AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಆಗಿದ್ದ ಸಿದ್ದರಾಮಯ್ಯಗೆ ಧ್ವಜದ ಬಣ್ಣ ಗೊತ್ತಿಲ್ಲ: ಈಶ್ವರಪ್ಪ ವಾಗ್ದಾಳಿ

ಭಾರತವನ್ನು ಎರಡು ವಿಭಾಗ ಮಾಡಿದ ನೆಹರೂ ಸಂತತಿಯ ರಾಹುಲ್ ಗಾಂಧಿಯಿಂದ ಭಾರತ ಜೋಡೊ ಪಾದಯಾತ್ರೆ ನಡೆಸುತ್ತಿರುವುದು ದುಃಖದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸಿಎಂ ಆಗಿದ್ದ ಸಿದ್ದರಾಮಯ್ಯಗೆ ಧ್ವಜದ ಬಣ್ಣ ಗೊತ್ತಿಲ್ಲ: ಈಶ್ವರಪ್ಪ ವಾಗ್ದಾಳಿ
ಕೆ.ಎಸ್.ಈಶ್ವರಪ್ಪ
TV9 Web
| Edited By: |

Updated on:Aug 13, 2022 | 1:16 PM

Share

ಶಿವಮೊಗ್ಗ: ಕಾಂಗ್ರೆಸ್ ಪಕ್ಷವು ದೇಶಾದ್ಯಂತ ದೇಶ ಜೋಡೋ ಪಾದಾಯಾತ್ರೆ ನಡೆಸುತ್ತಿರುವ ಬಗ್ಗೆ ಟೀಕೆ ವ್ಯಕ್ತಪಡಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa), ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ಭಾರತ ದೇಶವನ್ನು ಎರಡು ಭಾಗ ಮಾಡಿದ್ದರು. ಹೀಗಾಗಿ ನೆಹರು ಸಂತತಿ ಅಂದರೆ ಅದು ಜಿನ್ನಾ ಸಂತತಿ ಇದ್ದಂತೆ. ಈಗ ಅದೇ ಸಂತತಿಗೆ ಸೇರಿದ ರಾಹುಲ್ ಗಾಂಧಿ (Rahul Gandhi) ಅವರಿಂದ ದೇಶ ಜೋಡೋ ಪಾದಾಯಾತ್ರೆ ಮಾಡಲಾಗುತ್ತಿದೆ. ಇದು ದುಃಖದ ಸಂಗತಿಯಾಗಿದೆ. ಭಾರತ ಜೋಡೋ ಶಬ್ದ ಬಳಕೆ ಮಾಡಲು ರಾಹುಲ್ ಗಾಂಧಿಗೆ ಯೋಗ್ಯತೆ ಇಲ್ಲ. ದೇಶ ತುಂಡು ಮಾಡಿದವರು ರಾಷ್ಟಭಕ್ತರೋ ಅಥವಾ ರಾಷ್ಟ್ರದ್ರೋಹಿಗಳೋ ಎಂದು ದೇಶದ ಜನ ತೀರ್ಮಾನ ಮಾಡಿದ್ದಾರೆ. ದೇಶದ ಜನರು ಮೂಲೆಗುಂಪು ಮಾಡಿರುವ ಸಂದರ್ಭದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಪಕ್ಷ ಕಾಂಗ್ರೆಸ್

ರಾಷ್ಟ್ರಧ್ವಜದ ಬಣ್ಣ ಕೇಸರಿ ಬದಲು ಕೆಂಪು, ಬಿಳಿ, ಹಸಿರು ಎಂದು ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಧ್ವಜದ ಬಣ್ಣ ಗೊತ್ತಿಲ್ಲ. ಧ್ವಜದ ಬಣ್ಣದ ಕುರಿತು ನೀಡಿದ ಹೇಳಿಕೆಗೆ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಕೆಂಪು, ಬಿಳಿ, ಹಸಿರು ಎಂದು ಹೇಳುವ ಪರಿಸ್ಥಿತಿ ಅವರದ್ದಾಗಿದೆ. ಆದರೆ ಇವತ್ತು ಸಾಮಾನ್ಯ ಜನರು ಜಾಗೃತಿರಾಗಿದ್ದು ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಬಿಜೆಪಿ ಪಕ್ಷದ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುವುದಿಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಯಾವನೋ ಒಬ್ಬ ಹೇಳುತ್ತಾನೆ ಎಂದು ನಾವು ಯಾಕೆ ಕೇಳೋಣ? ಕೆಂಪು ಬಣ್ಣ ಈ ದೇಶದ ತ್ರಿವರ್ಣ ಧ್ವಜ ಎಂದು ಹೇಳುವ ವ್ಯಕ್ತಿಗಳಿಗೆ ನಾವು ಉತ್ತರ ಕೊಡಬೇಕಾ? ನಮಗೆ ರಾಷ್ಟ್ರಭಕ್ತಿ ಹೇಳಿಕೊಡುವ ಅವಶ್ಯಕತೆ ಕಾಂಗ್ರೆಸ್ ಗೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದವರಿಗೆ ತ್ರಿವರ್ಣ ಧ್ವಜದ ಬಗ್ಗೆ ಅಭ್ಯಾಸವರ್ಗ ಮಾಡಲಿ. ರಾಷ್ಟ್ರಧ್ವಜ ಮತ್ತು ಅದರ ಬಣ್ಣ, ಅದರ ಪಾವಿತ್ರ್ಯತೆ ಏನು, ಕೇಸರಿಗೂ ಕೆಂಪಿಗೂ ಇರುವ ವ್ಯತ್ಯಾಸ ಏನು ಎಂಬಿತ್ಯಾದಿ ಬಗ್ಗೆ ಕಾಂಗ್ರೆಸ್​ನವರಿಗೆ ಅಭ್ಯಾಸವರ್ಗ ಆದರೆ ತ್ರಿವರ್ಣಧ್ವಜದ ಬಗ್ಗೆ ಗೌರವ ಬರುತ್ತದೆ ಎಂದರು.

ತ್ರಿವರ್ಣ ಧ್ವಜದ ವಿಚಾರದಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್, ಇನ್ನು ಯಾವ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಡುತ್ತಾರೆ ಲೆಕ್ಕ ಹಾಕಿ. ರಾಷ್ಟ್ರಭಕ್ತಿಯ ಪ್ರತಿರೂಪವಾದ ತಿರಂಗಾ ಧ್ವಜದ ಬಗ್ಗೆ ತಿರಸ್ಕಾರ, ಅಜ್ಞಾನ ಅವರಿಗಿದೆ ಎಂಬುದು ಗೊತ್ತಾಗುತ್ತದೆ. ತ್ರಿವರ್ಣ ಧ್ವಜದ ಬಗ್ಗೆ ಈಗಿನ ಕಾಂಗ್ರೆಸ್ ನಾಯಕರಿಗೆ ಯಾವುದೇ ಕಲ್ಪನೆಯಿಲ್ಲ. ವಿಧಾನಸಭೆ ಬಾವಿಗಳಿದು ಪ್ರತಿಭಟನೆ ಮಾಡುವ ಸಂದರ್ಭದಲ್ಲೂ ಧ್ವಜ ಬಳಕೆ ಮಾಡಿದ್ದರು. ಆ ಮೂಲಕ ಕಾಂಗ್ರೆಸ್ ಪಕ್ಷ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ರಾಷ್ಟ್ರಧ್ವಜಗಳಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ

ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕೆಲವೇಡೆ ವಿತರಣೆ ಮಾಡಿದ ರಾಷ್ಟದ್ವಜದಲ್ಲಿ ವ್ಯತ್ಯಾಸಗಳು ಉಂಟಾಗಿರುವ ವಿಚಾರ ಗಮನಕ್ಕೆ ಬಂದಿದೆ. ಅಂತಹ ಧ್ವಜಗಳನ್ನು ಬದಲಾಯಿಸುವ ಕೆಲಸ ಮಾಡಲಾಗುತ್ತಿದೆ. ಜನರಿಗೆ ರಾಷ್ಟ್ರಧ್ವಜದ ಕಲ್ಪನೆ ಇದ್ದು, ಗಮನಿಸುತ್ತಿರುವುದು ಸಂತೋಷ ತಂದಿದೆ. ಜನರೇ ರಾಷ್ಟ್ರಧ್ವಜ ಸರಿಪಡಿಸಿಕೊಳ್ಳುತ್ತಿದ್ದಾರೆ. ಆಗಿಲ್ಲವೆಂದಾದರೆ ನಮ್ಮ ಕಾರ್ಯಕರ್ತರು ಬದಲಾಯಿಸಿ ಕೊಡುತ್ತಾರೆ ಎಂದು ಹೇಳಿದರು.

ಎಸಿಬಿ ರದ್ದು ಆದೇಶವನ್ನು ಸ್ವಾಗತಿಸುತ್ತೇನೆ

ರಾಜ್ಯ ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳ(ACB) ರದ್ದುಗೊಳಿಸಿ ಆದೇಶಿಸಿದ್ದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ ಈಶ್ವರಪ್ಪ, ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಲೋಕಾಯುಕ್ತ ಸಂಸ್ಥೆ ಇದ್ದರೂ ಎಸಿಬಿ ತಂದಿದ್ದರು. ಕೋರ್ಟ್ ಇವತ್ತು ಎಸಿಬಿ ರದ್ದು ಮಾಡಿ ಸ್ಪಷ್ಟವಾಗಿ ಹೇಳಿದೆ. ಲೋಕಾಯುಕ್ತಕ್ಕೆ ಶಕ್ತಿ ನೀಡುವಂತೆ ಕೋರ್ಟ್ ಹೇಳಿದ್ದು, ನಮ್ಮ ಸರ್ಕಾರ ಸ್ವಾಗತಿಸುತ್ತದೆ. ಲೋಕಾಯುಕ್ತದ ಮೂಲಕ ಭ್ರಷ್ಟರ ವಿರುದ್ದ ಕ್ರಮ ತೆಗೆದುಕೊಳ್ಳುವ ಕೆಲಸ ನಡೆಯಲಿದೆ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Sat, 13 August 22

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ