು ಬೆಳೆದ 285 ರೈತರಿಗೆ 20.8 ಲಕ್ಷ ರೂಪಾಯಿ, 26 ಹೆಕ್ಟೇರ್​ನಲ್ಲಿ ತರಕಾರಿ ಬೆಳೆದ 59 ರೈತರಿಗೆ 2.61 ಲಕ್ಷ ರೂಪಾಯಿ, 57.31 ಹೆಕ್ಟೇರ್​ನಲ್ಲಿ ಹೂ ಬೆಳೆದ 127 ರೈತರಿಗೆ 5.73 ರೂಪಾಯಿ ಪರಿಹಾರ ಸಿಗಲಿದೆ. ಈ ಅಂಕಿ ಅಂಶ ಅರ್ಹ ರೈತರ ಶೇಕಡಾ ಅರ್ಧದಷ್ಟು ಇರುವುದಿಲ್ಲ ಬೆಳೆ ಸಮೀಕ್ಷೆ ಆಧರಿಸಿ ಪರಿಹಾರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ವಿಶ್ವನಾಂಥ್ ತಿಳಿಸಿದ್ದಾರೆ.

ಇದನ್ನೂ ಓದಿ:

ಚಾಮರಾಜನಗರದಲ್ಲಿ ಬಿತ್ತನೆ ಬೀಜದ ಸಮಸ್ಯೆ ಇಲ್ಲ ಎಂದ ಕೃಷಿ ಸಚಿವರ ವಿರುದ್ಧ ರೈತರ ಆಕ್ರೋಶ

ಗ್ರಾಮದಿಂದ ರೈತ ಕುಟುಂಬವನ್ನು ಬಹಿಷ್ಕರಿಸಿದ ಆರೋಪ; ನ್ಯಾಯಕ್ಕಾಗಿ ಆಗ್ರಹಿಸಿ ಗದಗ ಜಿಲ್ಲಾ ಕಚೇರಿ ಮುಂದೆ ಧರಣಿ