ಕೊರೊನಾ ಆಘಾತ; ಶಂಕರಪುರ ಮಲ್ಲಿಗೆ ದರ ಕುಸಿತ, ಕೃಷಿಕರು ಕಂಗಾಲು

ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆದರು ಕಡ್ಡಾಯವಾಗಿ ಮಲ್ಲಿಗೆ ಬೇಕೇ ಬೇಕು. ಕಳೆದ ಎರಡು ವರ್ಷಗಳ ಹಿಂದೆ ಮಲ್ಲಿಗೆ ಮಾಲೆಯ ಅಟ್ಟೆಗೆ 1,500 ರಿಂದ 2,000 ಕ್ಕೂ ಗರಿಷ್ಟ ದರ ತಲುಪಿತ್ತು. ಕೊರೊನಾ ಕಾರಣದಿಂದ ಮಲ್ಲಿಗೆ ದರ ಕುಸಿತ ಕಂಡು ಇದೀಗ ಅಟ್ಟೆಗೆ ಕನಿಷ್ಟ ದರ ಎಂದರೆ ಕೇವಲ 150 ರೂಪಾಯಿ ತಲುಪಿದೆ.

ಕೊರೊನಾ ಆಘಾತ; ಶಂಕರಪುರ ಮಲ್ಲಿಗೆ ದರ ಕುಸಿತ, ಕೃಷಿಕರು ಕಂಗಾಲು
ಶಂಕರಪುರ ಮಲ್ಲಿಗೆ
Follow us
sandhya thejappa
|

Updated on: Apr 15, 2021 | 5:11 PM

ಉಡುಪಿ: ಶಂಕರಪುರದ ಶ್ವೇತ ಬಣ್ಣದ ಹೂ ದೇಶ ವಿದೇಶದಲ್ಲಿ ಖ್ಯಾತಿ ಗಳಿಸಿತ್ತು. ಆದರೆ ಬಹಳಷ್ಟು ಬೇಡಿಕೆ ಇರುವ ಶಂಕರಪುರ ಮಲ್ಲಿಗೆ ಕೊರೊನಾದ ಅಬ್ಬರದಿಂದ ಸೊರಗಿದೆ. ‘ಚಿನ್ನದ ಬೆಲೆ ಇರುವ ಹೂ’ ಎಂದು ಹೆಸರು ಪಡೆದ ಶಂಕರಪುರ ಜಾಸ್ಮಿನ್ ಮಾರುಕಟ್ಟೆಯಲ್ಲಿ ಒಮ್ಮಿಂದೊಮ್ಮೆಲೇ ದರ ಕುಸಿತ ಕಂಡಿದೆ. ಕೊರೊನಾ ಕಾರಣದಿಂದ ಕುಸಿತಗೊಂಡ ಮಲ್ಲಿಗೆ ದರವನ್ನು ಕಂಡು ಕೃಷಿಕರು ಕಂಗಾಲಾಗಿದ್ದಾರೆ.

ಶಂಕರಪುರ ಮಲ್ಲಿಗೆ ಉಡುಪಿಯಲ್ಲಿ ಮಾತ್ರವಲ್ಲ ದೂರದ ಮುಂಬೈನಲ್ಲೂ ಭಾರಿ ಪ್ರಸಿದ್ಧಿ ಪಡೆದಿದೆ. ಮಲ್ಲಿಗೆ ಇಲ್ಲದೇ ಸಮಾರಂಭಗಳು ನಡೆಯೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಈ ಮಲ್ಲಿಗೆಗೆ ಬೇಡಿಕೆಯಿದೆ. ಅದರಲ್ಲೂ ಕರಾವಳಿ ಭಾಗದ ದೇವಾಲಯಗಳಲ್ಲಿ ದಿನ ಬೆಳಗಾದರೆ ಉತ್ಸವ, ನಾಗಪೂಜೆ, ಢಕ್ಕೆಬಲಿ ಭೂತಕೋಲ, ಮದುವೆ.. ಹೀಗೆ ಹಲವು ಕಾರ್ಯಗಳು ಸಾಲು ಸಾಲಾಗಿ ಜರುಗುತ್ತವೆ. ಇಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆದರು ಕಡ್ಡಾಯವಾಗಿ ಮಲ್ಲಿಗೆ ಬೇಕೇ ಬೇಕು. ಕಳೆದ ಎರಡು ವರ್ಷಗಳ ಹಿಂದೆ ಮಲ್ಲಿಗೆ ಮಾಲೆಯ ಅಟ್ಟೆಗೆ 1,500 ರಿಂದ 2,000 ಕ್ಕೂ ಗರಿಷ್ಟ ದರ ತಲುಪಿತ್ತು. ಕೊರೊನಾ ಕಾರಣದಿಂದ ಮಲ್ಲಿಗೆ ದರ ಕುಸಿತ ಕಂಡು ಇದೀಗ ಅಟ್ಟೆಗೆ ಕನಿಷ್ಟ ದರ ಎಂದರೆ ಕೇವಲ 150 ರೂಪಾಯಿ ತಲುಪಿದೆ.

ಒಂದು ಕಡೆ ಕೊರೊನಾ ಕಾರಣದಿಂದ ಶುಭ ಸಮಾರಂಭಗಳು ಕಡಿಮೆಯಾಗಿದೆ. ಅಷ್ಟೇ ಅಲ್ಲದೇ ಮುಂಬೈ, ವಿದೇಶಗಳಿಗೂ ಹೂ ರಫ್ತು ನಿಂತು ಹೋಗಿದೆ. ಜೊತೆಗೆ ಹೂವಿನ ಉತ್ಪಾದನೆ ಹೆಚ್ಚಾಗಿದೆ. ಇದರಿಂದ ಮಲ್ಲಿಗೆ ದರ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ದರ ನಿಗದಿಯಾಗುವುದು ವಾಡಿಕೆ. ತುಳುನಾಡಿನ ಕೆಲವೆಡೆ ಭೂತರಾಧನೆಯ ಕಾರ್ಯಕ್ರಮಗಳು ಸರಳವಾಗಿ ಮುಗಿದು ಹೋಗುತ್ತಿದೆ. ಕೊವಿಡ್ ಕಾರಣ ನೀಡಿ ಧಾರ್ಮಿಕ ಕಾರ್ಯಕ್ರಮಗಳನ್ನು ಚೌಕಟ್ಟಿನೊಳಗೆ ನಿರ್ಬಂಧಿಸಲಾಗಿದೆ. ಗೌಜಿ ಗದ್ದಲಗಳು ಇಲ್ಲದೆ ವ್ಯಾಪಾರ ವಹಿವಾಟು ಪಾತಾಳಕ್ಕೆ ಇಳಿದಿವೆ. ಪ್ರತಿದಿನ ನಡೆಯುವ ಜಾತ್ರೆಗಳು, ಮದುವೆ- ಮುಂಜಿಗಳು, ಬ್ರಹ್ಮಕಲಶೋತ್ಸವಗಳು ನಡೆಯುತ್ತಿಲ್ಲ. ಕೊರೊನಾ ಮುಂಬೈಯಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕಾರಣ ಮಲ್ಲಿಗೆಗೆ ಬೇಡಿಕೆ ಕಡಿಮೆಯಾಗಿದೆ. ಈ ಎಲ್ಲ ಕಾರಣದಿಂದಲೇ ದರ ಪಾತಳಕ್ಕೆ ಇಳಿದಿದೆ. ಹೂವಿದ್ದಾಗ ದರವಿಲ್ಲ. ದರವಿದ್ದಾಗ ಬೇಡಿಕೆ ಇಲ್ಲದಂತಾಗಿದೆ.

ಸದ್ಯ ಮಲ್ಲಿಗೆಯನ್ನೇ ನಂಬಿಕೊಂಡು ಜೀವನ ಸಾಗಿಸುವವರ ಬದುಕು ಮಾತ್ರ ಬೆಲೆ ಇಳಿಕೆಯಿಂದ ದುಸ್ಥರವಾಗಿದೆ. ಲಕ್ಷ ಲಕ್ಷ ರೂಪಾಯಿ ಸುರಿದು ಮಲ್ಲಿಗೆ ಕೃಷಿಯಲ್ಲೇ ಜೀವನ ಕಟ್ಟಿಕೊಂಡ ಸಾವಿರಾರು ಸಣ್ಣ ರೈತರ ಬದುಕು ಮುಳ್ಳಿನ ಹಾಸಿಗೆಯಾಗಿದೆ.

ಇದನ್ನೂ ಓದಿ

ರೆಮ್​ಡೆಸಿವಿರ್ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಳ; ಬೆಲೆ ಇಳಿಕೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

Kaviya Maran: ಹೈದರಾಬಾದ್ ಪಂದ್ಯದ ವೇಳೆ ಕ್ಯಾಮರಾ ಕಣ್ಣಿಗೆ ಬೀಳುವ ಈ ಸುಂದರಿ ಯಾರು?

Farmers are worried about the drop in prices of shankarapura jasmine