Gadag: ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್ ಪ್ರವಾಸಿಗರು!
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಪತ್ತೆ ಬಳಿಕ ಉತ್ಖನನ ಕಾರ್ಯ ಭರದಿಂದ ಸಾಗಿದೆ. ಈ ವೇಳೆ ಶಿವಲಿಂಗ, ಪಾಣಿ ಪೀಠ, ಪುರಾತನ ಮಡಿಕೆ, ಮೂಳೆಗಳು ಸೇರಿ ವೈವಿಧ್ಯಮಯ ವಸ್ತುಗಳು ಸಿಗುತ್ತಿವೆ. ಲಕ್ಕುಂಡಿ ಈಗ ದೇಶ-ವಿದೇಶಗಳಲ್ಲಿಯೂ ಸುದ್ದಿಯಾಗಿರುವ ಹಿನ್ನೆಲೆ ಉತ್ಖನನ ನೋಡಲು ವಿದೇಶಿ ಪ್ರವಾಸಿಗರೂ ಗ್ರಾಮಕ್ಕೆ ಬರುತ್ತಿರೋದು ಗಮನಾರ್ಹವಾಗಿದೆ.
ಗದಗ, ಜನವರಿ 23: ಮನೆ ಅಡಿಪಾಯ ನಿರ್ಮಾಣದ ವೇಳೆ ನಿಧಿ ಸಿಕ್ಕ ಬೆನ್ನಲ್ಲೇ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಆರಂಭವಾಗಿದ್ದು, ದೇಶ ಮತ್ತು ವಿದೇಶಗಳಲ್ಲಿಯೂ ಈ ವಿಚಾರ ಸುದ್ದಿಯಾಗಿದೆ. ಈ ನಡುವೆ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ನೋಡಲು ವಿದೇಶಿ ಪ್ರವಾಸಿಗರು ಸಹ ಬಂದಿದ್ದಾರೆ. ಫ್ರಾನ್ಸ್ ದೇಶದ 9 ಪ್ರವಾಸಿಗರು ಲಕ್ಕುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದು, ಐತಿಹಾಸಿಕ ದೇವಸ್ಥಾನಗಳ ವೀಕ್ಷಣೆ ಬಳಿಕ ಉತ್ಖನನ ಸ್ಥಳದಲ್ಲೂ ಓಡಾಟ ನಡೆಸಿ ಮಾಹಿತಿ ಪಡೆದಿದ್ದಾರೆ. ಮತ್ತೊಂದೆಡೆ ನಿರ್ಬಂಧಿತ ಪ್ರದೇಶದಲ್ಲಿ ಜನರ ಓಡಾಟದಿಂದ ಉತ್ಖನ ಕಾರ್ಯಕ್ಕೆ ಕಿರಿಕಿರಿ ಉಂಟಾಗಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ನಿರ್ಲಕ್ಷ್ಯಕ್ಕೆ ಜನರನ್ನು ಹೊರ ಕಳುಹಿಸಲು ಪೊಲೀಸರು ಸುಸ್ತಾಗಿದ್ದು, ಅವ್ಯವಸ್ಥೆಗೆ ಕಾರ್ಮಿಕರು, ಪೊಲೀಸರು ಹೈರಾಣಾಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
