ಬೇಸಿಗೆ ಕಾಲಿಡುತ್ತಿದ್ದಂತೆ.. ನಾಗರಹೊಳೆ ಅರಣ್ಯಕ್ಕೆ ಬಿದ್ದ ಬೆಂಕಿ; 20 ಹೆಕ್ಟೇರ್‌ನಷ್ಟು ಅರಣ್ಯ ಆಹುತಿ

| Updated By: ಸಾಧು ಶ್ರೀನಾಥ್​

Updated on: Mar 04, 2021 | 11:57 AM

ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನಾಗರ ಹೊಳೆ ಅರಣ್ಯದ ಅಂತರದಂತೆ ವ್ಯಾಪ್ತಿಯಲ್ಲಿ ಬೆಂಕಿ ಬಿದ್ದಿದೆ. ಸುಮಾರು 20 ಹೆಕ್ಟೇರ್‌ನಷ್ಟು ಅರಣ್ಯ ಬೆಂಕಿಗೆ ಆಹುತಿಯಾಗಿದೆ.

ಬೇಸಿಗೆ ಕಾಲಿಡುತ್ತಿದ್ದಂತೆ.. ನಾಗರಹೊಳೆ ಅರಣ್ಯಕ್ಕೆ ಬಿದ್ದ ಬೆಂಕಿ; 20 ಹೆಕ್ಟೇರ್‌ನಷ್ಟು ಅರಣ್ಯ ಆಹುತಿ
ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್
Follow us on

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನಾಗರ ಹೊಳೆ ಅರಣ್ಯದ ಅಂತರದಂತೆ ವ್ಯಾಪ್ತಿಯಲ್ಲಿ ಬೆಂಕಿ ಬಿದ್ದಿದೆ. ಸುಮಾರು 20 ಹೆಕ್ಟೇರ್‌ನಷ್ಟು ಅರಣ್ಯ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಮಾಹಿತಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಅರಣ್ಯಗಳು ಬೆಂಕಿಗೆ ಆಹುತಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಮಾನವ ಈ ಕುರಿತಾಗಿ ಗಮನ ಹರಿಸಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಮರಗಳ ನಾಶ ಮುಂದಿನ ಪರಿಸರಕ್ಕೆ ಹಾನಿ. ಉತ್ತಮ ಗಾಳಿ, ಮಳೆ-ಬೆಳೆಯ ಆಧಾರ ಮರಗಿಡಗಳು, ದಟ್ಟವಾದ ಅರಣ್ಯಗಳು. ಹಾಗಾಗಿ ಅರಣ್ಯ ಸಂರಕ್ಷಣೆಯ ಕುರಿತಾಗಿ ಗಮನ ನೀಡದೇ ಹೋದರೆ ಮುಂದಿನ ಹವಾಮಾನ ಕೆಡುವುದರ ಬಗ್ಗೆ ಯಾವುದೇ ಸಂದೇಹವಿಲ್ಲ. ಕಾಡ್ಗಿಚ್ಚಿನಿಂದ, ವಾಸುಸುತ್ತಿರುವ ಪ್ರಾಣಿಗಳಿಗೆ ಹಾನಿಯುಂಟಾಗುತ್ತಿದೆ ಜೊತೆಗೆ ಅದೆಷ್ಟೋ ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ.

ಅರಣ್ಯ ಸಂರಕ್ಷಣೆಯ ಕುರಿತಾಗಿ ಅದೆಷ್ಟೋ ಯೋಜನೆಗಳು ರೂಪುಗೊಳ್ಳುತ್ತಿವೆ. ಜೀವ ವೈವಿಧ್ಯ ಮಂಡಳಿಯಿಂದ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇದು ಫಲಕಾರಿಯಾಗಿ ನೆರವೇರುವುದಕ್ಕೆ ಜನರೂ ಕೂಡಾ ಸಹಕರಿಸುವುದು ಉತ್ತಮ. ನಮ್ಮಸುತ್ತ ಮುತ್ತಲಿನ ಮರಗಿಡಗಳನ್ನು ಕಾಪಾಡಿಕೊಂಡು ಹೋಗುವುದಲ್ಲದೇ, ಪ್ರಾಣಿಗಳ ವಾಸಸ್ಥಾನವಾಗಿರುವ ಅರಣ್ಯವನ್ನು ಕಾಪಾಡಿಕೊಳ್ಳುವುದು ಜೀವ ರಕ್ಷಣೆಯ ಒಂದು ಭಾಗ. ಹಾಗಾಗಿ ಅರಣ್ಯ ಸಂರಕ್ಷಣೆಯ ಬಗೆಗೆ ಎಚ್ಚರವಹಿಸಬೇಕಾಗಿದೆ.

ಇದನ್ನೂ ಓದಿ: ಎಲ್ಲೇ ಬೆಂಕಿ ಬಿದ್ರೂ ಮೊಬೈಲ್​ಗೆ ಮೆಸೇಜ್: ಕಾಡ್ಗಿಚ್ಚು ನಿಯಂತ್ರಣಕ್ಕೆ ಹೊಸ ಪ್ಲಾನ್!

ಇದನ್ನೂ ಓದಿ: ಬೇಸಿಗೆಗೆ ಮುನ್ನವೇ ಕಪ್ಪತಗುಡ್ಡಕ್ಕೆ ಬೆಂಕಿ: ಕಾಡು ಕೊತ್ತಂಬರಿ ಸೇರಿದಂತೆ ಅರಣ್ಯದ ನಾನಾ ಬಗೆಯ ಮರಗಿಡಗಳಿಗೆ ಕುತ್ತು