‘ಗಣಿಗಾರಿಕೆಯಿಂದ ಭಾರಿ ಅನಾಹುತ ಆಗುತ್ತೆ ಅಂತಾ ಸಂಸತ್‌ನಲ್ಲಿ ಮಾತಾಡ್ತಾರೆ.. ಆದ್ರೆ ಇಲ್ಲಿ ರಾಯಲ್ಟಿ ಬರ್ತಿಲ್ಲ ಅಂತಾನೂ ಹೇಳ್ತಾರೆ’

‘ಗಣಿಗಾರಿಕೆಯಿಂದ ಭಾರಿ ಅನಾಹುತ ಆಗುತ್ತೆ ಅಂತಾ ಸಂಸತ್‌ನಲ್ಲಿ ಮಾತಾಡ್ತಾರೆ.. ಆದ್ರೆ ಇಲ್ಲಿ ರಾಯಲ್ಟಿ ಬರ್ತಿಲ್ಲ ಅಂತಾನೂ ಹೇಳ್ತಾರೆ’
ಸುಮಲತಾ (ಎಡ); ಹೆ.ಡಿ. ಕುಮಾರಸ್ವಾಮಿ (ಬಲ)

ಕೆಲವು ರಾಜಕಾರಣಿಗಳು ಸಂಸತ್‌ನಲ್ಲಿ ಹೇಳ್ತಾರೆ ರಾಜ್ಯದಲ್ಲಿ ಗಣಿಗಾರಿಕೆಯಿಂದ ಭಾರಿ ಅನಾಹುತ ಆಗುತ್ತೆ ಅಂತಾ. ಭಾರಿ ಅನಾಹುತ ಆಗುತ್ತೆ ಎಂದು ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಗಣಿಗಾರಿಕೆಯಿಂದ ಇಲ್ಲಿ ರಾಯಲ್ಟಿ ಬರ್ತಿಲ್ಲ ಅಂತಾನೂ ಹೇಳುತ್ತಾರೆ ಎಂದು ಮಂಡ್ಯ ಸಂಸದೆ ಸುಮಲತಾ ಬಗ್ಗೆ ಮಾಜಿ ಸಿಎಂ ಹೆಚ್.​ಡಿ.ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

KUSHAL V

|

Feb 23, 2021 | 7:30 PM

ಮೈಸೂರು: ಕೆಲವು ರಾಜಕಾರಣಿಗಳು ಸಂಸತ್‌ನಲ್ಲಿ ಹೇಳ್ತಾರೆ ರಾಜ್ಯದಲ್ಲಿ ಗಣಿಗಾರಿಕೆಯಿಂದ ಭಾರಿ ಅನಾಹುತ ಆಗುತ್ತೆ ಅಂತಾ. ಭಾರಿ ಅನಾಹುತ ಆಗುತ್ತೆ ಎಂದು ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಗಣಿಗಾರಿಕೆಯಿಂದ ಇಲ್ಲಿ ರಾಯಲ್ಟಿ ಬರ್ತಿಲ್ಲ ಅಂತಾನೂ ಹೇಳುತ್ತಾರೆ ಎಂದು ಮಂಡ್ಯ ಸಂಸದೆ ಸುಮಲತಾ ಬಗ್ಗೆ ಮಾಜಿ ಸಿಎಂ ಹೆಚ್.​ಡಿ.ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಆ ಗಣಿಗಾರಿಕೆಯ ಮಧ್ಯವರ್ತಿಗಳನ್ನು ಭೇಟಿಗೆ ಕಳಿಸ್ತಾರೆ. DySP ಯಾರನ್ನೋ ಭೇಟಿ ಮಾಡಲು ಕಳುಹಿಸುತ್ತಾರೆ. ಇದರ ಅರ್ಥ ಏನು ಎಂದು H.D.ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಜಯನಗರ ಹೋಟೆಲ್‌ನಲ್ಲಿ ಸಭೆ ಮಾಡಿದವರು ಯಾರು? ಸರ್ಕಾರದ ಖಜಾನೆ ತುಂಬಿಸಲು ಮೀಟಿಂಗ್ ಮಾಡಿದ್ರಾ? ಅಥವಾ ತಮ್ಮ ಸ್ವಂತ ಖಜಾನೆ ತುಂಬಿಸಲು ಮಾಡಿದ್ರಾ? ಎಂದು ಸಂಸದೆ ಸುಮಲತಾ ಹೆಸರೇಳದೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಅಂದ ಹಾಗೆ, ಸಂಸದೆ ಸುಮಲತಾ ಇತ್ತೀಚೆಗೆ ಸಂಸತ್‌ನಲ್ಲಿ ಗಣಿಗಾರಿಕೆ ಬಗ್ಗೆ ಮಾತಾಡಿದ್ದರು. ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ಮಾತಾಡಿದ್ದರು.

‘ಮಾಹಿತಿ ಸಿಕ್ಕ ಮರುಕ್ಷಣವೇ ಕ್ರಮ ಏಕೆ ಕೈಗೊಳ್ಳಲಿಲ್ಲ?’ ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕಲ್ಲು ಗಣಿಗಾರಿಕೆಗೆ ಅಮೋನಿಯಂ ಸಲ್ಫೇಟ್ ಕೂಡ ಬಳಕೆಯಾಗ್ತಿದೆ. ಜಿಲೆಟಿನ್ ಮಾತ್ರವಲ್ಲ ಅಮೋನಿಯಂ ಸಲ್ಫೇಟ್ ಬಳಸುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಗಣಿ ಮಾಲೀಕರು ಬೇಗ ದುಡ್ಡು ಮಾಡುವುದಕ್ಕೋಸ್ಕರ ಜಿಲೆಟಿನ್‌ಗಿಂತಲೂ ಹೆಚ್ಚು ಸಾಮರ್ಥ್ಯದ ಸ್ಫೋಟಕ ಬಳಸುತ್ತಿದ್ದಾರೆ. ಹೆಚ್ಚಿನ ಆಳಕ್ಕೆ ಹೋಗಲು ಅಮೋನಿಯಂ ಸಲ್ಫೇಟ್ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ನನಗೆ ಇದೆ. ಒಂದೂವರೆ ತಿಂಗಳ ಅವಧಿಯಲ್ಲಿ 2ನೇ ಸ್ಫೋಟ ನಡೆದಿದೆ. ಘಟನೆ ನಡೆದಾಗ ಸರ್ಕಾರ ಕ್ರಮಕೈಗೊಳ್ಳುವುದಾಗಿ ಹೇಳುತ್ತೆ. ಆದರೆ ಏನೂ ಮಾಡುವುದಿಲ್ಲವೆಂದು ಕುಮಾರಸ್ವಾಮಿ ಕಿಡಿ ಕಾರಿದರು. ಕಳೆದ 15 ದಿನಗಳ ಹಿಂದೆಯೇ ಮಾಹಿತಿಯಿತ್ತು ಎಂದಿದ್ದರು. ಜಿಲೆಟಿನ್ ಸಾಗಾಟ ಬಗ್ಗೆ ಮಾಹಿತಿ ಇತ್ತು ಎಂದಿದ್ದಾರೆ. ಸಚಿವರೊಬ್ಬರೇ ಈ ರೀತಿಯಾಗಿ ಹೇಳಿದ್ದಾರೆ. ಮಾಹಿತಿ ಸಿಕ್ಕ ಮರುಕ್ಷಣವೇ ಕ್ರಮ ಏಕೆ ಕೈಗೊಳ್ಳಲಿಲ್ಲ? ಸ್ಫೋಟಕಗಳ ಸಾಗಣೆ ನಿಯಂತ್ರಿಸಲು ಕಾನೂನು ಎಲ್ಲಿದೆ? ಎಂದು ಪ್ರಶ್ನಿಸಿದರು.

‘ಈಗಿನ‌ ಬಿಜೆಪಿ ಸರ್ಕಾರ ವರ್ಸ್ಟ್ ಆಗಿದೆ’ ಬಹುತೇಕ ಗಣಿ, ಕ್ವಾರಿಗಳಲ್ಲಿ ಜನಪ್ರತಿನಿಧಿಗಳ ಪಾತ್ರವಿದೆ. ಗಣಿ, ಕ್ವಾರಿಗಳಲ್ಲಿ ಜನಪ್ರತಿನಿಧಿಗಳ ಪಾತ್ರವೇ ಹೆಚ್ಚಾಗಿದೆ. ಆದ್ದರಿಂದಲೇ ಅಧಿಕಾರಿಗಳೂ ಕ್ರಮ ಕೈಗೊಳ್ಳುವುದಿಲ್ಲ. ಇದು ಕೇವಲ ಪೊಲೀಸ್ ಇಲಾಖೆಯ ವೈಫಲ್ಯವಲ್ಲ, ವಿಧಾನಸೌಧದ 3ನೇ ಮಹಡಿಯಿಂದಲೂ ವೈಫಲ್ಯಗಳಿವೆ. ಅವರು ಬಿಗಿಯಾಗಿದ್ದರೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು. ಅಧಿಕಾರಿಗಳು ಅಚ್ಚುಕಟ್ಟಾಗಿ ತಮ್ಮ ಕೆಲಸ ಮಾಡುತ್ತಿದ್ದರು. ಈಗಿನ‌ ಬಿಜೆಪಿ ಸರ್ಕಾರ ವರ್ಸ್ಟ್ ಆಗಿದೆ. ಹಿಂದಿನ ಬಿಜೆಪಿ ಸರ್ಕಾರಕ್ಕಿಂತಲೂ ಇದು ವರ್ಸ್ಟ್ ಆಗಿದೆ. ಸರ್ಕಾರವೇ ಇಲ್ಲ ಎನ್ನುವ ಮಟ್ಟಿಗೆ ಆಡಳಿತ ನಡೆಯುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ಸರ್ಕಾರ ಇದನ್ನಾದರೂ ಗಂಭೀರವಾಗಿ ಪರಿಗಣಿಸಬೇಕು. ಒಂದು ಕಡೆ ಗಣಿಗಾರಿಕೆ ಅಕ್ರಮ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಗಣಿಗಾರಿಕೆ ನಿಲ್ಲಿಸುವುದಿಲ್ಲ ಅಂತಾರೆ. ದೊಡ್ಡ ಮಟ್ಟದಲ್ಲಿ ಸ್ಫೋಟ ಆದರೆ ಸುದ್ದಿ ಆಗುತ್ತೆ ಅಷ್ಟೆ. ಇಲ್ಲವಾದರೆ ಇವೆಲ್ಲವೂ ಮತ್ತೆ ಮುಂದುವರಿಯುತ್ತವೆ ಎಂದು ಹೇಳಿದರು.

ಇದನ್ನೂ ಓದಿ: Jaggesh | ವಿವಾದದ ನಡುವೆಯೂ ವೈವಾಹಿಕ ಜೀವನಕ್ಕೆ ಕಾಲಿಡೋ ಸೀನ್​ನಲ್ಲಿ ಮಿಂಚಿದ ನವರಸ ನಾಯಕ!

Follow us on

Related Stories

Most Read Stories

Click on your DTH Provider to Add TV9 Kannada