AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಚೋದನಕಾರಿ ಪೋಸ್ಟ್​ ಶೇರ್ ಆರೋಪ: ವಿಶ್ವಹಿಂದೂ ಪರಿಷತ್​ ಮುಖಂಡ ಶರಣ್​ ಪಂಪ್​ವೆಲ್​ ವಶಕ್ಕೆ

ಪ್ರಚೋದನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಮಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ FIR ದಾಖಲಾಗಿದೆ. ಪ್ರಕರಣ ಸಂಬಂಧ ಶರಣ್ ಪಂಪ್‌ವೆಲ್ ವಶಕ್ಕೆ ಪಡೆದ ಪೊಲೀಸರು, ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳುಹಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ಪೊಲೀಸರ ಕ್ರಮದ ಬಗ್ಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಿಡಿ ಕಾರಿದ್ದಾರೆ.

ಪ್ರಚೋದನಕಾರಿ ಪೋಸ್ಟ್​ ಶೇರ್ ಆರೋಪ: ವಿಶ್ವಹಿಂದೂ ಪರಿಷತ್​ ಮುಖಂಡ ಶರಣ್​ ಪಂಪ್​ವೆಲ್​ ವಶಕ್ಕೆ
ಶರಂಣ್​ ಪಂಪ್​ವೆಲ್​ ವಶಕ್ಕೆ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Oct 31, 2025 | 4:20 PM

Share

ಮಂಗಳೂರು, ಅಕ್ಟೋಬರ್​ 31: ಪ್ರಚೋದನಕಾರಿ ಪೋಸ್ಟ್​ ಶೇರ್​ ಮಾಡಿದ ಆರೋಪದ ಹಿನ್ನಲೆ ವಿಶ್ವಹಿಂದೂ ಪರಿಷತ್​ ಮುಖಂಡ ಶರಣ್​ ಪಂಪ್​ವೆಲ್​ರನ್ನ ಮಂಗಳೂರಿನ (Mangaluru) ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ RSS ಮುಖಂಡರ ಭಾಷಣದ ತುಣುಕನ್ನು ಶರಣ್​ ಪಂಪ್​ವೆಲ್​ ಶೇರ್​ ಮಾಡಿದ್ದರು. ಈ ಹಿನ್ನಲೆ ಸುಮೋಟೋ ಕೇಸ್​ ದಾಖಲಿಸಿಕೊಂಡಿರುವ ಪೊಲೀಸರು, ವಿಕಾಸ್ ಪುತ್ತೂರು ಮತ್ತು ಶರಣ್ ಪಂಪ್​ವೆಲ್​ ವಿರುದ್ಧ FIR ದಾಖಲಿಸಿದ್ದಾರೆ.

ಶೇರ್​ ಮಾಡಲಾದ ಭಾಷಣದ ತುಣುಕಲ್ಲಿ ಏನಿದೆ?

ಕಳೆದ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಹುಟ್ಟಿದರು ಎಂದು ನಾನೊಂದು ಲೆಕ್ಕ ತೆಗಿದಿದ್ದೇನೆ. 45,700 ಮಕ್ಕಳು ಹುಟ್ಟಿದ್ದು, ಆ ಪೈಕಿ 23,200 ಮಕ್ಕಳು ಹಿಂದೂಗಳು. 22,200 ಮಕ್ಕಳು ಅಲ್ಪಸಂಖ್ಯಾತರ ಮಕ್ಕಳು. ನಮ್ಮ ಜಿಲ್ಲೆಯ ಶೇ. 78 ಜನಸಂಖ್ಯೆಗೆ ಹುಟ್ಟಿದ ಮಕ್ಕಳು 23,000, ಆದರೆ ಶೇ. 28ರಷ್ಟಿರುವವ ಸಮುದಾಯಕ್ಕೆ ಹುಟ್ಟಿದ್ದು 22,000. ಹೀಗಾದ್ರೆ ಇನ್ನೊಂದು 15 ವರ್ಷಗಳಲ್ಲಿ ನಮ್ಮ ಊರು ಎಲ್ಲಿ ಹೋಗುತ್ತೆ? ಆಗ ದೇಶ, ಸಮಾಜ ಉಳಿಯಲು ಸಾಧ್ಯವಾ? ಎಂದು ಆರೆಸ್ಸೆಸ್​ ಮುಖಂಡರು ಪ್ರಶ್ನಿಸಿರೋದು ವಿಡಿಯೋ ತುಣುಕಿನಲ್ಲಿದೆ.

ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್​​ಗೆ ದಂಡ ವಿಧಿಸಿದ ಹೈಕೋರ್ಟ್; ಏನಿದು ಪ್ರಕರಣ?

ಶರಣ್ ಪಂಪ್​ವೆಲ್ ಆಕ್ರೋಶ

ತಮ್ಮನ್ನು ವಶಕ್ಕೆ ಪಡೆದ ಬಗ್ಗೆ ಕದ್ರಿ ಪೊಲೀಸ್ ಠಾಣೆ ಮುಂಭಾಗ ಶರಣ್ ಪಂಪ್​ವೆಲ್ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಮುಖಂಡನಾಗಿ ಸಮಾಜದ ಆಗು ಹೋಗುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದೆ. ನೋಟಿಸ್ ಕೊಟ್ಟು ಅರೆಸ್ಟ್ ಮಾಡುವ ಬದಲು ಬೇರೆ ವರ್ತನೆ ತೋರಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಶರಣ್​ ಪಂಪ್​ವೆಲ್​ಗೆ ನೋಟಿಸ್​ ನೀಡಿ ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಮಿಥುನ್ ಎದುರು ಹಾಜರುಪಡಿಸಲಾಗಿದೆ. ಮುಚ್ಚಳಿಕೆ ನೀಡಿದ ಬಳಿಕ ಅವರನ್ನು ಬಿಟ್ಟು ಕಳುಹಿಸುವ ಸಾಧ್ಯತೆ ಇದೆ.

ಠಾಣೆ ಬಳಿ ಜಮಾಯಿಸಿದ್ದ ಕಾರ್ಯಕರ್ತರು

ಶರಣ್ ಪಂಪ್​ವೆಲ್​ ವಶಕ್ಕೆ ಪಡೆದ ಬೆನ್ನಲ್ಲೇ, ನೋಟಿಸ್​ ನೀಡದೆ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿ ಕದ್ರಿ ಪೊಲೀಸ್ ಠಾಣೆ ಬಳಿ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದರು. ಆ ವಿಡಿಯೋವನ್ನು ತುಂಬಾ ಜನರು ಶೇರ್ ಮಾಡಿದ್ದಾರೆ. ಹೀಗಿರುವಾಗ ಶರಣ್ ಪಂಪ್​ವೆಲ್ ಅವರನ್ನೇ ವಶಕ್ಕೆ ಪಡೆದಿರೋದು ಯಾಕೆ? ಅವರು ಹಿಂದೂ ಸಂಘಟನೆ ಮುಖಂಡ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ತಕ್ಷಣ ಕೇಸ್​ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:16 pm, Fri, 31 October 25

Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್