AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಮಾಡಿದ ಘೋಷಣೆಯಿಂದ 2 ಲಿಂಗಾಯತ ಮಠಗಳ ನಡುವೆ ಭುಗಿಲೆದ್ದ ಭಿನ್ನಾಭಿಪ್ರಾಯ

ಗದಗ ನಗರದ ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ಧಲಿಂಗ ಶ್ರೀಗಳ ಜನ್ಮದಿನದಂದು ಭಾವೈಕ್ಯತಾ ದಿನಾಚರಣೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದೇ ತಡ ಗದಗ ಜಿಲ್ಲೆಯ ಎರಡು ಮಠಗಳ ನಡುವೆ ಬಿಗ್ ಫೈಟ್​ಗೆ ಕಾರಣವಾಗಿದೆ.

ಸಿಎಂ ಮಾಡಿದ ಘೋಷಣೆಯಿಂದ 2 ಲಿಂಗಾಯತ ಮಠಗಳ ನಡುವೆ ಭುಗಿಲೆದ್ದ ಭಿನ್ನಾಭಿಪ್ರಾಯ
ದಿಂಗಾಲೇಶ್ವರ ಸ್ವಾಮೀಜಿ
TV9 Web
| Updated By: ಸುಷ್ಮಾ ಚಕ್ರೆ|

Updated on: Apr 20, 2022 | 6:41 PM

Share

ಗದಗ: ಆ ಎರಡು ಮಠಗಳು ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳು. ಆ ಎರಡು ಮಠಗಳಲ್ಲಿ ಒಂದು ಕೋಮು ಸೌಹಾರ್ದತೆಯನ್ನು ಸಾರುವ ಮಠ. ಇನ್ನೊಂದು ಭಾವೈಕ್ಯತಾ ಮಠ. ಆದರೆ, ಮುಖ್ಯಮಂತ್ರಿಗಳ ಆ ಘೋಷಣೆಯಿಂದಾಗಿ ಎರಡು ಪ್ರಸಿದ್ಧ ಮಠಗಳ ನಡುವೆ ಜಂಗಿ ಕುಸ್ತಿ ಏರ್ಪಟ್ಟಿದೆ. ಒಂದು ಮಠದ ಶ್ರೀಗಳ ಜನ್ಮದಿನದ ಅಂಗವಾಗಿ ಭಾವೈಕ್ಯತಾ ದಿನಾಚರಣೆ ಮಾಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯವರ (Basavaraj Bommai) ಈ ಘೋಷಣೆ ಇನ್ನೊಂದು ಮಠದ ಪೀಠಾಧಿಪತಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದವರು, ಪ್ರತಿ ಸಮಾಜ, ಧರ್ಮದಲ್ಲಿ ಒಡಕು ಉಂಟುಮಾಡಿದ ಶ್ರೀಗಳ ಹೆಸರಿನಲ್ಲಿ ಭಾವೈಕ್ಯತಾ ದಿನಾಚರಣೆ ಆಘಾತಕಾರಿ ಎಂದು ಅವರು ಕಿಡಿಕಾರಿದ್ದಾರೆ. ಫಕೀರ್ ದಿಂಗಾಲೇಶ್ವರ ಶ್ರೀಗಳ (Dingaleshwar Swamiji) ಹೇಳಿಕೆಗೆ ಗದಗ ತೋಂಟದಾರ್ಯ ಮಠದ ಭಕ್ತರು ಕೆಂಡಕಾರಿದ್ದು, ಸಿದ್ದಲಿಂಗ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಫಕೀರೇಶ್ವರ ಮಠದ ಪೀಠಾಧಿಪತಿಗಳಾಗಿ ಮುಂದುವರಿಯೋದು ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗದಗ ನಗರದ ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ಧಲಿಂಗ ಶ್ರೀಗಳ ಜನ್ಮದಿನದಂದು ಭಾವೈಕ್ಯತಾ ದಿನಾಚರಣೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದೇ ತಡ ಗದಗ ಜಿಲ್ಲೆಯ ಎರಡು ಮಠಗಳ ನಡುವೆ ಬಿಗ್ ಫೈಟ್​ಗೆ ಕಾರಣವಾಗಿದೆ. ಸಿಎಂ ಘೋಷಣೆಗೆ ಗದಗ ಜಿಲ್ಲೆಯ ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ಧಲಿಂಗ ಶ್ರೀಗಳು ಬ್ರಾಹ್ಮಣರು, ಆರ್.ಎಸ್ಎಸ್ ಹಾಗೂ ಸಂಘಪರಿವಾರ ವಿರುದ್ಧ ಟೀಕೆ ಮಾಡಿದವರು, ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದವರು. ಪ್ರತಿ ಸಮಾಜ ಧರ್ಮದಲ್ಲಿ ಒಡಕು ಉಂಟು ಮಾಡಿದ ಶ್ರೀಗಳ ಹೆಸರಿನಲ್ಲಿ ಭಾವೈಕ್ಯತಾ ದಿನಾಚರಣೆ ಆಘಾತಕಾರಿ ಅಂತ ಕಿಡಿಕಾರಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಭಾವೈಕ್ಯತೆಯ 500 ವರ್ಷಗಳ ಇತಿಹಾಸ ಇದೆ. ಹಿಂದೂ ಮುಸ್ಲಿಂ, ಎಲ್ಲ ಹಿಂದೂಗಳ ಒಳಪಂಗಡಗಳ ಸಮಾನವಾಗಿ ಕಂಡಿದ್ದ ಮಠ. ಸಿಎಂ ಘೋಷಣೆ ಕೋಟ್ಯಾಂತರ ಭಕ್ತರನ್ನು ಹೊಂದಿದ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಹಾಕಿದ ಕೊಡಲಿ ಪೆಟ್ಟು ಎಂದು ಗರಂ ಆಗಿದ್ದಾರೆ. ಸೀಗೆ ಹುಣ್ಣಿಮೆಯ ದಿನ ಫಕೀರೇಶ್ವರ ಮಠದ ಜಾತ್ರೆ ಇದೆ. ಆ ದಿನ ಭಾವೈಕ್ಯತಾ ದಿನ ಘೋಷಣೆ ಮಾಡಬೇಕು ಅಂತ ಶಿರಹಟ್ಟಿ ಫಕೀರೇಶ್ವರ ಮಠದ ಪೀಠಾಧಿಪತಿ ಫಕೀರ್ ದಿಂಗಾಲೇಶ್ವರ ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮತೀಯ ಗಲಭೆ ಕಾರಣರಾದ, ಜಾತಿ ಜಾತಿಯಲ್ಲಿ ಒಡೆದಾಳುವ ಸ್ವಾಮೀಜಿಯವರ ಹೆಸರಲ್ಲಿ ಭಾವೈಕ್ಯತಾ ದಿನಾಚರಣೆ ಮಾಡಿದರೆ, ಆ ಪದದ ಅರ್ಥ ಏನು ಅಂತ ಕಿಡಿಕಾರಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯವರೇ ನಿಮ್ಮ ತಂದೆ, ತಾಯಿ, ನೀವು ಫಕೀರೇಶ್ವರ ಮಠದ ಭಕ್ತರು. ಇದೆಲ್ಲಾ ಮರೆತು 20 ಕಿಲೋ ಮೀಟರ್ ದೂರದ ಪಕ್ಕದ ಮಠಕ್ಕೆ ಹೋಗಿ ಈ ರೀತಿ ಘೋಷಣೆ ಮಾಡಿದ್ದು, ಶಿರಹಟ್ಟಿ ಮಠದ ಪಾಲಿಗೆ ಮರಣ ಶಾಸನ ಬರೆದಂತೆ. ತೋಂಟದಾರ್ಯ ಲಿಂಗೈಕ್ಯ ಡಾ. ಸಿದ್ದಲಿಂಗ ಶ್ರೀಗಳ ಸಮಾಧಿ ಉದ್ಘಾಟನೆ ಹೋಗಿ ನೀವು ನಮ್ಮ ಮಠದ ಸಮಾಧಿ ಮಾಡಿದ್ದೀರಿ ಅಂತ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಕೀರ್ ದಿಂಗಾಲೇಶ್ವರ ಶ್ರೀಗಳ ಈ ಹೇಳಿಕೆಗೆ ಗದಗ ನಗರದ ತೋಂಟದಾರ್ಯ ಮಠದ ಭಕ್ತರು ಕೆಂಡಾಮಂಡಲವಾಗಿದ್ದಾರೆ. ಫಕ್ಕಿರ್ ದಿಂಗಾಲೇಶ್ವರ ಸ್ವಾಮೀಜಿಗಳು, ತೋಂಟದಾರ್ಯ ಲಿಂಗೈಕ್ಯ ಶ್ರೀಗಳ ಸಿದ್ದಲಿಂಗ ಸ್ವಾಮೀಜಿಗಳ ಕಾಯಕವನ್ನು ನೋಡಬೇಕು. ಹಾಗೇ ಬಾಯಿ ಬಂದ ಹಾಗೆ ಮಾತನಾಡಬಾರದು. ಮಠದ ಇತಿಹಾಸವನ್ನು ನೋಡಿಕೊಂಡು ಮಾತನಾಡಬೇಕು. ಶಿರಹಟ್ಟಿ ಮಠಕ್ಕೆ ಹಾಗೂ ತೋಂಟದಾರ್ಯ ಮಠಕ್ಕೆ ಒಳ್ಳೆಯ ಸಂಬಂಧ ಇದೆ. ದಿಂಗಾಲೇಶ್ವರ ಸ್ವಾಮೀಜಿಗಳು ಹೀಗೆ ಮುಂದುವರೆದರೆ ಭಕ್ತರು ಪ್ರತಿಭಟನೆ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಶಿರಹಟ್ಟಿ ಫಕೀರೇಶ್ವರ ಮಠದ ಪೀಠಾಧಿಪತಿಗಳಾಗಿ ಮುಂದುವರೆಯದು ಕಷ್ಟವಾಗುತ್ತದೆ ಅಂತ ತೋಂಟದಾರ್ಯ ಮಠದ ಭಕ್ತರು ಕೋಟ್ರೆಶ್ ಮೆಣಸಿನಕಾಯಿ ಎಚ್ಚರಿಕೆ ನೀಡಿದ್ದಾರೆ.

ಗದಗ ತೋಂಟದಾರ್ಯ ಲಿಂಗೈಕ್ಯ ಡಾ ಸಿದ್ದಲಿಂಗ ಶ್ರೀಗಳಿಗೆ ಬಹುದೊಡ್ಡ ಹೆಸರಿದೆ. ಭಕ್ತರ ಬಳಗವಿದೆ. ಶ್ರೀಗಳ ವಿರುದ್ಧ ಫಕೀರ್ ದಿಂಗಾಲೇಶ್ವರ ಶ್ರೀಗಳು ಹಗುರವಾಗಿ ಮಾತನಾಡಿದ್ರೂ ತೋಂಟದಾರ್ಯ ಮಠದ ಶ್ರೀಗಳು ಮಾತ್ರ ಮೌನಕ್ಕೆ ಶರಣಾಗಿದ್ದು, ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಅನ್ನೋ ಗುಸು ಗುಸು ತೋಂಟದಾರ್ಯ ಮಠದ ಆವರಣದಲ್ಲಿ ಕೇಳಿ ಬರ್ತಾಯಿದೆ. ಒಟ್ಟಾರೆಯಾಗಿ ಭಾವೈಕ್ಯತೆ ದಿನಾಚರಣೆ ಹೇಳಿಕೆ ತೋಂಟದಾರ್ಯ ಮಠ ಹಾಗೂ ಶಿರಹಟ್ಟಿ ಫಕೀರೇಶ್ವರ ಮಠದ ನಡುವೆ ಕಿಡಿ ಹೊತ್ತಿಸಿದ್ದು ಮಾತ್ರ ಸತ್ಯ. ಮುಂದೆ ಯಾವ ಹಂತಕ್ಕೆ ತಲುಪುತ್ತೋ ಕಾದುನೋಡಬೇಕಿದೆ.

(ವರದಿ: ಸಂಜೀವ ಪಾಂಡ್ರೆ)

ಇದನ್ನೂ ಓದಿ: ಸರ್ಕಾರದ ಕಮಿಷನ್ ಬಗ್ಗೆ ದಿಂಗಾಲೇಶ್ವರ ಶ್ರೀಗಳ ಆರೋಪ ಸತ್ಯಕ್ಕೆ ದೂರ ಎಂದ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ

ಮಠಗಳಿಂದಲೂ ಕಮಿಷನ್ ಕೇಳುವ ಸರ್ಕಾರ: ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಅರೋಪ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!