ಮಹದಾಯಿ ಹೋರಾಟ ಮೆಲಕು ಹಾಕಿ ಗದಗನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕ

ಮಹದಾಯಿ ಹೋರಾಟ ಮೆಲಕು ಹಾಕಿ ಗದಗನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 15, 2022 | 10:56 PM

7 ವರ್ಷ ಕಾಂಗ್ರೆಸ್ ಕೈಯಲ್ಲಿ ಇತ್ತು. ನೀರು‌ ನಮಗೆ ಕೊಟ್ಟು ದೊಡ್ಡ ಹೆಸರು ಪಡೆಯಬಹುದಿತ್ತು. ನೀರಿಗಾಗಿ ಹೋರಾಟ ಮಾಡಿದ ರೈತರನ್ನು ಪೊಲೀಸರಿಂದ ಅಮಾನವೀಯವಾಗಿ ಒಬ್ಬಬ್ಬರನ್ನೇ ಹೊಡೆದರು.

ಗದಗ: ನಿಮ್ಮ ಋಣ ನಾ ಎಂದೂ ಮರೆಯಲ್ಲ. ನನಗೆ ರೊಟ್ಟಿ ಕೊಟ್ರಿ, ಮಲಗೋಕೆ ಕಟ್ಟೆ ಜಾಗ ಕೊಟ್ರಿ. ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹದಾಯಿ ಹೋರಾಟದ ಮೆಲಕು ಹಾಕಿ ಭಾಷಣದ ವೇಳೆ ಸಿಎಂ (CM)ಬಸವರಾಜ್ ಬೊಮ್ಮಾಯಿ ಭಾವುಕರಾಗಿದ್ದಾರೆ. ನಮ್ಮ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟಿದ್ದಿರಿ ನನಗೆ ಬಹಳ ಸಂತೋಷವಾಗಿದೆ. ಅಂದಿನ ಯುಪಿಎ ಸರಕಾರ ಟ್ರಿಬನಲ್ ಆದೇಶದ ವಿರುದ್ಧ ನಡೆದುಕೊಂಡ್ರು. ಆದ್ರೆ ಇಂದು ಅವರೆ ಅದೇ ವಿಚಾರಕ್ಕೆ ಪಾದಯಾತ್ರೆ ಮಾಡಿ. ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಎಸ್ ಆರ್ ಪಾಟೀಲ್ ವಿರುದ್ಧ ವಾಗ್ದಾಳಿ ಮಾಡಿದರು. ನಾವು ನಿರಂತರ ಪ್ರಯತ್ನ, ಹಠ ಬಿಡದ ಛಲದಿಂದ ಹೋರಾಟ ಮಾಡಿದ್ದೇವೆ. ನಾವು ನೀರು ಹರಿಸೋದಿಲ್ಲ, ನೀರು ಹರಿಯದಂತೆ ಗೋಡೆ ಕಟ್ತೇವೆ ಅಂತ ನಾವು ಕಟ್ಟಿದ ಕಿನಾಲ್​ಗೆ ಗೋಡೆ ಕಟ್ಟಿದ್ದಾರೆ. ಕಿನಾಲಿಗೆ ಅಡ್ಡಲಾಗಿ ಗೋಡೆ ಕಟ್ಡಿದವರಿಗೆ ಬೆಂಬಲ ಕೊಡ್ತೀರಾ ತೀರ್ಮಾನ ನಿಮ್ಮದು ಎಂದರು.

7 ವರ್ಷ ಕಾಂಗ್ರೆಸ್ ಕೈಯಲ್ಲಿ ಇತ್ತು. ನೀರು‌ ನಮಗೆ ಕೊಟ್ಟು ದೊಡ್ಡ ಹೆಸರು ಪಡೆಯಬಹುದಿತ್ತು. ನೀರಿಗಾಗಿ ಹೋರಾಟ ಮಾಡಿದ ರೈತರನ್ನು ಪೊಲೀಸರಿಂದ ಅಮಾನವೀಯವಾಗಿ ಒಬ್ಬಬ್ಬರನ್ನೇ ಹೊಡೆದರು. ಹೆಣ್ಣು ಮಕ್ಕಳನ್ನ ಬೂಟು ಗಾಲಿನಿಂದ ಒದ್ರು. ಕಾನೂನಿನ ಅನ್ವಯ ಕಾಮಗಾರಿ ಕೂಡಲೆ ಪ್ರಾರಂಭ ಮಾಡುತ್ತೇವೆ ಇದು ನಮ್ಮ ಬದ್ಧತೆ. ತಾಯಿ ಯಲ್ಲಮ್ಮ ಅವಳ ಅಡಿಯಿಂದ ಬದಾಮಿ ಬನಶಂಕರಿ ‌ಮುಡಿಯವರೆಗೆ ಮಹದಾಯಿ ಮಲಪ್ರಭಾ ಹರಿಬೇಕು ಅನ್ನೋ ಇಚ್ಛಶಾಕ್ತಿ ಇದೆ. ರೈತ ಯಾರಿಗೂ ಸೇರಿಲ್ಲ, ರೈತರು ಎಲ್ಲರಿಗೂ ಸೇರಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:

ಈಜುಕೊಳವನ್ನು ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅದರಲ್ಲಿ ಧುಮುಕಿ ಈಜಿದರು!!

ದಾವಣಗೆರೆ: ಊರಲ್ಲಿ ಅಪ್ಪಳಿಸಿದ ಸಿಡಿಲು ರಸ್ತೆಬದಿಯಿದ್ದ ಬೇಕರಿಯನ್ನು ಧ್ವಂಸ ಮಾಡಿತು