ಮೇ ತಿಂಗಳಲ್ಲಿ 18-45 ವರ್ಷದವರಿಗೆ ಉಚಿತ ಲಸಿಕೆ ಸಿಗುವುದು ಅನುಮಾನ: ಬಿಬಿಎಂಪಿ ಸುಳಿವು

ನಾಳೆಯಿಂದ (ಮೇ.1) 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿತ್ತು. ಆದರೆ, ಇದೀಗ ಲಸಿಕೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೆಲ ಮಾಹಿತಿ ನೀಡಿದ್ದು, ಮೇ ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಯುವ ಸುಮುದಾಯಕ್ಕೆ ಉಚಿತ ಕೊರೊನಾ ಲಸಿಕೆ ಸಿಗುವುದು ಅನುಮಾನವಾಗಿದೆ.

ಮೇ ತಿಂಗಳಲ್ಲಿ 18-45 ವರ್ಷದವರಿಗೆ ಉಚಿತ ಲಸಿಕೆ ಸಿಗುವುದು ಅನುಮಾನ: ಬಿಬಿಎಂಪಿ ಸುಳಿವು
ಬಿಬಿಎಂಪಿ ಮುಖ್ಯ ಕಚೇರಿ
Follow us
ಆಯೇಷಾ ಬಾನು
|

Updated on: Apr 30, 2021 | 7:50 AM

ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುವ ಮೂಲಕ ಅತಿ ಕಡಿಮೆ ಸಮಯದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟಲು ಕೊರೊನಾ ಲಸಿಕೆಯೊಂದೇ ಪ್ರಮುಖ ಅಸ್ತ್ರ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದು, ನಾಳೆಯಿಂದ (ಮೇ.1) 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿತ್ತು. ಆದರೆ, ಇದೀಗ ಲಸಿಕೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೆಲ ಮಾಹಿತಿ ನೀಡಿದ್ದು, ಮೇ ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಯುವ ಸುಮುದಾಯಕ್ಕೆ ಉಚಿತ ಕೊರೊನಾ ಲಸಿಕೆ ಸಿಗುವುದು ಅನುಮಾನವಾಗಿದೆ.

ಲಸಿಕೆ ವಿತರಣೆ ಬಗ್ಗೆ ತಿಳಿಸಿರುವ ಬಿಬಿಎಂಪಿ, 18ರಿಂದ 45 ವರ್ಷ ವಯಸ್ಸಿನ ಸುಮಾರು 45 ಲಕ್ಷ ಜನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದಾರೆ. ಜತೆಗೆ, 45 ವರ್ಷ ಮೇಲ್ಪಟ್ಟವರು 21 ಲಕ್ಷ ಜನರಿದ್ದಾರೆ. ಸದ್ಯ 66 ಲಕ್ಷ ಡೋಸ್ ಕೊರೊನಾ ಲಸಿಕೆಗೆ ಬೇಡಿಕೆ ಇಡಲಾಗಿದೆ. ಈಗ ಕೇಂದ್ರ ಸರ್ಕಾರ ಲಸಿಕೆ ಪೂರೈಸಿದರೂ 18 ರಿಂದ 45 ವರ್ಷ ವಯೋಮಾನದವರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ. ನಂತರದಲ್ಲಿ ರಾಜ್ಯ ಸರ್ಕಾರ ನೀಡುವ ಲಸಿಕೆಯನ್ನು 18 ರಿಂದ 45 ವರ್ಷ ವಯಸ್ಸಿನವರಿಗೆ ಉಚಿತವಾಗಿ ವಿತರಿಸಲಾಗುವುದು. ಹೀಗಾಗಿ ತಕ್ಷಣಕ್ಕೆ ಮೇ ತಿಂಗಳಲ್ಲಿ ಉಚಿತ ಲಸಿಕೆ ವಿತರಣೆ ಆರಂಭಿಸುವುದು ಅನುಮಾನ ಎಂಬಂತೆ ಮಾಹಿತಿ ನೀಡಿದೆ.

ಗದಗ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಖಾಲಿ ಗದಗ: ಜಿಲ್ಲೆಯ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಖಾಲಿಯಾಗಿದ್ದು, ಲಸಿಕೆ ಪಡೆಯಲು ಬಂದ ಜನರನ್ನು ಆಸ್ಪತ್ರೆ ಸಿಬ್ಬಂದಿ ವಾಪಸ್ ಕಳಿಸಿದ ಘಟನೆ ನಿನ್ನೆ (ಏಪ್ರಿಲ್ 29) ನಡೆದಿದೆ. ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಸಾಕಷ್ಟು ಪೂರೈಕೆ ಇದೆ. ಯಾವುದೇ ಕೊರತೆ ಆಗುವುದಿಲ್ಲ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿಕೆ ನೀಡಿದ 2-3 ಗಂಟೆಯ ಒಳಗೇ ಲಸಿಕೆ ಅಭಾವವಾಗಿದ್ದು, ಲಸಿಕೆಗಾಗಿ ಬಂದ ಜನರು ಬೇರೆ ದಾರಿಯಿಲ್ಲದೆ ವಾಪಸ್ಸು ಹೋಗಿದ್ದಾರೆ.

ಇದನ್ನೂ ಓದಿ: ಮೇ 1ರಿಂದಲೇ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಸಿಗದು; ಸಿಎಸ್ ರವಿಕುಮಾರ್