AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡು ಹಂದಿಗಳ ದಾಳಿಗೆ‌ ನಲುಗಿದ ಬೀದರ್ ಜಿಲ್ಲೆಯ ರೈತರು; ನಾಲ್ಕು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ರೈತರಿಗೆ ಗಾಯ, ಇಬ್ಬರ ಸಾವು

ಎರಡು ರಾಜ್ಯದ ಗಡೀ ಹಂಚಿಕೊಂಡಿರುವ ರಾಯಚೂರು ಜಿಲ್ಲೆ. ಹೇಳಿಕೊಳ್ಳುವಷ್ಟು ಅರಣ್ಯ ಪ್ರದೇಶ ಅಲ್ಲಿಲ್ಲದಿದ್ದರೂ ಕಾಡು ಹಂದಿಗಳು ಹೆಚ್ಚಿದೆ. ಹೊಲಕ್ಕೆ ಹೋಗುವ ಕೂಲಿ ಕಾರ್ಮಿಕರು, ರೈತರ ಮೇಳೆ ದಾಳಿ ಮಾಡುತ್ತಿರುವ ಕಾಡು ಹಂದಿಗಳಿಂದ ಭಯಬೀತರಾಗಿದ್ದಾರೆ. ನಾಲ್ಕು ತಿಂಗಳಲ್ಲಿ ಹತ್ತಾರು ಜನರ ಮೇಲೆ ದಾಳಿ ಮಾಡಿದ್ದು, ಇಬ್ಬರ ಪ್ರಾಣ ಹೋಗಿದೆ. ಹೀಗಾಗಿ ಅರಣ್ಯ ಇಲಾಖೆಯ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ.

ಕಾಡು ಹಂದಿಗಳ ದಾಳಿಗೆ‌ ನಲುಗಿದ ಬೀದರ್ ಜಿಲ್ಲೆಯ ರೈತರು; ನಾಲ್ಕು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ರೈತರಿಗೆ ಗಾಯ, ಇಬ್ಬರ ಸಾವು
ಬೀದರ್​ನಲ್ಲಿ ಹೆಚ್ಚಿದ ಕಾಡು ಹಂದಿ ಹಾವಳಿ
ಸುರೇಶ ನಾಯಕ
| Edited By: |

Updated on:Jun 29, 2024 | 7:42 AM

Share

ಬೀದರ್​, ಜೂ.28: ಗಡೀ ಜಿಲ್ಲೆ ಬೀದರ್(Bidar)​ನಲ್ಲಿ ಅವತ್ತಿನ ದುಡಿಮೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ಶೇಕಡಾ 50 ರಷ್ಟು ಜನರಿದ್ದಾರೆ. ಇನ್ನು ಕಡಿಮೆ ಜಮೀನು ಇರುವ ರೈತರ ಸಂಖ್ಯೆಯೂ ಕೂಡ ಇಲ್ಲಿ ಜಾಸ್ತಿಯಿದೆ. ಬರದ ನಡುವೆ ಸಾಲ ಮಾಡಿ ಹೊಲದಲ್ಲಿ ಬಿತ್ತನೆ ಮಾಡಿ ಅದಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇತ್ತಿಚೆಗೆ ರೈತರಿಗೆ ಹಾಗೂ ರೈತರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗುವ ಜನರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಕಾಡು ಹಂದಿ(wild boar)ಗಳ ಕಾಟ. ಮಾರ್ಚ್ ನಿಂದ ಜೂನ್​ವರೆಗೆ ಈ ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ರೈತರಿಗೆ ಜನರಿಗೆ ಕಚ್ಚಿದೆ. ಜೊತೆಗೆ ಇಬ್ಬರು ಸಾವನ್ನಪ್ಪಿದ್ದಾರೆ.

ಬೀದರ್​ ತಾಲೂಕಿನ ಹೊಕ್ರಾಣ(ಕೆ) ಗ್ರಾಮದ ಮಹಿಳೆ ಕವಿತಾ (45) ಕೂಲಿ ಕಾರ್ಮಿಕ ಮಹಿಳೆ ಹಂದಿ ದಾಳಿಯಿಂದ ಮೃತಪಟ್ಟಿದ್ದಳು. ಈ ಮೃತಪಟ್ಟ ಮಹಿಳೆ ರೈತನ ಹೊಲಕ್ಕೆ ಜೋಳ ಕಟಾವು ಮಾಡಲು ಹೋಗಿದ್ದಳು. ಐದಾರು ಮಹಿಳೆಯರು ಬೆಳಗ್ಗೆ 7 ಗಂಟೆ ಸೂಮಾರಿಗೆ ಜೋಳ ಕಟಾವು ಮಾಡುತ್ತಿದ್ದರು. ಆ ಜೋಳದ ಹೊಲದಲ್ಲಿ ಅವಿತುಕೊಂಡು ಕುಳಿತಿದ್ದ ಕಾಡು ಹಂದಿಯೊಂದು ಮಹಿಳೆಯ ಮೇಲೆ ಏಕಾಏಕಿ ದಾಳಿ ಮಾಡಿದೆ. ಕಾಡು ಹಂದಿಯ ದಾಳಿಯಿಂದಾಗಿ ಮಹಿಳೆಯ ಕಿಬ್ಬೊಟ್ಟೆಯ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಳು. ತೀವ್ರ ರಕ್ತ ಸ್ರಾವದಿಂದಾ ಬಳುತ್ತಿದ್ದ ಕವಿತಾ ಆಸ್ಪತ್ರೆಗೆ ಆಸಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಮೃತ್ತಪಟ್ಟಿದ್ದಾಳೆ. ಆ ಮಹಿಳೆ ಮೃತಮಟ್ಟ 24 ಗಂಟೆಯೊಳಗಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮೃತಳ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರವನ್ನ ಕೊಟ್ಟಿದ್ದಾರೆ.

ಇದನ್ನೂ ಓದಿ:ಬರಗಾಲದಿಂದ ಕಂಗೆಟ್ಟ ರೈತರಿಗೆ ಕಾಡು ಹಂದಿ ಹಾವಳಿ: ಗೋವಿನಜೋಳ ನಾಶ, ಅರಣ್ಯ ಇಲಾಖೆಗೆ ಮನವಿ

ಇನ್ನು ಮೇ 12 ರಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ದಾಬಕಾ ಗ್ರಾಮದ ಯುವಕ ಪ್ರವೀಣ ನವನಾಥ್ (22) ವರ್ಷದ ಯುವಕ ಸಂಜೆ ಸಮಯದಲ್ಲಿ ಬೈಕ್ ನಲ್ಲಿ ತನ್ನ ಗ್ರಾಮಕ್ಕೆ ಹೋಗುವಾಗ ಬೋರಾಳ ಗ್ರಾಮದ ಬಳಿ ಕಾಡು ಹಂದಿಗಳ ಹಿಂಡು ಏಕಾಏಕಿ ರಸ್ತೆಗೆ ಬಂದಿವೆ. ಈ ವೇಳೆ ಯುವಕನ ಬೈಕ್​ಗೆ ಕಾಡು ಹಂದಿ ಗುದ್ದಿ ರಸ್ತೆಯ ಪಕ್ಕ ಬಿದ್ದಿದ್ದಾನೆ. ಹೀಗಾಗಿ ತಲೆಗೆ ಪೆಟ್ಟುಬಿದ್ದು ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ, ಈ ಯುವಕನಿಗೆ ಅರಣ್ಯ ಇಲಾಖೆಯಿಂದ ಯಾವುದೇ ರೀತಿಯ ಪರಿಹಾರ ಕೊಟ್ಟಿಲ್ಲ. ಕೇಳಲೂ ಹೋದರೆ,  ‘ಈತ ಕಾಡು ಹಂದಿಗೆ ಗುದ್ದಿ ತಾನೆ ಬಿದ್ದು ಮೃತಪಟ್ಟಿದ್ದಾನೆ. ಹೀಗಾಗಿ ಈತನಿಗೆ ಪರಿಹಾರ ಕೊಡಲು ಬರೋದಿಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ.

ಇದು ಅಷ್ಟೇ ಅಲ್ಲ ಐದು ದಿನದ ಹಿಂದೆ ಔರಾದ್ ತಾಲೂಕಿನ ಬೇಲೂರು ಗ್ರಾಮದ ರೈತ ಬಿಕ್ಕುಮೀಯಾ ಅನ್ನೂವರಿಗೆ ಕಾಡು ಹಂದಿ ದಾಳಿ ಮಾಡಿದೆ. ಕಾಡು ಹಂದಿ ದಾಳಿಗೆ ಹೊಟ್ಟೆಯೇ ಹರಿದು ಹೋಗಿದೆ. ರೈತ ಬೀದರ್ ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚೇತರಿಕೆ ಕಾಣುತ್ತಿದ್ದಾನೆ. ಇದೆ ವಾರದ ಹಿಂದೆ ಬಸವಕಲ್ಯಾಣ ತಾಲೂಕಿನ ದಾಸರವಾಡಿ ಗ್ರಾಮದಲ್ಲಿ 3 ಜನರ ಮೇಲೇ ಕಾಡು ಹಂದಿ ದಾಳಿ ಮಾಡಿದ್ದು, ಒಬ್ಬನ ಬೆರಳು ಕಟ್ ಮಾಡಿವೆ. ಇನ್ನು ಮಹಿಳೆ ತುಕ್ಕುಬಾಯಿ ಎನ್ನುವವರಿಗೆ ದೇಹದಲ್ಲೇಲ್ಲ 32 ಹೊಲಿಕೆ ಹಾಕಲಾಗಿದೆ.

ಈ ಹಿನ್ನೆಲೆ ಜಿಲ್ಲೆಯ ಜನರು, ರೈತರು, ಕೂಲಿ ಕಾರ್ಮಿಕರು ಹೊಲಕ್ಕೆ ಹೋಗೋದಕ್ಕೆ ಭಯ ಪಡುತ್ತಿದ್ದಾರೆ. ಕಾಡು ಹಂದಿಗಳು ದಾಳಿ ಮಾಡುತ್ತಿರುವುದರಿಂದಾಗಿ ಏನು ಮಾಡಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಇತ್ತ ಬೆಳೆದ ಬೆಳೆಯನ್ನ ಕೂಡ ಕಾಡು ಹಂದಿಗಳು ತಿಂದು ನಾಶಮಾಡುತ್ತಿವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಲದಲ್ಲಿ ಕಾವುಲು ಕಾದರೂ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ ಎಂದು ಅರಣ್ಯ ಇಲಾಖೆಯ ಮೊರೆ ಹೋಗುತ್ತಿದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 pm, Fri, 28 June 24