ಸಿಎಂ ಡಿಕೆಶಿ ಹೇಳಿ 20 ದಿನದ ಬಳಿಕ ಎಚ್ಚೆತ್ತ ಕೆಎಂಎಫ್, ಮೊಸರಿನ ದರ ಇಳಿಕೆ

ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಬರೋಬ್ಬರಿ ರೂಪಾಯಿ ಏರಿಕೆ ಬೆನ್ನಲ್ಲೇ ಸದ್ದಿಲ್ಲದೇ ಕೆಎಂಎಫ್​, ಮೊಸರಿನ ದರವೂ ಸಹ ಏರಿಕೆ ಮಾಡಿದ್ದು, ಪ್ರತಿ ಲೀಟರ್​​​ಗೆ 14 ಮತ್ತು ಅರ್ಧ ಲೀಟರ್‌ಗೆ 6 ರೂ. ಹೆಚ್ಚಿಸಲಾಗಿತ್ತು. ಇದಕ್ಕೆ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಿಎಂ ಡಿಕೆ ಶಿವಕುಮಾರ್ ಅವರು ಸ್ವಲ್ಪ ದರ ಇಳಕೆ ಮಾಡುವಮತೆ ಸೂಚನೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಕೆಎಂಎಫ್​​​​ ಮೊಸರಿನ ದರದಲ್ಲಿ ಕೊಂಚ ಇಳಿಕೆ ಮಾಡಿದೆ.

ಸಿಎಂ ಡಿಕೆಶಿ ಹೇಳಿ 20 ದಿನದ ಬಳಿಕ ಎಚ್ಚೆತ್ತ ಕೆಎಂಎಫ್,  ಮೊಸರಿನ ದರ ಇಳಿಕೆ
Kmf Curd
Edited By:

Updated on: Nov 25, 2026 | 9:17 PM

ಬೆಂಗಳೂರು,ನವೆಂಬರ್ 25: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೊಸರಿನ ದರವನ್ನು ಕನಿಷ್ಠ 2 ರೂಪಾಯಿ ಕಡಿತಗೊಳಿಸುವಂತೆ ನಿರ್ದೇಶನ ನೀಡಿ 20 ದಿನವಾದ ಬಳಿಕ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (KMF) ಎಚ್ಚೆತ್ತುಕೊಂಡಿದ್ದು,  ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಲೀಟರ್ ಮೊಸರಿನ ದರದಲ್ಲಿ 2 ರೂಪಾಯಿ ಇಳಿಕೆ ಮಾಡಿದೆ. ಪ್ರತಿ ಕೆ.ಜಿ. ಮೊಸರಿಗೆ 2 ದರ ಇಳಿಕೆ ಮಾಡಲಾಗಿದೆ. ಇನ್ನು 500 ಗ್ರಾಂ ಮೊಸರಿನ ಪ್ಯಾಕ್‌ಗೆ 1 ಕಡಿತಗೊಳಿಸಲಾಗಿದ್ದು,  ನವೆಂಬರ್ 29ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಏಕಾಏಕಿ ಸದ್ದಿಲ್ಲದೇ ಭಾರೀ ಪ್ರಮಾಣದಲ್ಲಿ ಮೊಸರಿನ ದರ ಏರಿಕೆ ಮಾಡಿದ ಬಳಿಕ ರಾಜ್ಯದಲ್ಲಿ ಜನಾಕ್ರೋಶ ಹೆಚ್ಚಾಗಿತ್ತು. ಹೀಗಾಗಿ ಸಿಎಂ ಡಿಕೆ ಶಿವಕುಮಾರ್, ಏರಿಕೆ ಮಾಡಲಾಗಿರುವ ದರದಲ್ಲಿ ಕನಿಷ್ಠ 2 ರೂ. ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದ್ರೆ, ಕೆಎಂಎಫ್​​​ ಕ್ಯಾರೇ ಎಂದಿರಲಿಲ್ಲ. ಈ ಬಗ್ಗೆ ನಿಮ್ಮ ಟಿವಿ9 ಕನ್ನಡ. ಕಾಮ್ ಇಂದು (ನವೆಂಬರ್ 25) ಬೆಳಗ್ಗೆ ಅಷ್ಟೇ  ಸಿಎಂ ಸೂಚನೆ ನೀಡಿ 20 ದಿನ ಕಳೆದರೂ ಇಳಿಕೆಯಾಗಿಲ್ಲ ನಂದಿನಿ ಮೊಸರು ಬೆಲೆ: ಇನ್ನೂ ನಿರ್ಧಾರ ಕೈಗೊಳ್ಳದ ಕೆಎಂಎಫ್  ಎನ್ನುವ ಟೈಟಲ್​​​​​​​​​​​ನೊಂದಿಗೆ  ಸುದ್ದಿ  ಮಾಡಿತ್ತು.  ಕೊನೆಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಸಿಎಂ ಸೂಚನೆ ನೀಡಿದ 20 ದಿನದ ಬಳಿಕ ಕೆಎಂಎಫ್, ಪ್ರತಿ ಲೀಟರ್ ಮೊಸರಿ ದರದಲ್ಲಿ 2 ರೂಪಾಯಿ ಕಡಿತ ಮಾಡಿದೆ.

Loading...

ಇದನ್ನೂ ಓದಿ: ಸಿಎಂ ಸೂಚನೆ ನೀಡಿ 20 ದಿನ ಕಳೆದರೂ ಇಳಿಕೆಯಾಗಿಲ್ಲ ನಂದಿನಿ ಮೊಸರು ಬೆಲೆ: ಇನ್ನೂ ನಿರ್ಧಾರ ಕೈಗೊಳ್ಳದ ಕೆಎಂಎಫ್

ಕೊಬ್ಬಿನಾಂಶದ (Fat content) ಆಧಾರದ ಮೇಲೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿಂದ 14ರೂ.ವರೆಗೆ ಹೆಚ್ಚಿಸಲಾಗಿತ್ತು. ಅದೇ ರೀತಿ ಮೊಸರಿನ ದರವನ್ನೂ ಪ್ರತಿ ಲೀಟರ್‌ಗೆ 14 ರೂ, ಮತ್ತು ಅರ್ಧ ಲೀಟರ್‌ಗೆ 6 ರೂ. ಹೆಚ್ಚಿಸಲಾಗಿತ್ತು. ಈ ಭಾರಿ ಬೆಲೆ ಏರಿಕೆಯ ವಿರುದ್ಧ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ, ಮೊಸರಿನ ದರವನ್ನು ಕನಿಷ್ಠ 2 ರೂ. ಕಡಿತಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದರು. ಆದರೆ, 20 ದಿನಗಳಾದರೂ ಯಾವುದೇ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ದೇವರು ವರ ಕೊಟ್ರೆ ಪೂಜಾರಿ ಕೊಡುತ್ತಿಲ್ಲ, ಸಿಎಂ ಮಾತಿಗೂ ಬೆಲೆ ಇಲ್ವಾ? ಅಂತೆಲ್ಲಾ ಚರ್ಚೆಗಳು ಆಗುತ್ತಿದ್ದವು. ಇದರ ಬೆನ್ನಲ್ಲೇ ಕೆಎಂಎಪ್​ ಎಚ್ಚೆತ್ತುಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Wed, 25 November 26

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us