ಕೊನೆಗೂ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್​ ಬುಕ್ ಮಾಡಿದ ಪ್ರಜ್ವಲ್, ಯಾವಾಗ ಬರ್ತಾರೆ ಗೊತ್ತಾ?

| Updated By: ವಿವೇಕ ಬಿರಾದಾರ

Updated on: May 29, 2024 | 11:10 AM

Prajwal Revanna Video Case: ಹಾಸನ ಪೆನ್​ಡ್ರೈವ್​ ಪ್ರಕರಣದ ಆರೋಪಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಕೊನೆಗೂ ಬೆಂಗಳೂರಿಗೆ ವಾಪಸ್ ಆಗಲು ನಿರ್ಧರಿಸಿದ್ದಾರೆ. ಇದಕ್ಕೆ ಪೂಕರವೆಂತೆ ಜರ್ಮನಿಯಿಂದ ಬೆಂಗಳೂರಿಗೆ ವಿಮಾನ ಟಿಕೆಟ್​ ಬುಕ್ ಮಾಡಿದ್ದಾರೆ. ಹಾಗಾದ್ರೆ, ಜರ್ಮನಿಯಿಂದ ಬೆಂಗಳೂರಿಗೆ ಯಾವಾಗ ತಲುಪಲಿದ್ದಾರೆ ಎನ್ನುವ ವಿವರ ಇಲ್ಲಿದೆ.

ಕೊನೆಗೂ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್​ ಬುಕ್ ಮಾಡಿದ ಪ್ರಜ್ವಲ್, ಯಾವಾಗ ಬರ್ತಾರೆ ಗೊತ್ತಾ?
ಪ್ರಜ್ವಲ್ ರೇವಣ್ಣ
Follow us on

ಬೆಂಗಳೂರು, (ಮೇ 28): ಅಶ್ಲೀಲ ವಿಡಿಯೀ ಪ್ರಕರಣದಲ್ಲಿ (Prajwal Revanna Video Case) ವಿದೇಶದಲ್ಲಿ ತಲೆಮರೆಸಿಕೊಂಡಿದ್ದ  ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ  ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಜರ್ಮನಿಯಿಂದ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್​ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಏರ್​ಲೈನ್ಸ್​ನಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್​ ಬುಕ್ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ, ಮೇ 31ರಂದು ಜರ್ಮನಿಯ ಮ್ಯೂನಿಚ್​ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

ಮೇ 31ರ ಬೆಳಗ್ಗೆ 10:30ಕ್ಕೆ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಂತೆ ಮೇ 31ರಂದು ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಪ್ರಜ್ವಲ್​ ರೇವಣ್ಣ ಅವರ ವಿಮಾನ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಮೇ 30ರ ಮಧ್ಯರಾತ್ರಿ 12:30ಕ್ಕೆ (AM) ಬಂದಿಳಿಯಲಿದೆ. ಹೀಗಾಗಿ ಪ್ರಜ್ವಲ್ ಆ ಸಮಯದಲ್ಲಿ ವಿಚಾರಣೆಗೆ ಹಾಜರಾಗುವುದಿಲ್ಲ. ಬದಲಿಗೆ ಮೇ 31ರ ಬೆಳಿಗ್ಗೆ ವಿಚಾರಣೆಗೆ ಹಾಜರಾಗಹುದು.

ಇದನ್ನೂ ಓದಿ: 1 ತಿಂಗ್ಳು ಬಳಿಕ ಪ್ರಜ್ವಲ್ ಪ್ರತ್ಯಕ್ಷ, ಏ.21ರಿಂದ ಮೇ 27ರ ವರೆಗಿನ ಕೇಸ್ ಡಿಟೇಲ್ಸ್​ ಇಲ್ಲಿದೆ

ಇನ್ನು ಪ್ರಜ್ವಲ್​ ರೇವಣ್ಣ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಎಸ್​ಐಟಿ ಅಧಿಕಾರಿಗಳು ಬಂಧಿಸುವ ಎಲ್ಲಾ ಸಾಧ್ಯತೆಗಳಿವೆ, ಹೀಗಾಗಿ ಎಸ್​ಐಟಿ ಅಧಿಕಾರಿಗಳು ಅಲರ್ಟ್​ ಆಗಿದ್ದು, ಪ್ರಜ್ವಲ್ ರೇವಣ್ಣ ಯಾವ ವಿಮಾನದಲ್ಲಿ ಎಷ್ಟು ಗಂಟೆ ಬೆಂಗಳೂರಿಗೆ ಬರಲಿದೆ ಎಂದು ಇಂಚಿಚು ಮಾಹಿತಿಯನ್ನು ಕಲೆಹಾಕುತ್ತಿದೆ.

ಈಗಾಗಲೇ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬೆಂಗಳೂರಿಗೆ ಬರಲು ಎರಡು ಬಾರಿ ವಿಮಾನ ಟಿಕೆಟ್​ ಬುಕ್ ಮಾಡಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ವಿಮಾನ ಹೊರಡುವ ಸ್ವಲ್ಪ ಸಮಯದ ಮೊದಲೇ ಟಿಕೆಟ್​ ರದ್ದು ಮಾಡಿದ್ದರು. ಈ ಮೂಲಕ ಎಸ್​ಐಟಿ ಅಧಿಕಾರಿಗಳನ್ನು ಆಟವಾಡಿಸಿದ್ದರು. ಇದೀಗ ಪ್ರಜ್ವಲ್ ರೇವಣ್ಣ ಹೇಳಿದಂತೆಯೇ ಮೇ 31ರಂದು ಬೆಂಗಳೂರಿಗೆ ಬರುವುದಾಗಿ ಹೇಳಿದ್ದು, ಇದಕ್ಕಾಗಿ ಎಸ್​ಐಟಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ.

ಇದನ್ನೂ ಓದಿ: Prajwal Revanna Video: ಪ್ರಜ್ವಲ್​ ವಿಡಿಯೋ ಹೇಳಿಕೆ ಬೆನ್ನಲ್ಲೇ ಎಸ್​ಐಟಿ ಅಲರ್ಟ್, ಗೌಡರ ಕುಟುಂಬ ನಿರಳ

ವಿಚಾರಣೆಗೆ ಹಾಜರಾಗುವ ಮುಂಚೆಯೇ ವಶಕ್ಕೆ

ಮೇ 31ರಂದು ಎಸ್​ಐಟಿ ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಆದ್ರೆ, ವಿಚಾರಣೆಗೆ ಹಾಜರಾಗುವ ಮುಂಚೆಯೇ ವಶಕ್ಕೆ ಪಡೆಯಲು ಎಸ್​ಐಟಿ ಮುಂದಾಗಿದೆ. ಇದಕ್ಕಾಗಿ ಎಸ್​ಐಟಿ ಅಧಿಕಾರಿಗಳು ಕೆಂಪೇಗೌಡ ವಿಮಾನ ನಿಲ್ದಾನದಲ್ಲಿ ನಿಗಾ ಇಟ್ಟಿದ್ದಾರೆ. ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ ಮತ್ತು ಅರೆಸ್ಟ್​ ವಾರಂಟ್​ ಸಹ ಜಾರಿಯಾಗಿದೆ. ಹೀಗಾಗಿ ಯಾವ ವಿಮಾನದಲ್ಲಿ ಪ್ರಜ್ವಲ ಬರುತ್ತಾರೆ ಎಂದು ಎಸ್​ಐಟಿ ಮಾಹಿತಿ ಪಡೆದುಕೊಂಡು ವಶಕ್ಕೆ ಪಡೆಯಲಿದೆ. ಅದಕ್ಕೂ ಮೊದಲು ಇಮಿಗ್ರೇಷನ್ ಅಧಿಕಾರಿಗಳು ಪ್ರಜ್ವಲ್​ ವಶಕ್ಕೆ ಪಡೆಯಲಿದ್ದಾರೆ. ಬಳಿಕ ಎಸ್ಐಟಿಗೆ ಒಪ್ಪಿಸಲಿದ್ದಾರೆ. ಅದಾದ ಬಳಿಕ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡು ಮೊದಲಿಗೆ ಅವರಿಗೆ ಮೆಡಿಕಲ್ ಚೆಕಪ್ ಮಾಡಿಸಲಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ತಮ್ಮ ವಶಕ್ಕೆ ನೀಡುವಂತೆ ಕೋರ್ಟ್​ಗೆ ಮನವಿ ಮಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:51 pm, Tue, 28 May 24