8 ವರ್ಷದ ಹಿಂದೆ ನಿತ್ಯಾನಂದ ಆಶ್ರಮಕ್ಕೆ ಬಂದಿದ್ದ ವಿದೇಶಿ ಪ್ರಜೆ ನಾಪತ್ತೆ

ಆಶ್ರಮದಲ್ಲಿ ತಾಯಿಯ ಜೊತೆಗೆ ಇದ್ದ ಕ್ರಿಶಾಂತ್ ಭಾಸ್ಕರನ್ ಜುಲೈ 9 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶೌಚಗೃಹಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ಅಲ್ಲದೇ ಲಾಕರ್​ನಲ್ಲಿದ್ದ ಪಾಸ್ ಪೋರ್ಟ್ ಸಹಾ ಕಾಣೆಯಾಗಿದೆ. ನಾವು ಆಶ್ರಮದಲ್ಲಿ ಹುಡುಕಿದ್ದೇವೆ.

8 ವರ್ಷದ ಹಿಂದೆ ನಿತ್ಯಾನಂದ ಆಶ್ರಮಕ್ಕೆ ಬಂದಿದ್ದ ವಿದೇಶಿ ಪ್ರಜೆ ನಾಪತ್ತೆ
ನಾಪತ್ತೆಯಾಗಿರುವ ಕ್ರಿಶಾಂತ್ ಭಾಸ್ಕರನ್
Edited By:

Updated on: Jul 11, 2021 | 9:25 AM

ರಾಮನಗರ: ತಾಲೂಕಿನ ಬಿಡದಿ ಬಳಿ ಇರುವ ನಿತ್ಯಾನಂದ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದ ವಿದೇಶಿ ಪ್ರಜೆಯೊಬ್ಬ ನಾಪತ್ತೆಯಾಗಿದ್ದು, ಆತನನ್ನ ಹುಡುಕಿಕೊಡುವಂತೆ ಆತನ ತಾಯಿ ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಲೇಷಿಯಾ ಪ್ರಜೆಯಾದ 23 ವರ್ಷದ ಕ್ರಿಶಾಂತ್ ಭಾಸ್ಕರನ್ ನಾಪತ್ತೆಯಾಗಿರುವ ಯುವಕ. ಕ್ರಿಶಾಂತ್ ಭಾಸ್ಕರನ್ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಎಂಟು ವರ್ಷಗಳ ಹಿಂದೆ ಮಲೇಷಿಯಾದಿಂದ ಬಿಡದಿಯ ನಿತ್ಯಾನಂದ ಆಶ್ರಮಕ್ಕೆ ತನ್ನ ತಾಯಿಯೊಂದಿಗೆ ಬಂದಿದ್ದ.

ಆಶ್ರಮದಲ್ಲಿ ತಾಯಿಯ ಜೊತೆಗೆ ಇದ್ದ ಕ್ರಿಶಾಂತ್ ಭಾಸ್ಕರನ್ ಜುಲೈ 9 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶೌಚಗೃಹಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ಅಲ್ಲದೇ ಲಾಕರ್​ನಲ್ಲಿದ್ದ ಪಾಸ್ ಪೋರ್ಟ್ ಸಹಾ ಕಾಣೆಯಾಗಿದೆ. ನಾವು ಆಶ್ರಮದಲ್ಲಿ ಹುಡುಕಿದ್ದೇವೆ. ಆದರೆ ಮಗ ಎಲ್ಲೂ ಕಾಣಲಿಲ್ಲ ಅಂತ ಕ್ರಿಶಾಂತ್ ಭಾಸ್ಕರನ್ ತಾಯಿ ಪುಷ್ಪರಾಣಿ ರಾಮಲಿಂಗಂ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಜೊತೆಗೆ ಕ್ರಿಶಾಂತ್ ಭಾಸ್ಕರನ್ ಮಾನಸಿಕ ಅಸ್ವತ್ಥನಾಗಿದ್ದು, ತಕ್ಷಣವೇ ಕೋಪಗೊಳ್ಳುತ್ತಾನೆ. ಎದುರಿಗಿರುವ ವ್ಯಕ್ತಿಗಳ ಮೇಲೆ ವಿನಾಕಾರಣ ಹಲ್ಲೆ ಮಾಡುವುದು ಮತ್ತು ವಸ್ತುಗಳನ್ನ ಒಡೆದು ಹಾಕುವುದನ್ನ ಮಾಡುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ಇದನ್ನೂ ಓದಿ

ನಿಮ್ಮಲ್ಲಿ ಕೊರೊನಾ ಸೋಂಕಿದೆ; ಹಾಗಾಗಿ ನನ್ನ ಕೈಲಾಸಕ್ಕೆ ನೀವ್ಯಾರೂ ಬರಬೇಡಿ ಎಂದು ಭಾರತೀಯರಿಗೆ ಹೇಳಿದ ನಿತ್ಯಾನಂದ!

ಎಲ್ಲಿದ್ದಾನೆ Nithyananda Swamiji? ತಲೆಮರೆಸಿಕೊಂಡಿರುವ ನಿತ್ಯಾನಂದ ಸ್ವಾಮಿ ಹುಡುಕುವಲ್ಲಿ ವಿಫಲವಾದ್ರಾ ಅಧಿಕಾರಿಗಳು

(Foreign Citizen missing in Nityananda Ashram at Ramanagara)

Web contact

TV9 Kannada

Read More
Follow Us