Vatal Nagaraj: ‘ನಾನು ಮುಖ್ಯಮಂತ್ರಿಯಾದರೆ…‘ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದ್ದೇನು?

TV9 Digital Desk

| Edited By: guruganesh bhat

Updated on: Jun 13, 2021 | 3:05 PM

ಖನಿಜ ಕಳ್ಳರು ಯಾರೇ ಆಗಿದ್ದರೂ ಅವರನ್ನು ಜೈಲಿಗೆ ಕಳುಹಿಸುತ್ತೇನೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೀವ್ರವಾಗಿ ತನಿಖೆಗೆ ಒಪ್ಪಿಸುವೆ. ಕೇವಲ 5 ತಿಂಗಳು ಅವಕಾಶ ಸಿಕ್ಕರೆ ಇದೆಲ್ಲವನ್ನೂ ಮಾಡುವೆ ಎಂದು ಮೈಸೂರಿನಲ್ಲಿ ಮಾಜಿ ಶಾಸಕ, ಹೋರಾಟಗಾರ ವಾಟಾಳ್ ನಾಗರಾಜ್​ ತಿಳಿಸಿದರು.

Vatal Nagaraj: ‘ನಾನು ಮುಖ್ಯಮಂತ್ರಿಯಾದರೆ...‘ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದ್ದೇನು?
ವಾಟಾಳ್​ ನಾಗರಾಜ್​

ಮೈಸೂರು: ನಾನು ರಾಜ್ಯದ ಮುಖ್ಯಮಂತ್ರಿ ಆದರೆ ಭೂಮಿ, ಖನಿಜ ಕಳ್ಳರನ್ನು ಜೈಲಿಗಟ್ಟುವೆ. ಅಕ್ರಮಗಳನ್ನು ತಡೆಗಟ್ಟಲು ನನಗೆ 5 ವರ್ಷಗಳ ಆಡಳಿತ ಬೇಕಾಗಿಲ್ಲ. ಕೇವಲ 5 ತಿಂಗಳು ಅವಕಾಶ ನೀಡಿದರೆ ಸಾಕು. ನಾನು ಸಿಎಂ ಆದರೆ ಪ್ರಾಮಾಣಿಕರಿಗಷ್ಟೇ ಸಂಪುಟದಲ್ಲಿ ಸ್ಥಾನ ನೀಡುವೆ. ಬಸವಣ್ಣನ ತತ್ವ, ಆದರ್ಶ ಪಾಲಿಸುವವರನ್ನು ಸೇರಿಸಿಕೊಳ್ಳುವೆ. ಮೊದಲು ಒತ್ತುವರಿ ತೆರವು ಮಾಡುತ್ತೇನೆ. ಖನಿಜ ಕಳ್ಳರು ಯಾರೇ ಆಗಿದ್ದರೂ ಅವರನ್ನು ಜೈಲಿಗೆ ಕಳುಹಿಸುತ್ತೇನೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೀವ್ರವಾಗಿ ತನಿಖೆಗೆ ಒಪ್ಪಿಸುವೆ. ಕೇವಲ 5 ತಿಂಗಳು ಅವಕಾಶ ಸಿಕ್ಕರೆ ಇದೆಲ್ಲವನ್ನೂ ಮಾಡುವೆ ಎಂದು ಮೈಸೂರಿನಲ್ಲಿ ಮಾಜಿ ಶಾಸಕ, ಹೋರಾಟಗಾರ ವಾಟಾಳ್ ನಾಗರಾಜ್​ ತಿಳಿಸಿದರು.

ಭೂ ಮಾಫಿಯಾ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ಅವರು, ಸಿಎಂ ಯಡಿಯೂರಪ್ಪ ಭೂ ಹಗರಣವನ್ನು ನಿಯಂತ್ರಿಸಲಾರರು. ರೋಹಿಣಿ ಸಿಂಧೂರಿಯವರನ್ನು ಇದೇ ಕಾರಣಕ್ಕೆ ವರ್ಗಾಯಿಸಿದ್ದಾರೆ. ತಕ್ಷಣ ಸಿಎಂ ಯಡಿಯೂರಪ್ಪ ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ಮರು ನೇಮಿಸಬೇಕು ಎಂದು ಒತ್ತಾಯಿಸಿದರು.

ಭೂ ಹಗರಣದಲ್ಲಿ ಮುಡಾ ಅಧ್ಯಕ್ಷ ಎಚ್.ವಿ ರಾಜೀವ್ ಹೆಸರು ಕೂಡ ಕೇಳಿಬಂದಿದೆ. ಹೀಗಾಗಿ ಅವರು ಮುಡಾ ಅಧ್ಯಕ್ಷರಾಗಿ ಮುಂದುವರಿಯಲು ಅರ್ಹರಲ್ಲ. ತಕ್ಷಣವೇ ಎಚ್.ವಿ ರಾಜೀವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.

ರೋಹಿಣಿ ಮರು ನೇಮಕಕ್ಕೆ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಕ್ಯಾಂಪೇನ್, ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ IAS ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರು ಡಿಸಿಯಾಗಿ ನೇಮಿಸುವಂತೆ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಕ್ಯಾಂಪೇನ್ ಆರಂಭವಾಗಿದೆ. ರೋಹಿಣಿ ಸಿಂಧೂರಿ ಪರ ಆನ್‌ಲೈನ್ ಅಭಿಯಾನ ಕೈಗೊಂಡಿದ್ದಾರೆ. ಶನಿವಾರ ಸಂಜೆ ವೇಳೆಗೆ ಈ ಅಭಿಯಾನ ಆರಂಭವಾಗಿದ್ದು ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನರಿಂದ ಸಹಿ ಸಂಗ್ರಹವಾಗಿದೆ.

ರೋಹಿಣಿ ಅವರನ್ನು ಮತ್ತೆ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಿ ಎಂದು ‘ಚೇಂಜ್ ಆರ್ಗ್’ ಸಂಸ್ಥೆಯಿಂದ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಇದಕ್ಕೆ ಉತ್ತಮ ಪ್ರಕ್ರಿಯೆ ಸಿಕ್ಕಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

ಇನ್ನು ಮಾಜಿ ಸಚಿವ ಎ.ಮಂಜು ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಟಿ.ಎಂ. ವಿಜಯಭಾಸ್ಕರ್ ವರದಿಯನ್ನು ಸರ್ಕಾರ ಜಾರಿ ಮಾಡಿದ್ದರೆ. ಭೂ ಅಕ್ರಮವೇ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಒಳ್ಳೆ ಆಡಳಿತಗಾರ್ತಿ ಅಂತ ಅಂದುಕೊಂಡಿದ್ದೀರಾ? ಮಾಜಿ ಸಚಿವ ಎ.ಮಂಜು ಪ್ರಶ್ನೆ 

Vatal Nagraj : ಪರೀಕ್ಷೆ ನಡೆಸದಂತೆ ಆಗ್ರಹಿಸಿ ವಾಟಾಳ್ ನಾಗರಾಜ್ ಧರಣಿ

 (Former MLA Vatal Nagaraj says If I became the Chief Minister of Karnataka says in Mysuru)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada