‘ಯಜಮಾನ’ನಿಗೆ ಅಭಿಮಾನಿಯಿಂದ ವಿಶೇಷ ಉಡುಗೊರೆ​: ಪ್ರಾಣಿಪ್ರಿಯ D ಬಾಸ್​ಗೆ​ ಟಗರು ಗಿಫ್ಟ್ ಮಾಡಿದ ಫ್ಯಾನ್​!

ಯುವಕ ಶಂಭು ಗಡಗಿ ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್‌ ಸಿನಿಮಾದ ಪ್ರೀ ರಿಲೀಸ್ ಇವೆಂಟ್​ ಮುಗಿಸಿ ಬೆಂಗಳೂರಿನತ್ತ ಮರಳುತ್ತಿದ್ದ ನಟ ದರ್ಶನ್​ರನ್ನು ಭೇಟಿಯಾಗಲು ರಸ್ತೆ ಬದಿಯಲ್ಲಿ ಕಾತುರದಿಂದ ಕಾಯುತ್ತಿದ್ದನು. ಇತ್ತ, ತನ್ನ ಅಭಿಮಾನಿಯನ್ನು ನೋಡಿದ ತಕ್ಷಣ ಕಾರನ್ನು ನಿಲ್ಲಿಸಿ ಶಂಭು ಕಡೆಗೆ ಬಂದ ಯಜಮಾನ ಆತನ ಉಡುಗೊರೆಯನ್ನು ಖುಷಿಯಿಂದ ಸ್ವೀಕಾರ ಮಾಡಿದ್ದಾರೆ.

  • TV9 Web Team
  • Published On - 21:01 PM, 1 Mar 2021
‘ಯಜಮಾನ’ನಿಗೆ ಅಭಿಮಾನಿಯಿಂದ ವಿಶೇಷ ಉಡುಗೊರೆ​: ಪ್ರಾಣಿಪ್ರಿಯ D ಬಾಸ್​ಗೆ​ ಟಗರು ಗಿಫ್ಟ್ ಮಾಡಿದ ಫ್ಯಾನ್​!
ಪ್ರಾಣಿಪ್ರಿಯ D ಬಾಸ್​ಗೆ​ ಟಗರು ಗಿಫ್ಟ್ ಮಾಡಿದ ಫ್ಯಾನ್​!

ಗದಗ: ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಜಿಲ್ಲೆಯ ಅಭಿಮಾನಿಯೊಬ್ಬ ತಾನು ಸಾಕಿ ಬೆಳಿಸಿದ ಮೆಚ್ಚಿನ ಟಗರನ್ನು ಗಿಫ್ಟ್ ಆಗಿ ನೀಡಿದ್ದಾನೆ. ಜಿಲ್ಲೆಯ ಕಣವಿ ಹೊಸೂರಿನ ಯುವಕ ಶಂಭು ಗಡಗಿ ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್‌ ಸಿನಿಮಾದ ಪ್ರೀ ರಿಲೀಸ್ ಇವೆಂಟ್​ ಮುಗಿಸಿ ಬೆಂಗಳೂರಿನತ್ತ ಮರಳುತ್ತಿದ್ದ ನಟ ದರ್ಶನ್​ರನ್ನು ಭೇಟಿಯಾಗಲು ರಸ್ತೆ ಬದಿಯಲ್ಲಿ ಕಾತುರದಿಂದ ಕಾಯುತ್ತಿದ್ದನು. ಇತ್ತ, ತನ್ನ ಅಭಿಮಾನಿಯನ್ನು ನೋಡಿದ ತಕ್ಷಣ ಕಾರನ್ನು ನಿಲ್ಲಿಸಿ ಶಂಭು ಕಡೆಗೆ ಬಂದ ಯಜಮಾನ ಆತನ ಉಡುಗೊರೆಯನ್ನು ಖುಷಿಯಿಂದ ಸ್ವೀಕಾರ ಮಾಡಿದ್ದಾರೆ.

ಅಂದ ಹಾಗೆ ಶಂಭು, ದರ್ಶನ್ ಅವರ ಅಪ್ಪಟ ಅಭಿಮಾನಿ. ಹಾಗಾಗಿ, ಸುಮಾರು ಎರಡೂವರೆ ವರ್ಷಗಳಿಂದ ತಾನು ಅತೀ ಪ್ರೀತಿಯಿಂದ ಸಾಕಿದ್ದ ಟಗರನ್ನು ದರ್ಶನ್​ಗೆ ಗಿಫ್ಟ್​ ಆಗಿ ಕೊಡುವುದರ ಮೂಲಕ ಅಭಿಮಾನ ಮೆರೆದಿದ್ದಾನೆ.

ಅಭಿಮಾನಿ ನೀಡಿದ ಟಗರನ್ನು ಸ್ವೀಕರಿಸಿದ ದಚ್ಚು ಸದ್ಯ ಟಗರನ್ನು ತೆಗೆದುಕೊಂಡು ಹೋಗೋಕಾಗಲ್ಲ. ಆದರೆ ನೀನು ಮೈಸೂರಿನಲ್ಲಿರುವ ನನ್ನ ಫಾರ್ಮ್ ಹೌಸ್​ಗೆ ಬಾ ಎಂದು ಆಹ್ವಾನ ನೀಡಿದ್ದಾರಂತೆ. ಜೊತೆಗೆ, ತಾವು ಒಂದು ವಾಹನ ಕಳಿಸುವುದಾಗಿ ತಿಳಿಸಿರುವ ಬಾಕ್ಸ್ ಆಫೀಸ್​ ಸುಲ್ತಾನ ವಾಹನದಲ್ಲಿ ಟಗರು ಮತ್ತು ನೀನು ಇಬ್ಬರು ಬನ್ನಿ ಅಂತಾ ಆತನ ಮೊಬೈಲ್ ನಂಬರ್​ನ ತೆಗೆದುಕೊಂಡು ಹೋಗಿದ್ದಾರೆ. ಸಿನಿಮಾದಲ್ಲಿ ಬ್ಯುಸಿ ಆಗಿರೋದ್ರಿಂದ ಸದ್ಯ ಟಗರನ್ನು ಫಾರ್ಮ ಹೌಸ್ ಗೆ ತೆಗೆದುಕೊಂಡು ಹೋಗೋಕೆ ಆಗಲ್ಲಾ. ಹಾಗಾಗಿ, ನೀನೆ ಬಾ ಅಂತ ತಿಳಿಸಿದ್ದಾರೆ ಎಂದು D ಬಾಸ್​ ಅಭಿಮಾನಿ ಶಂಭು ಖುಷಿಯಿಂದ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ‘ಸುದೀಪ್ ಅಂಕಲ್.. ದಯವಿಟ್ಟು ಮನಸ್ಸು ಮಾಡಿ ನನಗೆ ಬಿಗ್​ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿಕೊಡಿ, ಪ್ಲೀಸ್​!’