Tungabhadra Dam: ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಾದ ಹೂಳು: ಸ್ವಚ್ಛಗೊಳಿಸುವುದು ಅಸಾಧ್ಯವೆಂದ ಅಧಿಕಾರಿಗಳು
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ, ತುಂಗಭದ್ರಾ ನದಿಗೆ ಅಡ್ಡಲಾಗಿ ಎಪ್ಪತ್ತು ವರ್ಷಗಳ ಹಿಂದೆಯೇ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಈ ಡ್ಯಾಂನಿಂದ, ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಯನಗರ, ರಾಯಚೂರು ಜಿಲ್ಲೆಯ ಜನರಿಗೆ ಹೆಚ್ಚಿನ ಲಾಭವಾಗಿದೆ. ಆದರೆ ಸದ್ಯ ಈ ಡ್ಯಾಂನಲ್ಲಿ ಸರಿಸುಮಾರು 33 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳು ತುಂಬಿದೆ. ಈ ಹೂಳನ್ನು ತೆಗಯುವುದು ಕಷ್ಟ ಅಂತ ತಜ್ಞರು ಹೇಳಿದ್ದಾರೆ.
ಕೊಪ್ಪಳ, ಮೇ 27: ರಾಜ್ಯದ ಅನೇಕ ಜಲಾಶಯಗಳಲ್ಲಿ ದೊಡ್ಡ ಮಟ್ಟದ ಹೂಳು ಸಂಗ್ರಹವಾಗಿದೆ. ಹೂಳನ್ನು ತಗೆಯಲಿಕ್ಕಾಗದೇ ಇರುವುದರಿಂದ ಡ್ಯಾಮ್ನ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇತ್ತ ಹೂಳೆತ್ತಲು ಆಗದೇ ಇರೋದರಿಂದ ಪ್ರತಿವರ್ಷ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಹೋಗುತ್ತಿದೆ. ಇದರಿಂದ ಕೃಷಿ ಮತ್ತು ಕುಡಿಯುವ ನೀರು ಇನ್ನು ಅನೇಕ ಪ್ರದೇಶಕ್ಕೆ ಸಿಗದಂತಾಗಿದೆ. ಇದೇ ಸ್ಥಿತಿ ಇದೀಗ ತುಂಗಭದ್ರಾ ಡ್ಯಾಂಗೂ (Tungabhadra Dam) ಬಂದಿದೆ. ತುಂಗಭದ್ರಾ ಡ್ಯಾಂನಲ್ಲಿ ದೊಡ್ಡ ಪ್ರಮಾಣದ ಹೂಳು ತುಂಬಿದೆ. ಹೂಳೆತ್ತಲೂ ಆಗದೇ ಇರೋದರಿಂದ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಅನೇಕ ವರ್ಷಗಳಿಂದ ಹೆಚ್ಚಾಗುತ್ತಿದೆ.
ಜಿಲ್ಲೆಯ ಮುನಿರಾಬಾದ್ ಬಳಿ, ತುಂಗಭದ್ರಾ ನದಿಗೆ ಅಡ್ಡಲಾಗಿ ಎಪ್ಪತ್ತು ವರ್ಷಗಳ ಹಿಂದೆಯೇ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಈ ಡ್ಯಾಂನಿಂದ, ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಯನಗರ, ರಾಯಚೂರು ಜಿಲ್ಲೆಯ ಜನರಿಗೆ ಹೆಚ್ಚಿನ ಲಾಭವಾಗಿದೆ. ಕುಡಿಯುವ ನೀರು ಮತ್ತು ಕೃಷಿಗೆ ಡ್ಯಾಂ ನೀರೆ ಆಧಾರವಾಗಿದೆ. ಜೊತೆಗೆ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದ ಅನೇಕ ಜಿಲ್ಲೆಯ ರೈತರು ಈ ಡ್ಯಾಂ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಆದರೆ 133 ಟಿಎಂಸಿ ನೀರು ಸಾಮಾರ್ಥ್ಯದ ತುಂಗಭದ್ರಾ ಡ್ಯಾಂ ನಲ್ಲಿ ಇದೀಗ ಸರಿಸುಮಾರು ನೂರಾ ಐದು ಟಿಎಂಸಿ ಅಷ್ಟು ಮಾತ್ರ ನೀರು ಸಂಗ್ರಹವಾಗುತ್ತಿದೆ.
ಇದನ್ನೂ ಓದಿ: ಕೊಪ್ಪಳ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆ
ಈ ವರ್ಷ ಬರಗಾಲದಿಂದ ನೀರು ಸಂಗ್ರಹವಾಗಿಲ್ಲ. ಆದರೆ ಕಳೆದ ಎರಡು ವರ್ಷ ಬಾರಿ ಮಳೆ ಬಂದಾಗ ಕೂಡ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗಿದೆ. ನೀರು ಇದ್ದರು ಕೂಡ ಅದನ್ನು ಸಂಗ್ರಹಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ, ಡ್ಯಾಂ ನಲ್ಲಿ ತುಂಬಿರುವ ಹೂಳು. ನೀರಾವರಿ ಇಲಾಖೆಯ ತಜ್ಞರು ನೀಡಿರುವ ವರದಿ ಪ್ರಕಾರ, ತುಂಗಭದ್ರಾ ಡ್ಯಾಂ ನಲ್ಲಿ ಸರಿಸುಮಾರು 33 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳು ತುಂಬಿದೆ. ಇದರಿಂದ ಹೆಚ್ಚು ಮಳೆಯಾದಾಗ ಕೂಡಾ ಡ್ಯಾಂ ನಲ್ಲಿ ನೀರು ಸಂಗ್ರಹ ಮಾಡಿಟ್ಟುಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇನ್ನು ಅನೇಕ ಪಟ್ಟಣಗಳಿಗೆ, ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಕಲ್ಪಿಸುವ ಉದ್ದೇಶಕ್ಕೆ ಹಿನ್ನಡೆಯಾಗುತ್ತಿದೆ. ಇನ್ನು ದೊಡ್ಡ ಮಟ್ಟದಲ್ಲಿ ತುಂಬಿರುವ ಹೂಳನ್ನು ತೆಗಯುವದು ಕಷ್ಟ ಅಂತ ತಜ್ಞರು ಹೇಳಿದ್ದಾರೆ.
ಹೂಳೆತ್ತುವದು ಕಷ್ಟಾವಾಗಿರೋದರಿಂದ ಸಮಾನಂತರ ಜಲಾಶಯ ನಿರ್ಮಾಣ ಮಾಡಬೇಕು. ಆ ಮೂಲಕ ವ್ಯರ್ಥವಾಗಿ ಹರಿಯುವ ನೀರನ್ನು ಸಮಾನಂತರ ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು ಅಂತ ಕೆಲ ವರ್ಷಗಳ ಹಿಂದೇಯ ತಜ್ಞರು ಸರ್ಕಾರಕ್ಕೆ ವರದಿ ನೀಡಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳನ್ನು ತಗೆಯಲಿಕ್ಕಾಗದೇ ಇರೋದರಿಂದ, 33 ಟಿಎಂಸಿ ನೀರು ಸಂಗ್ರಹವಾಗುವಷ್ಟು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣ ಮಾಡಬೇಕು. ಆ ಮೂಲಕ ವ್ಯರ್ಥವಾಗೋ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಅಂತ ತಜ್ಞರು ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೇ ಈ ಯೋಜನೆಗೆ ಡಿಪಿಎಆರ್ ಕೂಡ ಸಿದ್ದವಾಗಿದ್ದು, ಸಾವಿರ ಕೋಟಿ ಹಣವನ್ನು ಈ ಯೋಜನೆಗೆ ಇಡಲಾಗಿತ್ತು. ಆದರೆ ನಂತರ ಅದು ಕಾರ್ಯರೂಪಕ್ಕೆ ಬರಲಿಲ್ಲ. ಇನ್ನು ಈ ಯೋಜನೆ ಜಾರಿಯಾಗಬೇಕಾದ್ರೆ ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶದ ಒಪ್ಪಿಗೆ ಕೂಡ ಬೇಕಾಗಿದೆ.
ಇದನ್ನೂ ಓದಿ: ಉದ್ಯೋಗ ಕೊಡ್ತೇವೆ ಎಂದು ಸ್ಟೀಲ್ ಪ್ಯಾಕ್ಟರಿ ಹೆಸರಲ್ಲಿ ಭೂಮಿ ಖರೀದಿ; ದಶಕವಾದ್ರೂ ಕೆಲಸ ಇಲ್ಲ, ಜಮೀನೂ ಇಲ್ಲ
ಈ ನೀರಿನ ಮೇಲೆ ಮೂರು ರಾಜ್ಯಗಳಿಗೆ ಹಕ್ಕಿದೆ. ಹೀಗಾಗಿ ಜಲಸಂಪನ್ಮೂಲ ಸಚಿವರು ಆಗಿರುವ ಉಪ ಮಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎರಡು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ನೀರಾವರಿ ಸಚಿವರಿಗೆ ಈ ಬಗ್ಗೆ ಪತ್ರ ಕೂಡಾ ಬರೆದಿದ್ದಾರಂತೆ. ಎರಡು ರಾಜ್ಯದ ಸಚಿವರು ಮತ್ತು ಸಿಎಂಗಳ ಜೊತೆ ಈ ಬಗ್ಗೆ ಚರ್ಚಿಸಿ, ಆದಷ್ಟು ಬೇಗನೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡ್ತೇವೆ ಅನೇಕ ತಿಂಗಳ ಹಿಂದೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಇನ್ನುವರಗೆ ಈ ಪ್ರಕ್ರಿಯೆ ಆರಂಭವಾಗಿಲ್ಲ.
ರಾಜ್ಯ ಸರ್ಕಾರ ಸಮಾನಂತರ ಜಲಾಶಯ ನಿರ್ಮಾಣಕ್ಕೆ ಇದೀಗ ಮತ್ತೆ ಒಲವು ತೋರಿಸುವ ಮಾತುಗಳನ್ನು ಹೇಳುತ್ತಿದೆ. ಹಿಂದಿನ ಸರ್ಕಾರ ಕೂಡ ಸಮಾನಂತರ ಜಲಾಶಯ ಆದಷ್ಟು ಬೇಗನೆ ನಿರ್ಮಾಣ ಮಾಡುವ ಮಾತುಗಳನ್ನು ಹೇಳಿತ್ತು. ಆದರೆ ಕಾರ್ಯರೂಪಕ್ಕೆ ಬರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಕೂಡ ಈ ಯೋಜನೆ ಬಗ್ಗೆ ಮತ್ತೆ ಹೆಜ್ಜೆ ಇಡುವ ಮಾತುಗಳನ್ನು ಹೇಳುತ್ತಿದೆ. ಆದರೆ ಈ ಸರ್ಕಾರದ ಅವಧಿಯಲ್ಲಿ ಕಾರ್ಯರೂಪಕ್ಕೆ ಬರುತ್ತಾ ಅನ್ನೋದಕ್ಕೆ ಕಾಲವೇ ಉತ್ತರ ಹೇಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:03 pm, Mon, 27 May 24