ಜೋತು ಬಿದ್ದ ವಿದ್ಯುತ್ ತಂತಿಗಳ ಮಧ್ಯೆ ರೈತರ ಪಾಡು ಹೇಳತೀರದು.. GESCOM ಅಧಿಕಾರಿಗಳು ಮಾತ್ರ ಜಾಣ ಕುರುಡು

ಜಿಲ್ಲೆಯಲ್ಲಿ ಜೆಸ್ಕಾಂ ಅಧಿಕಾರಿಗಳಿಗೆ ಹೇಳೋರು ಕೇಳೋರು ಯಾರೂ ಇಲ್ವೇನೋ ಅನ್ನಿಸುತ್ತಿದೆ. ಕೈಗೆಟುಕುವಷ್ಟು ಹತ್ತಿರದಲ್ಲಿರುವ ವಿದ್ಯುತ್ ತಂತಿಗಳಿಂದ ರೈತರಿಗೆ ತೊಂದರೆ ಉಂಟಾಗಿದ್ದು ಇಂತಹ ಅಪಾಯಕಾರಿ ಸ್ಥಳದಲ್ಲೇ ರೈತರು ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಜೋತು ಬಿದ್ದ ವಿದ್ಯುತ್ ತಂತಿಗಳ ಮಧ್ಯೆ ರೈತರ ಪಾಡು ಹೇಳತೀರದು.. GESCOM ಅಧಿಕಾರಿಗಳು ಮಾತ್ರ ಜಾಣ ಕುರುಡು
ನೇತು ಬಿದ್ದ ವಿದ್ಯುತ್ ತಂತಿಗಳ ಮಧ್ಯೆ ರೈತರ ಪರದಾಟ
Follow us
sandhya thejappa
|

Updated on:Dec 23, 2020 | 9:05 AM

ಬೀದರ್: ಜಿಲ್ಲೆಯಲ್ಲಿ ಜೆಸ್ಕಾಂ ಅಧಿಕಾರಿಗಳಿಗೆ ಹೇಳೋರು ಕೇಳೋರು ಯಾರೂ ಇಲ್ವೇನೋ ಅನ್ನಿಸುತ್ತಿದೆ. ಕೈಗೆಟುಕುವಷ್ಟು ಹತ್ತಿರದಲ್ಲಿರುವ ವಿದ್ಯುತ್ ತಂತಿಗಳಿಂದ ರೈತರಿಗೆ ತೊಂದರೆ ಉಂಟಾಗಿದ್ದು ಇಂತಹ ಅಪಾಯಕಾರಿ ಸ್ಥಳದಲ್ಲೇ ರೈತರು ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಪ್ರತಿ ವರ್ಷ ವಿದ್ಯುತ್ ಅವಘಡಗಳಿಂದ ಬಹಳಷ್ಟು ಜನ ಹಾಗೂ ಜಾನುವಾರುಗಳು ಸಾವನ್ನಪ್ಪುತ್ತಿದೆ. ಆದರೆ, ಇಂತಹ ಅವಘಡಗಳನ್ನ ತಗ್ಗಿಸಬೇಕಾದ ಜೆಸ್ಕಾಂ ಅಧಿಕಾರಿಗಳು ಕಂಡು ಕಾಣದವರಂತೆ ಕುಳಿತುಬಿಟ್ಟಿದ್ದಾರೆ.

ಹೌದು, ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳಿಂದ ಪ್ರತಿ ವರ್ಷವೂ ಹತ್ತಾರು ಪ್ರಾಣಿ ಪಕ್ಷಿ ಹಾಗೂ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸಾವು ನೋವುಗಳನ್ನ ತಡೆಯಬೇಕಾದ ಜೆಸ್ಕಾಂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲದಂತೆ ಕುಳಿತಿರುವುದು ನಿಜಕ್ಕೂ ದುಃಖದ ಸಂಗತಿ.

ಸಾವಿಗೀಡಾದ ಅಂಕಿ ಅಂಶಗಳು ಕಳೆದ 7 ವರ್ಷಗಳ ಅಂಕಿ ಅಂಶಗಳನ್ನು ಗಮನಿಸುವುದಾದರೆ 2013-14 ನೇ ಸಾಲಿನಲ್ಲಿ 5 ಜನರು ಮೃತ್ತಪಟ್ಟಿದ್ದು, 34 ಜಾನುವಾರುಗಳು ಸಾವನ್ನಪ್ಪಿವೆ. 2014-15 ನೇ ಸಾಲಿನಲ್ಲಿ 12 ಜನರು ಸಾವನ್ನಪ್ಪಿದ್ದರೆ, 30 ಜಾನುವಾರುಗಳು ಸಾವಿಗೀಡಾಗಿವೆ. ಇನ್ನೂ, 2015-16 ಸಾಲಿನಲ್ಲಿ 14 ಜನರು ಸಾವಿಗೀಡಾಗಿದ್ದರೆ, 10 ಜಾನುವಾರುಗಳು ಮೃತಪಟ್ಟಿವೆ. 2016-17 ರಲ್ಲಿ 9 ಜನರು ಮೃತಪಟ್ಟಿದ್ದರೆ, 27 ಜಾನುವಾರುಗಳು ವಿದ್ಯುತ್ ಅವಘಡದಿಂದ ಸಾವಿಗೀಡಾವೆ. 2017-18 ರಲ್ಲಿ 14 ಜನರು ಮೃತಪಟ್ಟಿದರೆ, 19 ಜಾನುವಾರುಗಳು ಸಾವಿಗೀಡಾವಿವೆ. 2018-19 ರಲ್ಲಿ 8 ಜನರು ಮೃತಪಟ್ಟಿದ್ದರೆ, 17 ಜನುವಾರುಗಳು ಸಾವಿಗೀಡಾಗಿವೆ. 2019-20 ರಲ್ಲಿ 19 ಜನರು ಮೃತಪಟ್ಟಿದ್ದರೆ 6 ಜಾನುವಾರುಗಳು ಸಾವಿಗೀಡಾಗಿವೆ. 2020-21 ನೇ ಸಾಲಿನಲ್ಲಿ ಇಬ್ಬರು ಜನರು ಸಾವಿಗೀಡಾಗಿದ್ದರೆ, 27 ಜಾನುವಾರುಗಳು ಮೃತಪಟ್ಟಿವೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಾಣೀಕರಾವ್ ಪವಾರ್ ಮಾಹಿತಿ ನೀಡಿದ್ದಾರೆ.

ಜನ- ಜಾನುವಾರುಗಳ ಸಾವಿನ ಜೊತೆಗೆ ಪ್ರತಿ ವರ್ಷವೂ ವಿದ್ಯುತ್​ ಅವಘಡಗಳಿಂದ ಕೂಡಾ ನೂರಾರು ಎಕರೆಯಲ್ಲಿ ಬೆಳೆದಿರುವ ಬೆಳೆ ಸಹ ಸುಟ್ಟುಹೋಗಿವೆ. ಹೊಲದಲ್ಲಿ ರೈತರು ಓಡಾಡುವುದೇ ಕಷ್ಟವಾಗಿದೆ. ಜೊತೆಗೆ, ಹೊಲದಲ್ಲಿ ನೆಟ್ಟಿರುವ ವಿದ್ಯುತ್ ಕಂಬಗಳು ಬಾಗಿದ್ದು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ.

ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಈ ವಿಚಾರ ಜೆಸ್ಕಾಂ ಅಧಿಕಾರಿಗಳಿಗೆ ತಿಳಿದರು ಕೂಡ ಬಾಗಿದ ಕಂಬಳನ್ನ ಸರಿಮಾಡಿ ಜೊತೆಗೆ ಕೈಗೆಟುಕುವ ರೀತಿಯಲ್ಲಿರುವ ವಿದ್ಯುತ್ ತಂತಿಗಳನ್ನ ಮೇಲಕ್ಕೆತ್ತುವ ಕೆಲಸಕ್ಕೆ ಮನಸ್ಸು ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು, ರೈತರ ಹೊಲದಲ್ಲಿ ದಾಟಿರುವ ಈ ವಿದ್ಯುತ್ ತಂತಿಗಳು 16 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿಗಳಾಗಿವೆ. ಈ ವಿದ್ಯುತ್ ತಂತಿಯೂ ಸ್ಪರ್ಶ ಮಾಡಿದ ಕ್ಷಣದಲ್ಲೇ ಮನುಷ್ಯ ಹಾಗೂ ಪ್ರಾಣಿಗಳ ಜೀವ ಹಾರಿ ಹೋಗೋದು ಗ್ಯಾರಂಟಿ. ಇಂತಹ ಆಪಾಯಗಳ ಮಧ್ಯೆ ಹೊಲದಲ್ಲಿ ಕಾಯಕ ಮಾಡಬೇಕಾದ ಅನಿವಾರ್ಯತೆ ರೈತರದ್ದಾಗಿದೆ.

ಇನ್ನು, ಈ ಮಳೆಗಾಲದ ಸಮಯದಲ್ಲಂತೂ ರೈತರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ರೈತರಿಗೆ ಶಾಕ್ ಹೊಡೆದ ಉದಾಹರಣೆಗಳು ಬಹಳಷ್ಟಿವೆ. ಈ ವಿಚಾರದ ಬಗ್ಗೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಕೂಡಾ ವಿದ್ಯುತ್ ಕಂಬ ಸರಿಪಡಿಸುವ ಕೆಲಸಕ್ಕೆ ಯಾರೋಬ್ಬರು ಮುಂದಾಗಿಲ್ಲ. ಇದರ ಜೊತೆಗೆ ರಸ್ತೆಯಲ್ಲಿಯೂ ಕೂಡಾ ವಿದ್ಯುತ್ ಲೈನ್​ಗಳು ಕೆಳಭಾಗದಲ್ಲಿವೆ. ಇದು ಒಂದು ತಾಲೂಕಿನ ಕಥೆಯಲ್ಲ. ಜಿಲ್ಲೆಯ ವಿವಿಧ ತಾಲೂಕಿನ ಹಲವು ಗ್ರಾಮಗಳಲ್ಲಿ ಇದೇ ರಗಳೆ. ರಸ್ತೆಯಲ್ಲಿ ಓಡಾಡುವ ವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ನಿಶ್ಚಿತ. ಇವೆಲ್ಲದರ ಬಗ್ಗೆ ಮಾಹಿತಿ ಇದ್ದರೂ ಗಮನ ನೀಡದೆ ಇರುವ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತಗುಲಿ.. ವ್ಯಕ್ತಿ ಸ್ಥಳದಲ್ಲೇ ಸಾವು, ಯಾವೂರಲ್ಲಿ?

Published On - 7:21 pm, Tue, 22 December 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ