HK Patil Profile: ಸಿದ್ದರಾಮಯ್ಯ ಸರ್ಕಾರದಲ್ಲಿ 2ನೇ ಬಾರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಂಡ ಹೆಚ್​​.ಕೆ ಪಾಟೀಲ್​​ ನಡೆದು ಬಂದ ದಾರಿ

ಗದಗನ ಹುಲಕೋಟಿಯ ಪಾಟೀಲ್‌ ಮನೆತನದ ಹೆಚ್​.ಕೆ ಪಾಟೀಲ್​ ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಇವರು ಇಂದು ಸಿದ್ದರಾಮಯ್ಯ ಸರ್ಕಾರದಲ್ಲಿ 2ನೇ ಬಾರಿಗೆ ಮಂತ್ರಿಯಾಗಿದ್ದಾರೆ.

HK Patil Profile: ಸಿದ್ದರಾಮಯ್ಯ ಸರ್ಕಾರದಲ್ಲಿ 2ನೇ ಬಾರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಂಡ ಹೆಚ್​​.ಕೆ ಪಾಟೀಲ್​​ ನಡೆದು ಬಂದ ದಾರಿ
ಹೆಚ್​ ಕೆ ಪಾಟೀಲ್​​
Edited By:

Updated on: May 27, 2023 | 11:53 AM

ಕರ್ನಾಟಕದ ಮುದ್ರಣ ನಗರಿ ಗದಗನ (Gadag) ಒಬ್ಬ ಪ್ರಭಾವಿ ರಾಜಕಾರಣಿ. ಕಳೆದ 50 ವರ್ಷಗಳಿಂದ ಈ ಗದಗ ಕ್ಷೇತ್ರದ ಮೇಲೆ ಹುಲಕೋಟಿಯ ಪಾಟೀಲ್‌ ಮನೆತನದ ಬಿಗಿಹಿಡಿತವಿದೆ. ಈ ಮನೆತನದ ಚಾಣಾಕ್ಷ ರಾಜಕಾರಣಿ ಎಂದೇ ಹೆಚ್​.ಕೆ ಪಾಟೀಲ್​​ ಪ್ರಖ್ಯಾತಿ ಪಡೆದಿದ್ದಾರೆ. ಈ ಕುಟುಂಬ ರಾಜಕೀಯ ಹಿನ್ನೆಲೆಯುಳ್ಳದ್ದಾಗಿದೆ. ಹೀಗಾಗಿ ಹೆಚ್​​.ಕೆ ಪಾಟೀಲರಿಗೆ ರಾಜಕೀಯ ರಕ್ತಗತವಾಗಿ ಬಂದಿದೆ. ಇವರು ತಾಯಿ ಪದ್ಮಾವತಿ ಹಾಗೂ ತಂದೆ ಕೆ ಹೆಚ್ ಪಾಟೀಲ್ ಅವರ ಮಗನಾಗಿ ಆಗಸ್ಟ್ 15 1953 ರಲ್ಲಿ ಗದಗದಲ್ಲಿ ಜನಿಸಿದರು. ಬ್ಯಾಚುಲರ್ ಆಫ್ ಸೈನ್ಸ್ ಹಾಗೂ ಬ್ಯಾಚುಲರ್ ಆರ್ ಲಾ ಪದವಿಯನ್ನ ಪಡೆದುಕೊಂಡಿದ್ದು. ಪರ್ತಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇನ್ನೂ ಗದಗ ಭಾಗದ ಲಿಂಗಾಯತ (ರೆಡ್ಡಿ) ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಇನ್ನೂ ಅವರ ಧರ್ಮಪತ್ನಿ ಹೇಮಾ ಪಾಟೀಲ್. ದಂಪತಿಗೆ ಕೃಷ್ಣಗೌಡ, ಲಕ್ಷ್ಮೀ ಹಾಗೂ ರಾಜೇಶ್ವರಿ ಎಂಬ ಮೂವರು ಮಕ್ಕಳಿದ್ದಾರೆ.

ರಾಜಕೀಯ ಜೀವನ

ಹೆಚ್​​.ಕೆ ಪಾಟೀಲ್​​ರು ಶುದ್ಧ ಕುಡಿಯುವ ನೀರು ಜನಾಂದೋಲನದ ಮೂಲಕ ಉತ್ತರ ಕರ್ನಾಟಕದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಅಲ್ಲದೇ ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯಾದ್ಯಂತ ನೀರಾವರಿ ವಿಸ್ತರಣೆ ಮತ್ತು ಮೋಡ ಬಿತ್ತನೆಯ ಪ್ರಯತ್ನದ ಮುಂದಾಳತ್ವದಲ್ಲಿ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ವ್ಯಾಪಕ ಪ್ರಶಂಸೆಯನ್ನು ಪಡೆದಿದರು.

ಇವರು ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕಾರಿಗಿದ್ದು, ಇವರಿಗೆ ಸಚಿವ ಸ್ಥಾನ ಸಿಕ್ಕಿದೆ.

  1. 1984ರಲ್ಲಿ ಪಧವೀಧರ ಮತಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ ಮೂಲಕ ರಾಜಕೀಯ ಪ್ರವೇಶ.
  2. 1984 ರಿಂದ 2008 ರವರೆಗೆ ಪಶ್ಚಿಮ ಪಧವೀಧರ ಮತಕ್ಷೇತ್ರದಿಂದ ಸತತ 4 ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ.
  3. 2008ರಲ್ಲಿ ಮೊದಲ ಬಾರಿಗೆ ಗದಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು
  4. 2009ರಲ್ಲಿ ಪಶ್ಚಿಮ ಪಧವೀಧರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲು
  5. 2013ರಲ್ಲಿ ಗದಗ ಕ್ಷೇತ್ರದಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶ
  6. 2018ರಲ್ಲಿ ಗದಗ ಕ್ಷೇತ್ರದಲ್ಲಿ ಎರಡನೇ ಬಾರಿ ಗೆಲವು
  7. 2023ರಲ್ಲಿ ಗದಗ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲವು
  8. 1999 ರಿಂದ 2006ರವೆಗೆ ಕೃಷಿ, ಕಾನೂನು, ಮಾನವ ಹಕ್ಕುಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
  9. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸೇವೆಸಲ್ಲಿಸಿದ್ದಾರೆ.
  10. 2018-19 ರಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಸದ್ಯ ಎಐಸಿಸಿ ಸಿಡ್ಲ್ಯೂಸಿ ಸದಸ್ಯರು ಹಾಗೂ ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.