ವಾರ್ಡ್​ನಲ್ಲಿ ಅವ್ಯವಸ್ಥೆ: ನಗರಸಭೆ ಸದಸ್ಯನ‌ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಜನ

ಗದಗನ ಬೆಟಗೇರಿಯ ಬಣ್ಣದ ವಾರ್ಡ್​​ನಲ್ಲಿ ಚರಂಡಿ, ಬೀದಿ ದೀಪ, ರಸ್ತೆ ಹದಗೆಟ್ಟು ಅವ್ಯವಸ್ಥೆ ಉಂಟಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸಿಟ್ಟಿಗೆದ್ದ ಜನರು ನಗರಸಭೆ ಸದಸ್ಯ ಮಾಧುಸಾ ಮೇಹರವಾಡೆ ಅವರನ್ನು ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರ್ಡ್​ನಲ್ಲಿ ಅವ್ಯವಸ್ಥೆ: ನಗರಸಭೆ ಸದಸ್ಯನ‌ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಜನ
ವಾರ್ಡ್ ಸದಸ್ಯ ಮಾಧುಸಾ ಮೇಹರವಾಡೆ ಕೂಡಿ ಹಾಕಿ‌ದ ಜನರು
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2023 | 4:32 PM

ಗದಗ, ಜುಲೈ 27: ಕಳೆದ ಹಲವು ದಿನಗಳಿಂದ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿವೆ. ಚರಂಡಿಗಳು ಬ್ಲಾಕ್ ಆಗಿ ಅವಾಂತರ ಸೃಷ್ಠಿ ಆಗುತ್ತಿವೆ. ವಾರ್ಡ್ ಸದಸ್ಯ ಹಾಗೂ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೊಚ್ವಿಗೆದ್ದ ಸ್ಥಳೀಯರು, ಮಹಿಳೆಯರು ನಗರಸಭೆ (municipal council) ಸದಸ್ಯನನ್ನು ಕೂಡಿ ಹಾಕಿ ಬಿಸಿ ಮುಟ್ಟಿಸಿದ್ದಾರೆ. ನಗರದ ಬೆಟಗೇರಿಯ ಬಣ್ಣದನಗರದ ಮೂರನೇ ವಾರ್ಡ್​ನಲ್ಲಿ ಈ ಘಟನೆ ನಡೆದಿದೆ.

ಮೂರನೇ ವಾರ್ಡ್ ನಗರಸಭೆ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಸಮಸ್ಯೆ ಆಲಿಸಿಲು ಕರೆಸಿಕೊಂಡು ಸಾರ್ವಜನಿಕರು ಕೂಡಿ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈಶ್ವರ ಸೇವಾ ಟ್ರಸ್ಟ್ ಕಮಿಟಿ ಕಛೇರಿಯಲ್ಲಿ ಮುಂಜಾನೆ 10-30ರ ಸುಮಾರಿಗೆ ಕೂಡಿ ಹಾಕಿದ್ದಾರೆ. ಕೂಡಿ ಹಾಕಿ‌ ನಾಲ್ಕು ಗಂಟೆಯಾದರೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೆಸರು ರಸ್ತೆಯಲ್ಲೇ, ಜೀವ ಪಣಕ್ಕಿಟ್ಟು ನೀರು ತರುವ ಮಹಿಳೆಯರ ಪಾಡು ಹೀಗಿದೆ ನೋಡಿ: ಶಾಸಕ, ಅಧಿಕಾರಿಗಳ ವಿರುದ್ಧ ಆಕ್ರೋಶ

ನಗರಸಭೆ ಸದಸ್ಯ ಮಾಧುಸಾ ಅವರು, ನಗರಸಭೆ ಆಯುಕ್ತರಿಗೆ ಫೋನ್ ಮಾಡಿದರೂ ಅವರು ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ವಾರ್ಡ್ ನಲ್ಲಿ ಚರಂಡಿ, ಕುಡಿಯುವ ನೀರು, ಬೀದಿ ದೀಪ, ರಸ್ತೆ ಹದಗೆಟ್ಟಿವೆ. ಈ ಕುರಿತು ಸದಸ್ಯನಿಗೆ ಹಲವಾರು ಬಾರಿ‌ ಮನವಿ ಮಾಡಿದರೂ ಅವರು ಸ್ಪಂದಿಸುವ ಗೋಜಿಗೆ ಹೋಗಿಲ್ಲ ಎಂಬ ಮಾತುಗಳು ಕೇಳಿ ಬಂದವು.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಮಾಯ, ಮಲೆನಾಡಿನ ಸೊಬಗು! ದನಗಳ ಸಂತೆಯಲ್ಲಿ ಜೋಡೆತ್ತು ಬೆಲೆ ನ್ಯಾನೋ ಕಾರ್​​ ಬೆಲೆಯನ್ನೂ ಮೀರಿಸುತ್ತಿದೆ

ಹೀಗಾಗಿ ಇವತ್ತು ವಾರ್ಡ್​ಗೆ ಕರೆಸಿ ಕೂಡಿ ಹಾಕಿ ಸಾರ್ವಜನಿಕರು ಬಿಸಿ ತಟ್ಟಿಸಿದ್ದಾರೆ. ಜನರು ಆಕ್ರೋಶಕ್ಕೆ ಸದಸ್ಯ ಮಾಧುಸಾ ಕಂಗಾಲಾಗಿದ್ದಾನೆ. ಮತ ಪಡೆದು ಜನ ಸೇವೆ ಮಾಡಬೇಕಾದ ಸದಸ್ಯ ಅಧಿಕಾರ ಅನುಭವಿಸಿಕೊಂಡು ಹಾಯಾಗಿದ್ದ. ಆದರೆ ಇವತ್ತು ಮಹಿಳೆಯರು, ವಾರ್ಡ್ ಜನರು ಪಕ್ಕಾ ಪಾಠ ಕಲಿಸಿದ್ದಾರೆ. ಈ ಮೂಲಕ ನಗರಸಭೆ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ತಿಳಿದ ಬೆಟಗೇರಿ ಪೊಲೀಸರು ಭೇಟಿ ನೀಡಿ, ಸ್ಥಳೀಯರ ಮನವೊಲಿಸಿ ನಗರಸಭೆ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಈಶ್ವರ ಸೇವಾ ಟ್ರಸ್ಟ್ ಕಚೇರಿಯಿಂದ ಹೊರತಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್