1 ತಿಂಗ್ಳು ಬಳಿಕ ಪ್ರಜ್ವಲ್ ಪ್ರತ್ಯಕ್ಷ, ಏ.21ರಿಂದ ಮೇ 27ರ ವರೆಗಿನ ಕೇಸ್ ಡಿಟೇಲ್ಸ್ ಇಲ್ಲಿದೆ
Prajwal Video Case Timeline: ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಹೇಳಿಕೆ ಮೂಲಕ ಹಾಜರಗಿದ್ದು, ಮೇ 31ಕ್ಕೆ ಎಸ್ ಐಟಿ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣ ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದಾರೆ. ಏಪ್ರಿಲ್ 26ರಂದು ಮತದಾನ ಮಾಡಿ ಹಾಸನ ತೊರೆದಿದ್ದ ಪ್ರಜ್ವಲ್ ರೇವಣ್ಣ ಇಂದು ವೀಡಿಯೋ ಹೇಳಿಕೆ ಮೂಲಕ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ದೇಶಬಿಟ್ಟ ಬಳಿಕ ಇಂದಿನ ವರೆಗೆ ಏನೇನಾಯ್ತು ಎನ್ನುವ ವಿವರ ಇಲ್ಲಿದೆ ನೋಡಿ.
ಬೆಂಗಳೂರು\ಹಾಸನ, (ಮೇ 27): ದೇಶವೇ ಬೆಚ್ಚಿಬೀಳಿಸೋ ಬಹುದೊಡ್ಡ ಲೈಂಗಿಕ ಹಗರಣದ ಆರೋಪ ಹೊತ್ತು ದೇಶಾಂತರ ಮಾಡಿದ್ದ ಹಾಸನ(Hassan) ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಇದೀಗ ಒಂದು ತಿಂಗಳ ಬಳಿಕ ವೀಡಿಯೋ ಹೇಳಿಕೆ ಮೂಲಕ ಪ್ರತ್ಯಕ್ಷವಾಗಿದ್ದಾರೆ. ನಿಗೂಢ ಸ್ಥಳದಿಂದಲೇ ವೀಡಿಯೋ ಮಾಡಿರುವ ಪ್ರಜ್ವಲ್ ಇದೆಲ್ಲವು ಸುಳ್ಳು ಕೇಸ್, ರಾಜಕೀಯ ಶಡ್ಯಂತ್ರ ಎಂದು ತಮ್ಮ ವಿರುದ್ದದ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಅಲ್ಲದೇ ಪ್ರಜ್ವಲ್ ಮೇ 31ರ ಶುಕ್ರವಾ್ರ ಬೆಳಿಗ್ಗೆ 10 ಗಂಟೆಗೆ ಎಸ್ ಐಟಿ ಎದುರು ಹಾಜರಾಗ್ತೇನೆ, ಕಾನೂನಿನ ಮೂಲಕವೇ ಆರೋಪಗಳನ್ನ ಎದುರಿಸುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ಈ ನಡುವೆ ಏಪ್ರಿಲ್ 26ರಿಂದ ದೇಶಬಿಟ್ಟು ಹೋದ ಪ್ರಜ್ವಲ್ ರೇವಣ್ಣ ಮೇ 27ರ ವೀಡಿಯೋ ಹೇಳಿಕೆವರೆಗೂ ಏನೆಲ್ಲಾ ಬೆಳವಣಿಗೆಗಳು ನಡೆದವು ಎನ್ನುವ ಕಂಪ್ಲೀಟ್ ಟೈಮ್ಲೈನ್ ಇಲ್ಲಿದೆ.
ಇದನ್ನೂ ಓದಿ: Prajwal Revanna Video: ಕೊನೆಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ, ತಂದೆ-ತಾಯಿ ಬಳಿ ಕ್ಷಮೆಯಾಚನೆ
ಪ್ರಜ್ವಲ್ ರೇವಣ್ಣ ಕೇಸ್ನ ಒಂದು ತಿಂಗಳದ ಟೈಮ್ಲೈನ್
- ಎಪ್ರಿಲ್ 21 ಸಂಜೆ ಹಾಸನದಲ್ಲಿ ಹರಿದಾಡಿದ ಪೆನ್ ಡ್ರೈವ್ ಸುದ್ದಿ.
- ಎಪ್ರಿಲ್ 22ರಂದು ಆಯ್ದ ಕೆಲ ವಿಡಿಯೋಗಳು ಮೊಬೈಲ್ ಮತ್ತು ವಾಟ್ಸಪ್ನಲ್ಲಿ ವೈರಲ್.
- ಎಪ್ರಿಲ್ 23 ಮತ್ತಷ್ಟು ವಿಡಿಯೋಗಳು ಮೊಬೈಲ್ ಹಾಗೂ ವಾಟ್ಸಪ್ ಮೂಲಕ ಶೇರ್ ಮಾಡಲಾಗಿತ್ತು.
- ಎಪ್ರಿಲ್ 23ರ ಸಂಜೆ ಹಾಸನದ ಸಿಇಎನ್ ಪೊಲೀಸ್ ಠಾಣೆಯಲ್ಲಿ ನವೀನ್ ಗೌಡ ಸೇರಿ ಹಲವರ ವಿರುದ್ದ ವಿಡಿಯೋ ಹಂಚಿಕೆ ವಿಚಾರವಾಗಿ ಜೆಡಿಎಸ್ನಿಂದ ದೂರು.
- ಏಪ್ರಿಲ್ 26ರ ಬೆಳಿಗ್ಗೆ 8 ಗಂಟೆಗೆ ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಮನೆ ದೇವರು ಏವೇಶ್ವರನಿಗೆ ಪೂಜೆ ಸಲ್ಲಿಸಿದ್ದ ಪ್ರಜ್ವಲ್ 9-30ಕ್ಕೆ ಪಡುವಲಹಿಪ್ಪೆಯಲ್ಲಿ ಏಕಾಂಗಿಯಾಗಿ ಮತಚಲಾವಣೆ ಮಾಡಿದ್ದರು.
- ಎಪ್ರಿಲ್ 26ರ ಸಂಜೆ ಕೆ ಆರ್ ನಗರದಲ್ಲಿ ಹತ್ತಿರದ ಸಂಬಂಧಿ ಸಾವಿಗೆ ಹೋಗಿ ಅಲ್ಲಿಂದ ವಾಪಸ್.
- ಏಪ್ರಿಲ್ 26ರ ಮದ್ಯರಾತ್ರಿ ಹೊಳೆನರಸೀಪುರಿಂದ ಬೆಂಗಳೂರಿಗೆ ಪಯಣ
- ಎಪ್ರಿಲ್ 27ರ ಬಳಗಿನ ಜಾವ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಿಂದ ಜರ್ಮನಿಗೆ ಪ್ರಯಾಣ.
- ವಿಡಿಯೋ ವೈರಲ್ ಸಂಬಂಧ ರಾಜ್ಯ ಮಹಿಳಾ ಆಯೋಗದಿಂದ ತನಿಖೆ ನಡೆಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ.
- ಎಪ್ರಿಲ್ 27ರ ಸಂಜೆ ಸಿಎಂ ಸಿದ್ದರಾಮಯ್ಯ ಅವರು ಪ್ರಜ್ವಲ್ ವಿಚಾರವಾಗಿ ಮತ್ತು ವಿಡಿಯೋ ಹಂಚಿಕೆ ವಿಚಾರವಾಗಿ ಎಡಿಜಿಪಿ ಬಿಕೆ ಸಿಂಗ್ , ಎಸ್ ಪಿ ಗಳಾದ ಸೀಮಾ ಲಾಟ್ಕರ್ ಮತ್ತು ಸುಮನಾ ಡಿ ಪೆನ್ನೆಕರ್ ನೇತೃತ್ವದಲ್ಲಿ ಎಸ್ ಐ ಟಿ ರಚನೆ.
- ಏಪ್ರಿಲ್ 28ಕ್ಕೆ ಪ್ರಜ್ವಲ್ ರೇವಣ್ಣ ವಿರುದ್ದ ಹೊಳೆನರಸೀಪುರ ನಗರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಕರಣ ದಾಖಲು.
- ಏಪ್ರಿಲ್ 28ರಂದು ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆ ಯಲ್ಲಿ ಪ್ರಜ್ವಲ್ ರೇವಣ್ಣ, ಮತ್ತು ರೇವಣ್ಣ ವಿರುದ್ದ ಮಹಿಳೆ ಒರ್ವಳಿಂದ ತನಗೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ದೂರು. ದೂರಿನ ಅನ್ವಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆ ಯಲ್ಲಿ ಇಬ್ಬರ ವಿರುದ್ದ ಕೇಸ್ ದಾಖಲು.
- ಏಪ್ರಿಲ್ 28ಕ್ಕೆ ಪ್ರಕರಣದ ಸಂಬಂಧ ತನಿಖೆಗಗಾಗಿ ಎಸ್ ಐಟಿ ರಚನೆ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ.
- ಏಪ್ರಿಲ್ 29ಕ್ಕೆ ವಿಚಾರಣೆಗೆ ಹಾಜರಾಗುವಂತೆ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣಗೆ ಎಸ್ ಐಟಿ ನೊಟೀಸ್.
- ಸಂತ್ರಸ್ತರ ಹೇಳಿಕೆ ಆಧಾರದ ಮೇಲೆ ಮೇ 1ಕ್ಕೆ ಪ್ರಜ್ವಲ್ ರೇವಣ್ಣ ವಿರುದ್ದ ಅತ್ಯಾಚಾರ ಕೇಸ್ ದಾಖಲು.
- ಮೇ 1ರಂದು ತಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು ಏಳುದಿನ ಸಮಯಾವಕಾಶ ಕೇಳಿದ್ದ ಪ್ರಜ್ವಲ್.
- ಮೇ 1ರಂದು ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯರಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ.
- ಮೇ 7ಕ್ಕೆ ಇಂಟರ್ ಪೋಲ್ ನಿಂದ ಪ್ರಜ್ವಲ್ ವಿರುದ್ದ ಬ್ಲೂ ಕಾರ್ನರ್ ನೊಟೀಸ್ ಜಾರಿ.
- ಮೇ 15ಕ್ಕೆ ಜರ್ಮನಿಯ ಮುನಿಚ್ ನಿಂದ ವಿಮಾನ ಟಿಕೆಟ್ ಬುಕ್ ಮಾಡಿದ್ದ ಪ್ರಜ್ವಲ್, ಟಿಕೆಟ್ ರದ್ದೂ ಮಾಡದೆ ಭಾರತಕ್ಕೂ ಮರಳದೆ ನಿಗೂಡವಾಗೇ ಉಳಿದ್ದರು.
- ಮೇ 10ರಂದೇ ದುಬೈಗೆ ತೆರಳಿ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿರೋ ವದಂತಿ.
- ಮೇ18ಕ್ಕೆ ಟ್ರೈನ್ ಮೂಲಕ ಇಂಗ್ಲೆಂಡ್ ಗೆ ತೆರಳಿರೋ ಬಗ್ಗೆ ಸುದ್ದಿ ಹರಿದಾಡಿತ್ತು.
- ಮೇ 22ಕ್ಕೆ ಪ್ರಜ್ವಲ್ ರೇವಣ್ಣ ಪಾಸ್ಪಾರ್ಟ್ ರದ್ದತಿಗೆ ಬಗ್ಗೆ ಸಿಎಂ ಸಿದ್ದರಾಮಯ್ಯ ಎರಡನೇ ಬಾರಿಗೆ ಕೇಂದ್ರಕ್ಕೆ ಪತ್ರ.
- ಮೇ 23ರಂದು ವಿದೇಶಾಂಗ ಸಚಿವಾಲಯದಿಂದ ಪ್ರಜ್ವಲ್ ಪ್ರಜ್ವಲ್ ಶೋಕಾಸ್ ನೊಟೀಸ್ ಜಾರಿ.
- ಇದೀಗ ಇಂದು (ಮೇ 27) ಒಂದು ತಿಂಗಳ ಬಳಿಕ ವಿದೇಶದಲ್ಲಿದ್ದುಕೊಂಡೇ ವೀಡಿಯೋ ಹೇಳಿಕೆ ಮೂಲಕ ಪ್ರತ್ಯಕ್ಷವಾದ ಪ್ರಜ್ವಲ್.
ಒಟ್ಟಿನಲ್ಲಿ ಇಡೀ ದೇಶವೇ ಬೆಚ್ಚಿಬೀಳಿಸುವಂತ ಬೃಹತ್ ಲೈಂಗಿಕ ಹಗರಣದ ಆರೋಪಕ್ಕೆ ಗುರಿಯಾಗಿರುವ ಪ್ರಜ್ವಲ್ ಮೊದಲ ಬಾರಿಗೆ ತಮ್ಮ ಬಗೆಗಿನ ಆರೋಪಗಳ ಬಗ್ಗೆ ಮಾತನಾಡಿದ್ದಾರೆ. ಎಸ್ ಐಟಿ ಮುಂದೆ ಹಾಜರಾಗೋ ಬಗ್ಗೆಯೂ ಹೇಳಿಕೆ ನೀಡಿದ್ದಾರೆ, ಈಗಾಗಲೇ ಒಮ್ಮೆ ಏಳು ದಿನ ಸಮಯ ಕೇಳಿ ಕೊಟ್ಟ ಮಾತು ತಪ್ಪಿರುವ ಪ್ರಜ್ವಲ್ ಈಗ ಮೇ 31ಕ್ಕೆ ಹಾಜರಾಗ್ತಾರಾ, ಎಸ್ ಐಟಿ ಮುಂದೆ ಶರಣಾಗಿ ಕಾನೂನು ಪ್ರಕ್ರಿಯೆಗೆ ಸಹಕಾರ ಕೊಡ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ