AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳನ್ನು ಒಂದುಗೂಡಿಸಿದ ನ್ಯಾಯಾಧೀಶರು

ಲೋಕ ಅದಾಲತ್​​ನಲ್ಲಿ ವಿಚ್ಛೇದನಕ್ಕೆಂದು ಬಂದಿದ್ದ 3 ಜೋಡಿಗಳನ್ನು ನ್ಯಾಯಾಧೀಶರು  ಒಂದುಗೂಡಿಸಿದ್ದಾರೆ.

ಚಿಕ್ಕಬಳ್ಳಾಪುರ: ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳನ್ನು ಒಂದುಗೂಡಿಸಿದ ನ್ಯಾಯಾಧೀಶರು
ಒಂದಾದ ಜೋಡಿಗಳು
TV9 Web
| Updated By: ವಿವೇಕ ಬಿರಾದಾರ|

Updated on:Aug 13, 2022 | 5:02 PM

Share

ಚಿಕ್ಕಬಳ್ಳಾಪುರ: ಮನಸ್ಸು ಮುರಿದುಕೊಂಡು ವಿಚ್ಚೇದನಕ್ಕೆಂದು ಬಂದ ಜೋಡಿಗಳು ಹಾರಬದಲಿಸಿಕೊಂಡು ಪರಸ್ಪರ ಸಿಹಿ ತಿನ್ನಿಸುವ ಮೂಲಕ ಮತ್ತೆ ಒಂದಾಗಿ ಜೊತೆ ಜೊತೆಯಲಿ ಸಾಗಿವೆ. ಚಿಕ್ಕಬಳ್ಳಾಫುರದಲ್ಲಿ ಇಂದು (ಆಗಸ್ಟ್​ 13) ನಡೆದ ಲೋಕ ಅದಾಲತ್​ನಲ್ಲಿ ವಿಚ್ಚೇದನಕ್ಕೆಂದು ಬಂದ ಉಷಾ ಜಿ-ಮುನಿರಾಜು, ದೀಪಾ-ರಮೇಶ್​, ಆಶಾ-ವಿನೋದ್ ಕುಮಾರ್ 3 ಜೋಡಿಗಳನ್ನು ನ್ಯಾ. ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಹಾಗೂ ನ್ಯಾ.ವಿವೇಕಾನಂದ ಪಂಡಿತ್ ಒಂದು ಮಾಡಿದ್ದಾರೆ.

ಬೆಂಗಳೂರು ಮೂಲದ ಎಂ.ಬಿ.ಎ ಪದವಿಧರೆ ಉಷಾ ಜಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ದೇವರಕೊಂಡಹಳ್ಳಿ ಗ್ರಾಮದ ನಿವಾಸಿ ಬಿ.ಕಾಂ ಪಧವಿಧರ ಮುನಿರಾಜು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇಬ್ಬರ ಮಧ್ಯೆ ಉಂಟಾದ ವೈನಸ್ಸು, ಇವರ ಬದುಕಿನಲ್ಲಿ ನೆಮ್ಮದಿಯನ್ನು ಹಾಳು ಮಾಡಿತ್ತು.

ಇದರಿಂದ ಒಬ್ಬರಿಗೊಬ್ಬರು ದೂರವಾಗಿದ್ದರು. ಆದರೆ ಮುನಿರಾಜು ಪತ್ನಿಯ ಜೊತೆ ಸೇರಬೇಕೆಂದು ನಿಶ್ಚಯಿಸಿ  ಚಿಕ್ಕಬಳ್ಳಾಪುರ ನ್ಯಾಯಾಲಯದ ಮೊರೆ ಹೋಗಿದ್ದನು. ಹೀಗಾಗಿ ಇಂದು ನಡೆದ ಲೋಕ ಅದಾಲತ್​​ನಲ್ಲಿ ನ್ಯಾಯಾಧೀಶರಾದ ವಿವೇಕಾನಂದ ಪಂಡೀತ್ ಹಾಗೂ ನ್ಯಾಯಧೀಶ ಲಕ್ಷ್ಮಿಕಾಂತ್ ಮಿಷ್ಕಿನ್, ಜೋಡಿಗೆ ಬುದ್ದಿ ಹೇಳಿ ಮತ್ತೆ ಒಂದುಗೂಡಿಸಿದ್ದಾರೆ.

ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದೇವಗಾನಹಳ್ಳಿ ನಿವಾಸಿ ರಮೇಶ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಅರಸನಹಳ್ಳಿ ನಿವಾಸಿ ದೀಪಾ, ಮದುವೆಯಾಗಿ ಬರೋಬ್ಬರಿ 18 ವರ್ಷಗಳು ಆಗಿವೆ. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಆದರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದ ಕಾರಣ, ಪತ್ನಿ ತನಗೆ ವಿಚ್ಚೇದನ  ಬೇಕೆಂದು ನ್ಯಾಯಲಯದ ಮೊರೆ ಹೋಗಿದ್ದಳು.

ಈ ಜೋಡಿಗೂ ನ್ಯಾಯಾಧೀಶರಗಳು ಬುದ್ದಿ ಹೇಳಿ ಸಹಬಾಳ್ವೆಗೆ ಸೂಚಿಸಿದರು. ಇದರಿಂದ ಮತ್ತೆ ಜೋಡಿ ಸಹಜೀವನಕ್ಕೆ ಒಪ್ಪಿಸಿದರು. ಮತ್ತೊಂದೆಡೆ ಜಿಲ್ಲೆಯ ಗುಡಿಬಂಡೆಯ ಆಶಾ ಹಾಗೂ ವಿನೋಧಕುಮಾರ್ ದಂಪತಿ, ಇನ್ನೂ ಇಬ್ಬರು ಒಬ್ಬರಿಗೊಬ್ಬರು ಸುಖ ಸಂಸಾರ ಸಾಗಿಲು ಸಾದ್ಯವೆ ಇಲ್ಲ ಅಂತ ವಿಚ್ಚೇದನ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಧೀಶೆ ಶ್ರೀಮತಿ ಅರುಣಾಕುಮಾರಿ ಇಬ್ಬರ ಮನವೋಲಿಸಿ ನ್ಯಾಯಾಲಯದಲ್ಲೇ ಇಬ್ಬರನ್ನು ಮತ್ತೆ ಒಂದು ಮಾಡಿದರು.

Published On - 2:33 pm, Sat, 13 August 22