ಫ್ರೀಡಂಪಾರ್ಕ್​ ತಲುಪಿದ ಅನ್ನದಾತರ ರ‍್ಯಾಲಿ.. ರೈತರು ಕೆ.ಆರ್.ಸರ್ಕಲ್​ ಕಡೆ ಹೋಗದಂತೆ ಬಿಗಿ ಭದ್ರತೆ

|

Updated on: Jan 26, 2021 | 3:12 PM

ಆನಂದರಾವ್​ ವೃತ್ತದ ಮೇಲ್ಸೇತುವೆ​ ಮೂಲಕ ಱಲಿ ಆಗಮಿಸಿದ್ದು ಮಹಿಳಾ ರೈತರು ಸಹ ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಬಂದಿದ್ದಾರೆ. ಇನ್ನು ರೈತರು ಕೆ.ಆರ್.ಸರ್ಕಲ್​ ಕಡೆ ಹೋಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಈ ಹಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಫ್ರೀಡಂಪಾರ್ಕ್​ ತಲುಪಿದ ಅನ್ನದಾತರ ರ‍್ಯಾಲಿ.. ರೈತರು ಕೆ.ಆರ್.ಸರ್ಕಲ್​ ಕಡೆ ಹೋಗದಂತೆ ಬಿಗಿ ಭದ್ರತೆ
ಫ್ರೀಡಂಪಾರ್ಕ್​ ತಲುಪಿದ ರೈತರ ರ‍್ಯಾಲಿ
Follow us on

ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಬೆಂಗಳೂರಿನಲ್ಲಿ ರೈತರ ರಣ ಕಹಳೆ ಮೊಳಗುತ್ತಿದೆ. ಒಂದು ಕಡೆ ರೈತರು ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ರೆ ಮತ್ತೊಂದು ಕಡೆ ಬೆಂಗಳೂರಿನಲ್ಲಿ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದಾರೆ. ಸದ್ಯ ಈಗ ನಗರದ ಫ್ರೀಡಂಪಾರ್ಕ್​ಗೆ ಅನ್ನದಾತರ ರ‍್ಯಾಲಿ ತಲುಪಿದೆ.

ಆನಂದರಾವ್​ ವೃತ್ತದ ಮೇಲ್ಸೇತುವೆ​ ಮೂಲಕ ಱಲಿ ಆಗಮಿಸಿದ್ದು ಮಹಿಳಾ ರೈತರು ಸಹ ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಬಂದಿದ್ದಾರೆ. ಇನ್ನು ರೈತರು ಕೆ.ಆರ್.ಸರ್ಕಲ್​ ಕಡೆ ಹೋಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಈ ಹಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಬ್ಯಾರಿಕೇಡ್​ ಅವಳಡಿಸಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ವಾಟರ್ ಜೆಟ್ ವಾಹನ, ಕೆಎಸ್​ಆರ್​ಪಿ ತುಕಡಿ ಸಹ ನಿಯೋಜಿಸಲಾಗುತ್ತೆ. ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ಆರಂಭವಾಗಿ ಕೊನೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನತ್ತ ರೈತರ ಱಲಿ ತಲುಪಿದೆ.

ರಾಜಧಾನಿ ಬೆಂಗಳೂರಿನಲ್ಲಿ ಗಣತಂತ್ರ ದಿನವೇ ಹಸಿರು ಕ್ರಾಂತಿ.. 10 ಸಾವಿರಕ್ಕೂ ಅಧಿಕ ವಾಹನಗಳಿಂದ ರ‍್ಯಾಲಿ