‘ವೃತ್ತಿ’ಧರ್ಮಕ್ಕೆ ದ್ರೋಹ ಬಗೆದು ಮಾದಕವಸ್ತು ಪಾರ್ಸೆಲ್ ಮಾಡ್ತಿದ್ದ ಖದೀಮ ಅಂಚೆ ಉದ್ಯೋಗಿಗಳು!
ಬೆಂಗಳೂರು: ಅಂಚೆ ಎಂಬುದು ಪಾರಿವಾಳದ ಕಾಲದಿಂದಲೂ ಪವಿತ್ರ ಮತ್ತು ಮಹತ್ವದ ಸಾಧನವಾಗಿತ್ತು. ಆದ್ರೆ ಕಾಲ ಬದಲಾದಂತೆ ಅಂಚೆಯ ಸ್ವರೂಪವೇ ಬದಲಾಗಿದೆ. ಈಗಂತೂ ಯಾವ ಮಟ್ಟಕ್ಕೆ ಬಂದಿಳಿದಿದೆ ಅಂದ್ರೆ ಇದೇ ಅಂಚೆಯಣ್ಣಗಳು ತಮ್ಮ ವೃತ್ತಿಧರ್ಮಕ್ಕೆ ವಿರುದ್ಧವಾಗಿ ಇಂದಿನ ಯುವಜನತೆಯ ಹಾದಿತಪ್ಪಿಸುವಂತಹ ಕುಕೃತ್ಯದಲ್ಲಿ ತೊಡಗಿದ್ದಾರೆ. ಡ್ರಗ್ಸ್ ಜಾಲದಲ್ಲಿ ತೊಡಗಿದ್ದ ಕೇಂದ್ರ ಸರ್ಕಾರಿ ನೌಕಕರು ಅರೆಸ್ಟ್! ಒಂದ್ ಸರ್ಕಾರಿ ಕೆಲಸ ಸಿಕ್ರೆ ಸಾಕಪ್ಪ. ಲೈಫು ಸೆಟಲ್ ಅಂತ ಅದೆಷ್ಟೊ ಜನರು ಅಂದ್ಕೊತಾರೆ. ಆದ್ರೆ, ಇಲ್ಲಿ ಕೆಲ ಮಿಕಗಳಿವೆ. ಒಳ್ಳೆ ಕೆಲಸ. ಕೈತುಂಬ […]
ಬೆಂಗಳೂರು: ಅಂಚೆ ಎಂಬುದು ಪಾರಿವಾಳದ ಕಾಲದಿಂದಲೂ ಪವಿತ್ರ ಮತ್ತು ಮಹತ್ವದ ಸಾಧನವಾಗಿತ್ತು. ಆದ್ರೆ ಕಾಲ ಬದಲಾದಂತೆ ಅಂಚೆಯ ಸ್ವರೂಪವೇ ಬದಲಾಗಿದೆ. ಈಗಂತೂ ಯಾವ ಮಟ್ಟಕ್ಕೆ ಬಂದಿಳಿದಿದೆ ಅಂದ್ರೆ ಇದೇ ಅಂಚೆಯಣ್ಣಗಳು ತಮ್ಮ ವೃತ್ತಿಧರ್ಮಕ್ಕೆ ವಿರುದ್ಧವಾಗಿ ಇಂದಿನ ಯುವಜನತೆಯ ಹಾದಿತಪ್ಪಿಸುವಂತಹ ಕುಕೃತ್ಯದಲ್ಲಿ ತೊಡಗಿದ್ದಾರೆ.
ಡ್ರಗ್ಸ್ ಜಾಲದಲ್ಲಿ ತೊಡಗಿದ್ದ ಕೇಂದ್ರ ಸರ್ಕಾರಿ ನೌಕಕರು ಅರೆಸ್ಟ್! ಒಂದ್ ಸರ್ಕಾರಿ ಕೆಲಸ ಸಿಕ್ರೆ ಸಾಕಪ್ಪ. ಲೈಫು ಸೆಟಲ್ ಅಂತ ಅದೆಷ್ಟೊ ಜನರು ಅಂದ್ಕೊತಾರೆ. ಆದ್ರೆ, ಇಲ್ಲಿ ಕೆಲ ಮಿಕಗಳಿವೆ. ಒಳ್ಳೆ ಕೆಲಸ. ಕೈತುಂಬ ಸಂಬಳ ಎಲ್ಲವೂ ಇತ್ತು. ಆದ್ರೆ, ಮಾಡಬಾರದ್ದನ್ನ ಮಾಡಿ ಈಗ ಖಾಕಿ ಕೈಗೆ ತಗಲಾಕ್ಕೊಂಡಿದ್ದಾರೆ. ಹರಳು ಹರಳಿನಂತಿರೋ ಇದು ಸಕ್ಕರೆಯಲ್ಲ. ಚುಕ್ಕಿ ಚುಕ್ಕಿಯಂತಿರೋ ಇದೆಲ್ಲ ಡಿಸೈನ್ ಐಟಂಗಳೂ ಅಲ್ಲ. ಪಕ್ಕಾ ಕವರಿಂಗ್ ಆಗಿರೋ ಇದಿಷ್ಟು ಖತರ್ನಾಕ್ ಮೆಟಿರಿಯಲ್. ಒಂದೊಂದು ಗುಳಿಗೆಯೂ ಸಿಕ್ಕಾಪಟ್ಟೆ ದುಬಾರಿ.
ವಿದೇಶದಿಂದ ಬರುತ್ತಿದ್ದ ದುಬಾರಿ ಮೌಲ್ಯದ ಡ್ರಗ್ಸ್ ಮೆಟಿರಿಯಲ್! ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೆ ಹರಡಿರೋ ನಶಾ ಲೋಕವನ್ನ ಸಿಸಿಬಿ ಪೊಲೀಸರು ಜಾಲಾಡ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ, ಸುದ್ದಗುಂಟೆ ಪಾಳ್ಯ ಮತ್ತು ಕೆಂಗೇರಿ ಅಪಾರ್ಟ್ಮೆಂಟ್ನಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಖತರ್ನಾಕ್ನನ್ನ ಪೊಲೀಸರು ಅರೆಸ್ಟ್ ಮಾಡಿದ್ರು. ಇದೀಗ ಅಂಚೆ ಇಲಾಖೆಯಲ್ಲಿ ಇದ್ಕೊಂಡು ಡ್ರಗ್ ಸ್ಮಗ್ಲಿಂಗ್ನಲ್ಲಿ ತೊಡಗಿಕೊಂಡಿದ್ದ, ಸುಬ್ಬು , ರಮೇಶ್ ಕುಮಾರ್, ಜಯರಾಜ್ ಮತ್ತು ಮಜೀದ್ ಅಹಮದ್ ಅನ್ನೋರನ್ನ ಬಂಧಿಸಿದ್ದಾರೆ.
ಜಿಪಿಓನಲ್ಲಿ (General Post Office) ಡಿ ದರ್ಜೆ ನೌಕರನಾಗಿದ್ದ ಸುಬ್ಬು, ಕಸ್ಟಮ್ಸ್ ವಿಭಾಗದ ರಮೇಶ್ ಕುಮಾರ್ ಮತ್ತು ಭದ್ರತಾ ವಿಭಾಗದ ಜಯರಾಜ್. ಎಲ್ಲರೂ ಸೇರಿ ಪಕ್ಕಾ ಪ್ಲಾನ್ ಮಾಡಿದ್ರು. ನಕಲಿ ಅಡ್ರೆಸ್ ನೀಡಿ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ಅನ್ನ ಆಮದು ಮಾಡಿಕೊಳ್ತಿದ್ರು. ಜಿಪಿಒಗೆ ಬರುತ್ತಿದ್ದ ಡ್ರಗ್ಸ್ ಪಾರ್ಸೆಲ್ಗಳನ್ನ ಯಾರಿಗೂ ಗೊತ್ತಾಗದಂತೆ ಸಾಗಿಸ್ತಿದ್ರು. ಡೆನ್ಮಾರ್ಕ್, ನೆದರ್ಲ್ಯಾಂಡ್, ಯುಎಸ್ನಿಂದೆಲ್ಲ ಬ್ರೌನ್ ಶುಗರ್, ಎಕ್ಸ್ಡೆಸಿ ಮಾತ್ರೆ ತರಿಸಿಕೊಳ್ತಿದ್ದ ಚಾಲಾಕಿಗಳು, ಡ್ರಗ್ ಪೆಡ್ಲರ್ ಸಂಪರ್ಕದಲ್ಲಿ ಅದನ್ನೆಲ್ಲ ಮಾರುತ್ತಿದ್ರು. ಆದ್ರೆ, ಸಿಸಿಬಿ ಪೊಲೀಸರು ಬೀಸಿದ ಬಲೆಗೆ ಎಲ್ಲರೂ ತಗಲಾಕ್ಕೊಂಡಿದ್ದಾರೆ.
Published On - 8:12 am, Tue, 31 December 19