ಭಾವಿ ಪತ್ನಿಗೆ ರೂಪಸಿ ಎಂದ ಪರ ಪುರುಷನ ವಿರುದ್ಧ ಭಾವಿ ಪತಿಯಿಂದ ದೂರು, ಪೊಲೀಸ್ರು ಹೇಳಿದ್ದೇನು?
ಭಾವಿ ಪತ್ನಿಗೆ ರೂಪಸಿ ಎಂದ ಪರ ಪುರುಷನ ವಿರುದ್ಧ ಭಾವಿ ಪತಿ ದೂರು ಕೊಟ್ಟ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಯುವತಿ ಅಪ್ಲೋಡ್ ಮಾಡಿದ್ದ ಫೋಟೋವನ್ನು ರೀ ಶೇರ್ ಮಾಡಿದ್ದ ಯುವಕ, ‘ರೂಪಸಿ ಸುಮ್ಮನೆ ಹೇಗಿರಲಿ ಎಂದು ಗುರು ಸತ್ತೂರು ಎಂಬ ಹೆಸರಿನ ಖಾತೆಯ ವ್ಯಕ್ತಿ ಯುವತಿಯ ಫೋಟೋವನ್ನ ಹಾಕಿದ್ದ.
ಬೆಂಗಳೂರು, ಏ.10: ಭಾವಿ ಪತ್ನಿಗೆ ರೂಪಸಿ ಎಂದ ಪರ ಪುರುಷನ ವಿರುದ್ಧ ಭಾವಿ ಪತಿ ದೂರು ಕೊಟ್ಟ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ(Social Media) ಯುವತಿ ಅಪ್ಲೋಡ್ ಮಾಡಿದ್ದ ಫೋಟೋವನ್ನು ರೀ ಶೇರ್ ಮಾಡಿದ್ದ ಯುವಕ, ‘ರೂಪಸಿ ಸುಮ್ಮನೆ ಹೇಗಿರಲಿ ಎಂದು ಯುವತಿಯ ಫೋಟೋವನ್ನ ಹಾಕಿದ್ದ ಗುರು ಸತ್ತೂರು ಎಂಬ ಹೆಸರಿನ ಖಾತೆಯ ವ್ಯಕ್ತಿ. ಈ ಹಿನ್ನಲೆ ಭಾವಿ ಪತ್ನಿಯ ಫೋಟೋ ಹಾಕಿ ಕಮೆಂಟ್ ಮಾಡುತ್ತಿದ್ದಾನೆ ಎಂದು ಭಾವಿ ಪತಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾನೆ. ಜೊತೆಗೆ ‘ನನ್ನ ಫ್ಯೂಚರ್ ವೈಫ್ ಫೊಟೋ ಹಾಕಿ ರೂಪಸಿ ಎಂದವನ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಪೇಜ್, 112 ಗೆ ಕರೆ ಮಾಡಿ ಎಂದು ಹೇಳಿದ್ದಾರೆ.
ಎರಡನೇ ಪತ್ನಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಹೊಸಕೋಟೆ ಪೊಲೀಸರಿಗೆ ಶರಣು
ಚಿಕ್ಕಬಳ್ಳಾಫುರ: ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಾಡವಣೆಯಲ್ಲಿ ಎರಡನೇ ಪತ್ನಿ ರೆಡ್ಡಿಲಕ್ಷ್ಮೀ(30) ಎಂಬ ಮಹಿಳೆಯನ್ನು ಹತ್ಯೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಹರೀಶ್ ಎಂಬಾತ ಮೂರು ದಿನಗಳ ಬಳಿಕ ಹೊಸಕೋಟೆ ಪೊಲೀಸರಿಗೆ ಶರಣಾಗಿದ್ದಾನೆ. ಆಂದ್ರ ಮೂಲದ ದಂಪತಿಯಾದ ಇವರು ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಇದನ್ನೂ ಓದಿ:ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಂದಲೇ ಶಿಕ್ಷಕರಿಗೆ ಪೆಟ್ಟು; ಹಾಲಂದೂರು ಸರ್ಕಾರಿ ಶಾಲೆಯಲ್ಲಿ ವಿನೂತನ ವ್ಯವಸ್ಥೆ
ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
ಬೆಂಗಳೂರು: ಶಿವಾಜಿನಗರದ ವೆಂಕಟೇಶಸ್ವಾಮಿನಾಯ್ಡು ರಸ್ತೆಯಲ್ಲಿ ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದು ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಬೈಕ್ ಸವಾರ ಕಮಲೇಶ್(18) ಮೃತ ವ್ಯಕ್ತಿ. ತಡರಾತ್ರಿ ಸ್ನೇಹಿತನನ್ನು ಭೇಟಿ ಮಾಡಲು ಹೋಗಿದ್ದ ಕಮಲೇಶ್, BMTC ಬಸ್ ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಆಸ್ಪತ್ರೆಗೆ ಸೇರಿಸಿದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಯುವಕ ಕಮಲೇಶ್ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Wed, 10 April 24