ಬೆಣ್ಣೆ ನಗರಿ ದಾವಣಗೆರೆಯಲ್ಲಿ ಎಸ್.ಎಸ್ ಮಲ್ಲಿಕಾರ್ಜುನರಿಂದ ಉಚಿತ ಕೊರೊನಾ ಲಸಿಕೆ ಅಭಿಯಾನ

| Updated By: ಆಯೇಷಾ ಬಾನು

Updated on: Jun 04, 2021 | 1:02 PM

ನಮ್ಮ ಸ್ವಂತ ಖರ್ಚಿನಲ್ಲಿ ಜನರಿಗೆ ಉಚಿತವಾಗಿ ಲಸಿಕೆ ನೀಡ್ತೇವೆ. 60 ಸಾವಿರ ಡೋಸ್‌ಗೆ ಈಗಾಗಲೇ ಆರ್ಡರ್ ಕೊಟ್ಟಿದ್ದೇವೆ. ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್‌ಗೆ ಆರ್ಡರ್ ಮಾಡಲಾಗಿದೆ. ಈಗ 10,000, ಮುಂದಿನ ವಾರದಲ್ಲಿ 50,000 ಡೋಸ್ ಬರುತ್ತೆ. SS ಆಸ್ಪತ್ರೆ, ಬಾಪೂಜಿ ಆಸ್ಪತ್ರೆಯಲ್ಲಿ ಲಸಿಕೆ ನೀಡುತ್ತೇವೆ -ದಾವಣಗೆರೆಯಲ್ಲಿ ಮಾಜಿ ಶಾಸಕ S.S.ಮಲ್ಲಿಕಾರ್ಜುನ ಹೇಳಿಕೆ

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಎಸ್.ಎಸ್ ಮಲ್ಲಿಕಾರ್ಜುನರಿಂದ ಉಚಿತ ಕೊರೊನಾ ಲಸಿಕೆ ಅಭಿಯಾನ
ಮಾಜಿ ಶಾಸಕ S.S.ಮಲ್ಲಿಕಾರ್ಜುನ
Follow us on

ದಾವಣಗೆರೆ: ಜಿಲ್ಲೆಯ ಜನತೆಗೆ ಸ್ವಂತ ಖರ್ಚಿನಲ್ಲಿ ಕೊರೊನಾ ಲಸಿಕೆ ನೀಡಲು ಶಾಸಕ ಶಾಮನೂರ ಶಿವಶಂಕರಪ್ಪ ನಿರ್ಧರಿಸಿದ್ದು ಇಂದು ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದಾರೆ. ನಗರದ ದುರ್ಗಾಂಭಿಕಾ ದೇವಸ್ಥಾನದಲ್ಲಿ 12 ಗಂಟೆಗೆ ಲಸಿಕೆ ಅಭಿಯಾನ ಆರಂಭವಾಗಲಿದೆ.

ನಮ್ಮ ಕುಟುಂಬದಿಂದ ಸ್ವಂತ ಕರ್ಚಿನಲ್ಲಿ ದಾವಣಗೆರೆ ಜಿಲ್ಲೆಯ ಜನತೆಗೆ ಉಚಿತ ಲಸಿಕೆ ಹಾಕಿಸಲಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಮನೂರ ಶಿವಶಂಕರಪ್ಪ ಪುತ್ರ ಮಾಜಿ ಶಾಸಕ ಎಸ್.ಎಸ್ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಈಗಾಗಲೇ ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್‌ಗೆ 60 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಆರ್ಡರ್ ಮಾಡಲಾಗಿದೆ. ಈಗ ಇನ್ನೊಂದು ವಾರದಲ್ಲಿ 50 ಸಾವಿರ ಡೋಸ್ ಬರಲಿದೆ. ಇದಕ್ಕೆಲ್ಲಾ ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ರಿಂದ ಲಸಿಕೆ ಅಭಿಯಾನಕ್ಕೆ ಚಾಲನೆ‌ ನೀಡುತ್ತಾರೆ. ರಾಜ್ಯ ಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲಸಿಕೆ ತರಿಸಲು ಸಹಕಾರ ಮಾಡಿದ್ದಾರೆ.

ಇದರಲ್ಲಿ ರಾಜಕೀಯವಿಲ್ಲ. ಕಾಂಗ್ರೆಸ್, ಬಿಜೆಪಿ ಎಂದು ಪಕ್ಷಬೇಧ ವಿಲ್ಲ. ಎಲ್ಲರಿಗೂ ಲಸಿಕೆ ನೀಡಲಾಗುತ್ತೆ. ಈಗಾಗಲೆ ಎಸ್.ಎಸ್ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಸೇರಿದಂತೆ ಬೇರೆ ಬೇರೆ ಕಡೆ ಖಾಸಗಿಯವರಿಗೂ ಲಸಿಕೆ ಕೊಡಲಾಗುತ್ತಿದೆ. ಬೆಂಗಳೂರು ಸೇರಿದಂತೆ ಕೆಲ ಕಡೆ ಲಸಿಕೆ ಅಭಿಯಾನ ಶುರುವಾಗಿದೆ. ನಾವು ಕೂಡಾ ದಾವಣಗೆರೆ ನಗರದ ಎಸ್.ಎಸ್ ಮತ್ತು ಬಾಪೂಜಿ ಆಸ್ಪತ್ರೆಯಲ್ಲಿ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಶಾಮನೂರ ಶಿವಶಂಕರಪ್ಪ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಇದನ್ನೂ ಓದಿ: ನೆಪ ಮಾತ್ರಕ್ಕೆ ಭತ್ತ ಖರೀದಿ ಕೇಂದ್ರ ಆರಂಭಿಸಿದ ರಾಯಚೂರು ಜಿಲ್ಲಾಡಳಿತ; ರೈತರಲ್ಲಿ ಹೆಚ್ಚಿದ ಆತಂಕ