ಗದಗ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ; ಹೊರಗುತ್ತಿಗೆ ನೌಕರರನ್ನು ಮುಂದುವರಿಸಲು ಲಂಚಕ್ಕೆ ಬೇಡಿಕೆ ಇಟ್ಟ ಗದಗ ಡಿಹೆಚ್ಒ ಡಾ.ಜಗದೀಶ್ ನುಚ್ಚಿನ್
ಸಿಬ್ಬಂದಿಯನ್ನು ಮನೆಗೆ ಕರೆಸಿ ಹಣಕಾಸಿನ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆ. ಆಕ್ರೋಶಗೊಂಡ ಸಿಬ್ಬಂದಿ ಹಣ ವಾಪಸ್ ನೀಡುವ ಚಿತ್ರೀಕರಣ ಮಾಡಿದ್ದು ಲಂಚಬಾಕ ಡಿಹೆಚ್ಓ ವಿರುದ್ಧ ಡಿ ದರ್ಜೆ ನೌಕರರು ಆಕ್ರೋಶ ಹೊರ ಹಾಕಿದ್ದಾರೆ.
ಗದಗ: ಗದಗ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳ ಹಣದ ದಾಹಕ್ಕೆ ಅಮಾಯಕ ನೌಕರರು ಬಲಿಯಾಗ್ತಾಯಿದ್ದಾರೆ. ಇಲ್ಲಿನ ಅಧಿಕಾರಿಗಳಿಗೆ ಹೇಳೋರೋ ಕೇಳೋರೋ ಇಲ್ಲದಂದಾಗಿದೆ. ಹಣ ಕೊಟ್ರೆ ನೇಮಕಾತಿ ಪ್ರಕ್ರಿಯೆ ಓಕೆ. ಇಲ್ಲಾಂದ್ರೆ ನಿಮ್ಮ ನೇಮಕಾತಿ ಅಕ್ರಮವಾಗಿದೆ ನೀವು ಕೆಲಸಕ್ಕೆ ಬರ್ಬೆಡಿ ಅಂತ ಏಕಾಏಕಿ ಸೇವೆಯಿಂದ ತೆಗೆದು ಹಾಕಲಾಗುತ್ತಿದೆ. ಡಿ ಗ್ರೂಪ್ ನೌಕರರು ಪರಿ ಪರಿಯಾಗಿ ಬೇಡಿಕೊಂಡ್ರು ಕಿಂಚಿತ್ತು ಕರುಣೆತೋರಿಲ್ಲ. ಹೊರಗುತ್ತಿಗೆ ನೌಕರರ ಮುಂದುವರೆಸಲು ಹಣದ ಬೇಡಿಕೆ ಇಟ್ಟ ಲಂಚಬಾಕ ಡಿಹೆಚ್ಓ ಈಗ ತಗಲಾಕಿಕೊಂಡಿದ್ದಾನೆ.
ಏನೂ ತಪ್ಪು ಮಾಡದಿದ್ರೂ ನೌಕರಿ ಕಳೆದುಕೊಂಡು ಹೊರಗುತ್ತಿಗೆ ನೌಕರರು ಗೋಳಾಡುತ್ತಿದ್ದಾರೆ. ಆರು ತಿಂಗಳ ಸಂಬಳವೂ ನೀಡದೇ ಏಕಾಏಕಿ ಸೇವೆಯಿಂದ ತೆಗೆದುಹಾಕಿದ ಡಿಹೆಚ್ಓ ವಿರುದ್ಧ ನೌಕರರ ಆಕ್ರೋಶ ಹೊರ ಹಾಕಿದ್ದಾರೆ. ನ್ಯಾಯಕ್ಕಾಗಿ ಡಿಸಿ, ಸಿಇಓ, ಕಾರ್ಮಿಕ ಇಲಾಖೆ ಕಚೇರಿ ಅಲೆದಾಡಿ ಬೇಡಿಕೊಂಡ್ರು ನ್ಯಾಯ ಸಿಗದೇ ರೋಸಿಹೋಗಿದ್ದಾರೆ. ಗದಗ ಜಿಲ್ಲಾಡಳಿತ ಭವನದಲ್ಲಿ ಗದಗ ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡಿದ ಹೊರಗುತ್ತಿಗೆ ನೌಕರರು ಲಂಚಬಾಕ ಡಿಎಚ್ಓ ಡಾ. ಜಗದೀಶ್ ನುಚ್ಚಿನ್ ಹಣದ ದಾಹಕ್ಕೆ ಬಲಿಯಾಗಿದ್ದಾರೆ. 2021, ಆಗಸ್ಟ್ ತಿಂಗಳಲ್ಲಿ ಆಗಿನ ಡಿಎಚ್ಓ ಡಾ. ಸತೀಶ್ ಬಸರಿಗಿಡದ ನೇಮಕಾತಿ ಆದೇಶ ನೀಡಿ ಇವ್ರನ್ನು ಸೇವೆಗೆ ಪಡೆದಿದ್ದಾರೆ. ಸುಮಾರು ಎಂಟು ತಿಂಗಳ ಸೇವೆ ಮಾಡಿದ್ದಾರೆ. ಆದ್ರೆ ಸಂಬಳ ನೀಡಿದ್ದು ಕೇವಲ ಎರಡು ತಿಂಗಳು ಮಾತ್ರ. ಇನ್ನೂ ಆರು ತಿಂಗಳ ಸಂಬಳ ನೀಡದೇ ಇವ್ರನ್ನು ಈಗ ಏಕಾಏಕಿ ತೆಗೆದುಹಾಕಲಾಗಿದೆ. ಹಣ ಕೊಟ್ರೆ ಮುಂದುವರೆಸೋದಾಗಿ ಡಿಎಚ್ಓ ಹಣದ ಬೇಡಿಕೆ ಇಟ್ಟಿದ್ದಾರೆ ಅಂತ ನೌಕರರು ಆರೋಪ ಮಾಡಿದ್ದಾರೆ. ಮೊದಲು 30 ಸಾವಿರ ನೀಡಿದ್ರೆ 10ಜನ್ರ ಸೇವೆ ಮುಂದುವರೆಸುವುದಾಗಿ ಬೇಡಿಕೆ ಇಟ್ಟು 20 ಸಾವಿರ ಹಣ ಪಡೆದಿದ್ದಾರೆ. ಆದ್ರೆ, ಡಿಎಚ್ಓ ಅತೀ ಆಸೆ ಎಷ್ಟೇಂದ್ರೆ ಬಳಿಕ 30 ಸಾವಿರ ಬೇಡ ಅಂತ 50 ಸಾವಿರಕ್ಕೆ ಬೇಡಿಯಿಟ್ಟಿದ್ದಾರೆ. ಮನೆಗೆ ಕರೆಸಿಕೊಂಡಿದ್ದಾರೆ ಸರ್. ಆದ್ರೆ, ಮೊದಲು ನಮ್ಮನ್ನು ಮುಂದುವೆರೆಸಿ ಹಣ ನೀಡ್ತೇವೆ ಅಂದಿದ್ದಕ್ಕೆ ಒಪ್ಪದ ಡಿಎಚ್ಓ ಮೊದಲು ಪಡೆದ 20 ಸಾವಿರ ಹಣ ವಾಪಸ್ ನೀಡಿದ್ದಾರೆ. ಡಿಎಚ್ಓ ಹಣ ನೀಡಿದ ವಿಡಿಯೋವನ್ನು ನೌಕರರು ಸೆರೆ ಹಿಡಿದಿದ್ದಾರೆ. ಗದಗ ಆರೋಗ್ಯ ಇಲಾಖೆ ಅಂದ್ರೆ ಲಂಚ ಎಂಬಂತಾಗಿದೆ ಅಂತ ನೌಕರ ಮಂಜುನಾಥ್ ಕಿಡಿಕಾರಿದ್ದಾರೆ. strong>ಇದನ್ನೂ ಓದಿ: Salman Khan: ಬಾಲಿವುಡ್ ಚಿತ್ರಗಳ ಸೋಲಿನ ಬೆನ್ನಲ್ಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ಮಹತ್ವದ ನಿರ್ಧಾರ ತಳೆದ್ರಾ ಸಲ್ಮಾನ್ ಖಾನ್?
30 ಸಾವಿರ ಹಣ ಪಡೆದು ಸುಮ್ನೆ ಮುಂದುವರೆಸಿದ್ರೆ ಡಿಎಚ್ಓ ಲಂಚಾವತಾರ ಬಯಲಾಗುತ್ತಿರಲಿಲ್ಲ. ಅತೀ ಆದ್ರೆ ಎಲ್ಲವೂ ಬಯಲಾಗುತ್ತೆ ಅಂತಾರಲ್ಲ. ಹಾಗೆ ತಿಂಗಳಿಂದ ಡಿಎಚ್ಓ ಕಚೇರಿಗೆ ಅಲೆದು ಅಲೆದು ರೋಸಿಹೋದ ಸಿಬ್ಬಂದಿ ಡಿಎಚ್ಓ ಡಾ. ಜಗದೀಶ್ ನುಚ್ಚಿನ ಕೆರಳಿ ಕೆಂಡವಾಗಿದ್ರು. ಯಾವಾಗ ನಮ್ಮನ್ನು ಸೇವೆಯಲ್ಲಿ ಮುಂದುವರೆಸುವುದಿಲ್ಲವೋ ಅನ್ನೋದನ್ನು ಅರಿತ ಹೊರಗುತ್ತಿಗೆ ನೌಕರರು ಡಿಎಚ್ಓ ಲಂಚಾವತಾರ ವಿಡಿಯೋ ಮಾಡಿದ್ದಾರೆ. ಲಂಚಬಾಕ ಡಿಎಚ್ಓ ವಿರುದ್ಧ ಡಿ ದರ್ಜೆ ನೌಕರರು ಆಕ್ರೋಶ ಹೊರಹಾಕಿದ್ದಾರೆ. ಗದಗ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿ ಅನ್ನೋದು ಒಂದು ದಂಧೆಯಾಗಿದೆ. ಹಣ ಕೊಟ್ಟವ್ರಿಗೆ ಆದೇಶ. ಹಣ ಕೊಡದವ್ರಿಗೆ ಗೇಟ್ ಪಾಸ್ ನೀಡುವ ಚಾಳಿ ಮುಂದುವರೆದಿದೆ. ನ್ಯಾಯಕ್ಕಾಗಿಕಚೇರಿ ಕಚೇರಿ ಅಲೆದಾಡಿದ್ರೂ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ಡಿಸಿ ಸುಂದರೇಶ್ ಬಾಬು, ಸಿಇಓ ಡಾ.ಸುಶೀಲಾ, ಕಾರ್ಮಿಕ ಇಲಾಖೆ ಮೊರೆ ಹೋದ್ರು ಬಡ ನೌಕರರ ಗೋಳು ಕೇಳಿಲ್ಲ ಅಂತ ಹೊರಗುತ್ತಿಗೆ ನೌಕರ ಶಿವನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ನೌಕರರು ಡಿಎಚ್ಓ ಅವ್ರನ್ನು ತಿಂಗಳಿಂದ ಪರಿಪರಿಯಾಗಿ ಬೇಡಿಕೊಂಡ್ರು ಕರುಗದ ಕಲ್ಲು ಹೃದಯ ಕರಗಿಲ್ಲ. ಮಾನವೀಯ ಅನ್ನೋದು ಮರೆತು ಡಿ ಗ್ರುಪ್ ನೌಕರರಿಂದ ಹಣ ವಸೂಲಿ ಮಾಡಿದ್ದು ಗದಗ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ಭ್ರಷ್ಟಚಾರಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ಅಂಟುತ್ತಿದೆ. ಇನ್ನೂ ಉಸ್ತುವಾರಿ ಸಚಿವರಿಗೆ ಗೋಳು ಹೇಳಬೇಕೆಂದ್ರೆ ಮೂರು ತಿಂಗಳಿಂದ ಗದಗ ಜಿಲ್ಲೆಯತ್ತ ಉಸ್ತುವಾರಿ ಸಚಿವ ಬಿ ಸಿ ಪಾಟೀಲ್ ಸುಳಿದಿಲ್ಲ. ಜಿಲ್ಲೆಯ ಸಚಿವ ಸಿ ಸಿ ಪಾಟೀಲ್ರಿಗೆ ಹೇಳಬೇಕು ಅಂದ್ರೆ ಗದಗ ಆಡಳಿತ ಬಗ್ಗೆ ತೆಲೆಕೆಡಿಸಿಕೊಂಡಿಲ್ಲ. ಹೀಗಾಗಿ ಇಲ್ಲಿನ ಅಧಿಕಾರಿಗಳಿಗೆ ಹೇಳೋರು ಕೇಳೋರೋ ಇಲ್ಲದಂತಾಗಿದೆ. ನಾವೂ ಆಡಿದ್ದೇ ಆಟ ಎಂಬಂತೆ ವರ್ತನೆ ತೋರುತ್ತಿದ್ದಾರೆ. ಇನ್ನಾದ್ರೂ ಸರ್ಕಾರ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನೂ ಓದಿ: Tamannaah Bhatia: ತೆಲುಗಿನಲ್ಲಿ ‘ನಿಧಿಮಾ‘ ಆಗಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಭಾಟಿಯಾ; ನಟಿಯ ಅಂದದ ಫೋಟೋಗಳು ಇಲ್ಲಿವೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ನಾನು ಹಣಕ್ಕಾಗಿ ಡಿಮ್ಯಾಂಡ್ ಮಾಡಿಲ್ಲ ಇನ್ನು ಈ ಆರೋಪ ಸಂಬಂಧ ಮಾತನಾಡಿದ ಗದಗ ಡಿಎಚ್ಓ ಡಾ ಜಗದೀಶ್ ನುಚ್ಚಿನ್ ಸ್ಪಷ್ಟನೆ ನೀಡಿದ್ದಾರೆ. ನಾನು ಹಣ ಡಿಮ್ಯಾಂಡ್ ಮಾಡಿಲ್ಲ. ಹಣ ಪಡೆದಿಲ್ಲ. ಹಿಂದಿನ ಡಿಎಚ್ಓ ಡಾ ಸತೀಶ್ ಬಸರಿಗೀಡದ್ ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಂಡಿದ್ರು. 11 ಜನರನ್ನು ಪಿಕೆಆರ್ ಏಜನ್ಸಿ ಮೂಲಕ ಆಯ್ಕೆ ಮಾಡಿಕೊಂಡಿದ್ರು. ಜನವರಿ 13ಕ್ಕೆ ನಾನು ಜಾರ್ಚ್ ತೆಗೆದುಕೊಂಡೆ ಪೈಲ್ ನೋಡಿದಾಗ ಅನುಮತಿ ಇಲ್ಲದೆ ನೇಮಕ ಮಾಡಿರೋದು ಕಂಡು ಬಂದಿದೆ. ಅವರ ಸೇವೆ ಕಾನೂನು ಬಾಹಿರವಾಗಿದೆ ಎಂದು ಪಿಕೆಆರ್ ಏಜನ್ಸಿಗೆ ಪತ್ರವನ್ನು ಬರೆದಿದ್ದೇ. ಹೇಗಾದ್ರು ಕೆಲಸ ನೀಡಿ ಎಂದು ಹೊರಗುತ್ತಿಗೆದಾರರು ಹಣ ನೀಡಿದ್ರು. ತಕ್ಷಣವೇ ಹಣವನ್ನು ವಾಪಾಸ್ ನೀಡಿದ್ದೇನೆ, ಬೇರೆ ಕಡೇ ಕೆಲಸ ನೀಡುವ ಭರವಸೆ ನೀಡಿದ್ದೇ. ನಾನು ಅವರಿಂದ ಹಣ ಪಡೆದುಕೊಂಡಿಲ್ಲಾ ಎಂದು ಸೃಷ್ಟನೆ ನೀಡಿದ್ದಾರೆ.
ನಮ್ಮ ಮನೆಗೆ ಬಂದ ಕೂಡಲೇ ನನಗೆ ಹಣ ಕೊಟ್ರು, ನಾನು ತಕ್ಷಣವೇ ವಾಪಸ್ ನೀಡಿದ್ದೇನೆ. ಖಾಲಿಯಿದ್ರೆ ಮಾತ್ರ ನಾನು ಏನಾದ್ರು ಡಿಮ್ಯಾಂಡ್ ಮಾಡಬೇಕಾಗುತ್ತೇ, ನಾನು ಡಿಮ್ಯಾಂಡ್ ಮಾಡುವ ವ್ಯಕ್ತಿಯಲ್ಲ, ನಾನು ಡಿಮ್ಯಾಂಡ್ ಮಾಡಿಲ್ಲಾ. ಈ ಕುರಿತು ತನಿಖೆ ಮಾಡಿಸುತ್ತಿದ್ದೇವೆ, ನಾನು ಹಣಕ್ಕಾಗಿ ಡಿಮ್ಯಾಂಡ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Published On - 9:11 am, Tue, 7 June 22