ಮಾಜಿ ಸಿಎಂ ನಿಜಲಿಂಗಪ್ಪ ಮನೆ ಮಾರಾಟಕ್ಕೆ! ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ

ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಎಸ್​ ನಿಜಲಿಂಗಪ್ಪ ಅವರೂ ಒಬ್ಬರು. ಕಾಂಗ್ರೆಸ್​ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್​ ನಿಜಲಿಂಗಪ್ಪ ಅವರು ಬದುಕಿ, ಬಾಳಿರುವ ಚಿತ್ರದುರ್ಗದಲ್ಲಿನ ವಿನಯ ಮನೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಮಾರಾಟಕ್ಕೆ ಇದೆ!!!

ಮಾಜಿ ಸಿಎಂ ನಿಜಲಿಂಗಪ್ಪ ಮನೆ ಮಾರಾಟಕ್ಕೆ! ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ
ಎಸ್​ ನಿಜಲಿಂಗಪ್ಪ ಮನೆ ಮಾರಾಟಕ್ಕೆ
Follow us
ವಿವೇಕ ಬಿರಾದಾರ
|

Updated on:Nov 09, 2024 | 2:51 PM

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್​ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ!! ಇಂತಹ ಒಂದು ಜಾಹಿರಾತು ಎಸ್​​ ನಿಜಲಿಂಗಪ್ಪ ಅವರ ಪುತ್ರ ಎಸ್​ಎನ್​ ಕಿರಣಶಂಕರ್​​ ನೀಡಿದ್ದಾರೆ. ಸ್ಮಾರಕವಾಗಬೇಕಿದ್ದ ಎಸ್​ ನಿಜಲಿಂಗಪ್ಪ ಅವರ ಮನೆ ಖಾಸಗಿ ವ್ಯಕ್ತಿಗಳ ಪಾಲಾಗುವ ಆತಂಕ ಎದುರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರವಿದ್ದರೂ ತಮ್ಮ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್​ ನಿಜಲಿಂಗಪ್ಪ ಅವರನ್ನು ಕಡೆಗಣಿಸಿದ್ದು ಮಾತ್ರ ಶೋಚನೀಯವಾಗಿದೆ.

ಚಿತ್ರದುರ್ಗ ನಗರದ ವಾರ್ಡ್​ ನಂ 32 ವಿಪಿ ಬಡಾವಣೆಯ ಡಿಸಿ ಬಂಗಲೆಯ ಹತ್ತಿರ ಇರುವ 117 X 130 ಅಡಿ ವಿಸ್ತೀರ್ಣದ ಶ್ವೇತ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳು ವಾಸವಾಗಿದ್ದರು. ಈ ಮನೆಯನ್ನು ಹತ್ತು ಕೋಟಿ ರೂ.ಗೆ ಮಾರಾಟ ಮಾಡಲು ನಿಜಲಿಂಗಪ್ಪ ಅವರ ಪುತ್ರ ಎಸ್​ಎನ್​ ಕಿರಣಶಂಕರ್​ ಮುಂದಾಗಿದ್ದಾರೆ.

“ಚಿತ್ರದುರ್ಗ ನಗರದ ವಾರ್ಡ ನಂ. 32 ವಿ.ಪಿ ಬಡಾವಣೆಯ ಡಿ.ಸಿ ಬಂಗಲೆಯ ಹತ್ತಿರ ಇರುವ 117 X 130 ಅಡಿ ಅಳತೆಯ ಹತ್ತು ಕೋಟಿಗೂ ಹೆಚ್ಚು ಬೆಲೆ ಬಾಳುವ ನಿವೇಶನ ಶ್ರೀ ಎಸ್ ನಿಜಲಿಂಗಪ್ಪನವರ ನಿವಾಸ ‘ವಿನಯ’ ಮನೆ ಮಾರಾಟಕ್ಕಿದೆ, ಆಸಕ್ತಿಉಳ್ಳವರು, ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಬೆಳಗ್ಗೆ 10.30 ರಿಂದ 11.30 ರ ಒಳಗೆ ಸಂಪರ್ಕಿಸುವುದು” ಎಂದು ಕಿರಣಶಂಕರ್​ ಜಾಹಿರಾತು ನೀಡಿದ್ದಾರೆ. ಸರ್ಕಾರದ ನಿರ್ಲಕ್ಷದಿಂದ ಮನೆ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದ್ದು ಮಾತ್ರ ಆತಂಕದ ವಿಷಯವಾಗಿದೆ.

ಈ ವಿಚಾರವಾಗಿ ಟಿವಿ9 ಡಿಜಿಟಲ್​​ನೊಂದಿಗೆ ಮಾತನಾಡಿದ ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಅವರ ಪುತ್ರ ಕಿರಣಶಂಕರ್​ ಮಾತನಾಡಿ, “ಸರ್ಕಾರ ತಮ್ಮನ್ನು ಕಡೆಗಣಿಸಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ನಾವು ಹೈರಾಣಾಗಿದ್ದೇವೆ” ಎಂದು ಆರೋಪ ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ನಿಜಲಿಂಗಪ್ಪ ಅವರು ವಾಸವಾಗಿದ್ದ “ವಿನಯ” ಮನೆಯನ್ನು ಸರ್ಕಾರವೇ ಕೊಂಡುಕೊಳ್ಳಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ನಾಲ್ಕು ಸಭೆಗಳನ್ನು ಮಾಡಲಾಗಿತ್ತು. ಈ ಸಭೆಗಳಲ್ಲಿ ನಿಜಲಿಂಗಪ್ಪ ಅವರ ಮನೆ ಖರೀದಿಸಲು ನಿರ್ಧರಿಸಲಾಗಿದ್ದು, ಸ್ಮಾರಕ ಮಾಡಲು ತೀರ್ಮಾನಿಸಲಾಗಿತ್ತು.

ಮನೆ ಕೊಂಡುಕೊಳ್ಳಲು ಸಭೆಗಳಲ್ಲಿ ಸಮ್ಮತಿ ಸೂಚಿಸಿದ್ದ ಸರ್ಕಾರ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. ಕಿರಣಶಂಕರ್​ ಅವರು ಸರ್ಕಾರಕ್ಕೆ ಮನೆ ಮಾರಾಟ ಮಾಡಲು ಮುಂದಾದರೂ, ಸರ್ಕಾರ ಮಾತ್ರ ತಾಂತ್ರಿಕ ಕಾರಣ, ಕಾನೂನು ತೊಡಕು ನೆಪ ಹೇಳಿ ಮನೆ ಕೊಂಡುಕೊಳ್ಳಲು ಹಿಂದೇಟು ಹಾಕಿದೆ.

ಈ ಮನೆಯನ್ನು ನಿಜಲಿಂಗಪ್ಪ ಅವರು ತಮ್ಮ ಮೊಮ್ಮಗ ವಿನಯ್​ ಅವರ ಹೆಸರಿಗೆ ವಿಲ್​ ಬರೆದಿದ್ದಾರೆ. ಹೀಗಾಗಿ, ಈ ಮನೆಯನ್ನು ಸಬ್​ರಿಜಿಸ್ಟಾರ್​ ಮೂಲಕ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ನಿಜಲಿಂಗಪ್ಪ ಪುತ್ರ ಈ ಮನೆ ಅನುಭವಿಸಿದ ಬಳಿಕ ವಿನಯ್​ಗೆ ಮನೆ ಸೇರಬೇಕು ಎಂದು ವಿಲ್​ನಲ್ಲಿದೆ. ವಿನಯ್​ ಅವರ ಹೆಸರಿಗೆ ರಿಜಿಸ್ಟ್ರೇಶನ್​ ಆಗದೇ ಸರ್ಕಾರಕ್ಕೆ ಮನೆ ಖರೀದಿಸಲು ಸಾಧ್ಯವಿಲ್ಲ. ಆದರೆ, ಸರ್ಕಾರ ವಿನಯ್​ ಅವರ ಹೆಸರಿಗೆ ರಿಜಿಸ್ಟ್ರೇಶನ್​ ಮಾಡಲು ಮುಂದಾಗುತ್ತಿಲ್ಲ. ಇನ್ನು, ವಿನಯ್​ ವಿದೇಶದಲ್ಲಿದ್ದಾರೆ. ಆದರೆ, ಸರ್ಕಾರ ಮನಸ್ಸು ಮಾಡಿ ಕಾನೂನು ತೊಡಕು ಸರಿಸಿ ಮನೆ ಖರೀದಿಸಿ, ಸ್ಮಾರಕ ಮಾಡಬೇಕು ಎಂದು ಜನರ ಆಗ್ರಹವಾಗಿದೆ.

ಸರ್ಕಾರದ ಈ ಎಲ್ಲ ನಡೆಯಿಂದ ಬೇಸರಗೊಂಡಿರುವ ಎಸ್​ಎನ್​ ಕಿರಣ್​ಶಂಕರ್​, “ಈ ವಿಚಾರದಲ್ಲಿ ಸರ್ಕಾರ ನಮ್ಮನ್ನು ನಡೆಸಿಕೊಂಡ ರೀತಿ ನಮಗೆ ಅಸಮಧಾನ ತಂದಿದೆ” ಎಂದು ಹೇಳಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:49 pm, Sat, 9 November 24

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ