Tv9 Impact: ವಿಶ್ವ ಮಟ್ಟದಲ್ಲಿ ಮಿಂಚಲು ಸನ್ನದ್ಧಳಾದ ಪವಿತ್ರಾಗೆ ಸಿಎಂ ಬೊಮ್ಮಾಯಿರಿಂದ 5 ಲಕ್ಷ ರೂ ಮೌಲ್ಯದ ಸೈಕಲ್ ಉಡುಗೊರೆ!

| Updated By: ಆಯೇಷಾ ಬಾನು

Updated on: Sep 24, 2021 | 11:19 AM

ಆ ಹುಡುಗಿ ಬಡತನದ ಬೆಂಕಿಯಲ್ಲಿ ಅರಳಿ ರಾಷ್ಟ್ರಮಟ್ಟದ ಸೈಕ್ಲಿಂಗ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದಾಳೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸನ್ನದ್ಧಳಾಗಿದ್ದಾಳೆ. ಆದ್ರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಬೇಕಾದ ಅಗತ್ಯ ಸೈಕಲ್‌ಗಾಗಿ ಪರದಾಡುತ್ತಿದ್ಲು. ಆ ಹುಡ್ಗಿಯ ಕನಸನ್ನ ಟಿವಿ9 ಈಡೇರಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟು ಮಾತು ಉಳಿಸಿಕೊಂಡಿದ್ದಾರೆ.

Tv9 Impact: ವಿಶ್ವ ಮಟ್ಟದಲ್ಲಿ ಮಿಂಚಲು ಸನ್ನದ್ಧಳಾದ ಪವಿತ್ರಾಗೆ ಸಿಎಂ ಬೊಮ್ಮಾಯಿರಿಂದ 5 ಲಕ್ಷ ರೂ ಮೌಲ್ಯದ ಸೈಕಲ್ ಉಡುಗೊರೆ!
ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ
Follow us on

ಗದಗ: ಖೇಲೋ ಇಂಡಿಯಾಗೆ ಆಯ್ಕೆಯಾಗಿರುವ ಬಾಲಕಿ ಪವಿತ್ರಾಗೆ ಸಿಎಂ ಬಸವರಾಜ ಬೊಮ್ಮಾಯಿ ಬೈಸಿಕಲ್ ವಿತರಿಸಿದ್ದಾರೆ. ಸೆ.9 ಗೌರಿ ಹಬ್ಬದ ದಿನ ಸಿಎಂ ಸ್ಪೀಕಿಂಗ್ ಲೈವ್ ಕಾರ್ಯಕ್ರಮದಲ್ಲಿ ಬಾಲಕಿ ಸ್ಟೋರಿ ನೋಡಿದ್ದ ಸಿಎಂ ತಕ್ಷಣ ಸ್ಪಂದಿಸಿದ್ದು ವಿಧಾನಸೌಧದ ಕೆಂಗಲ್ ಹನುಮಂತರಾಯ ಮೂರ್ತಿ ಬಳಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 5 ಲಕ್ಷ ಬೆಲೆ ಬಾಳುವ ಸೈಕಲ್ ನೀಡಿ ಆಶೀರ್ವದಿಸಿದ್ದಾರೆ

ಸೈಕ್ಲಿಸ್ಟ್ ತಾರೆಯ ಕುಟುಂಬದಲ್ಲೀಗ ಎಲ್ಲಿಲ್ಲದ ಖುಷಿ. ಮಗಳಿಗೆ ಅತ್ಯಾಧುನಿಕ ಸೈಕಲ್ ಸಿಗುವ ಸುದ್ದಿ ತಿಳಿದಿದ್ದೇ ತಡ ಹೆತ್ತವ್ರು, ಕ್ರೀಡಾ ಇಲಾಖೆ ಅಧಿಕಾರಿಗಳು ಸೈಕ್ಲಿಸ್ಟ್ ಪವಿತ್ರಾಗೆ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡ್ರು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಪವಿತ್ರಾ ಕುರ್ತಕೋಟಿ ಎಂಬ ಬಾಲಕಿ ಬಡತನದಲ್ಲಿ ಹುಟ್ಟಿ ಬೆಳೆದ್ರೂ ಸೈಕ್ಲಿಂಗ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ಲು. ಉತ್ತರ ಪ್ರದೇಶದ ಕುರುಕ್ಷೇತ್ರದಲ್ಲಿ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್‌ನಲ್ಲಿ ಘಟಾನುಘಟಿ ಸೈಕ್ಲಿಸ್ಟ್‌ಗಳನ್ನ ಹಿಂದಿಕ್ಕಿ 5ನೇ ಸ್ಥಾನ ಪಡೆದು ಮಿಂಚಿದ್ಲು. ಹೀಗಾಗಿ ದೆಹಲಿಯ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆ ಮಾಡಲಾಗಿತ್ತು. ಆದ್ರೆ, ದೆಹಲಿಯ ಕ್ಯಾಂಪ್‌ನಲ್ಲಿ ಭಾಗಿಯಾಗಬೇಕಾದ್ರೆ ಅತ್ಯಾಧುನಿಕು ಸೈಕಲ್ ಅವಶ್ಯಕತೆ ಇತ್ತು. ಆದ್ರೆ, ಆ ಸೈಕಲ್ ಮೊತ್ತ ಕನಿಷ್ಠ 5ಲಕ್ಷ ರೂಪಾಯಿ ಆದ್ರೆ, ಇಷ್ಟೊಂದು ಹಣ ಕೊಟ್ಟು ಖರೀದಿ ಮಾಡುವ ಶಕ್ತಿ ಈ ಕುಟುಂಬಕ್ಕಿರಲಿಲ್ಲ. ಹೀಗಾಗಿ ನನ್ನ ಕ್ರೀಡಾ ಬದುಕು ಮುಗಿತು ಅಂದ್ಕೊಂಡಿದ್ದ ಹುಡುಗಿ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು.

ಸಿಎಂ ಸ್ಪೀಕಿಂಗ್ ಕಾರ್ಯಕ್ರಮದಲ್ಲಿ ಸೈಕಲ್ ಉಡುಗೊರೆ
ಈ ಬಾಲಕಿ ಸಾಧನೆ ಬಗ್ಗೆ.. ಈಕೆಯ ಗುರಿ ಬಗ್ಗೆ ಸೆ.9 ಗೌರಿ ಹಬ್ಬದ ದಿನ ಟಿವಿ9 ಸಿಎಂ ಸ್ಪೀಕಿಂಗ್ ಲೈವ್ ಅನ್ನೋ ವಿಶೇಷ ಕಾರ್ಯಕ್ರಮದ ಮೂಲಕ ಬಾಲಕಿಗೆ ಅವಶ್ಯಕತೆಯಿರುವ ಸೈಕಲ್‌ ಬಗ್ಗೆ ಸಿಎಂ ಗಮನಕ್ಕೆ ತರಲಾಗಿತ್ತು. ಈ ಮೂಲಕ ಬಾಲಕಿ ಕನಸಿಗೆ ಟಿವಿ9 ಆಸರೆಯಾಗಿತ್ತು. ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಬಾಲಕಿಗೆ ಸೈಕಲ್ ನೀಡುವ ಭರವಸೆ ನೀಡಿದ್ದರು.

ಅಂದು ಸಿಎಂ ನೀಡಿದ್ದ ಭರವಸೆ ಇಂದು ಈಡೇರಿದೆ. ವಿಧಾನಸೌಧದ ಕೆಂಗಲ್ ಹನುಮಂತರಾಯ ಮೂರ್ತಿ ಬಳಿ ನಡೆದ ಬೃಹತ್ ಕಾರ್ಯಕ್ರಮದಲ್ಲಿಂದು ಸಿಎಂ, ಸೈಕ್ಲಿಸ್ಟ್ ತಾರೆ ಪವಿತ್ರಾ ಕುರ್ತಕೋಟಿಗೆ ಸೈಕಲ್ ನೀಡಿದ್ದಾರೆ. ಇದೀಗ ಹುಡುಗಿ ಮುಖದಲ್ಲಿ ಮಂದಹಾಸ ಮೂಡಿದ್ದು, ಟಿವಿ9 ಹಾಗೂ ಸಿಎಂಗೆ ಧನ್ಯವಾದ ಅರ್ಪಿಸಿದ್ದಾಳೆ.

ಇಷ್ಟು ದುಬಾರಿಯ ಸೈಕಲ್ ನಾನು ನೋಡೇ ಇರಲಿಲ್ಲ. ನನಗೆ ಸಿಎಂ ಸೈಕಲ್ ಕೊಡ್ತಿರುವುದು ಖುಷಿಯಾಗಿದೆ. ಟಿವಿ9 ವರದಿಗೆ ಸ್ಪಂದಿಸಿ ಸಿಎಂ ಸೈಕಲ್ ನೀಡುತ್ತಿದ್ದಾರೆ. ಹೀಗಾಗಿ ಟಿವಿ9ಗೆ ಅಭಿನಂದನೆ ಸಲ್ಲಿಸುತ್ತೇನೆ. ಸೈಕಲ್‌ನಿಂದ ರಾಷ್ಟ್ರಮಟ್ಟದ ಸಾಧನೆಗೆ ಅನುಕೂಲವಾಗಲಿದೆ ಎಂದು ಪವಿತ್ರಾ ಕುರ್ತಕೋಟಿ ಟಿವಿ9ಗೆ ಅಭಿನಂದನೆ ಸಲ್ಲಿಸಿದ್ದಾಳೆ.

ಹಾಗೂ ಸೈಕಲ್ ವಿತರಣೆ ಬಳಿಕ ಟಿವಿ9 ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಟಿವಿ9 ಕಾರ್ಯಕ್ಕೆ ಶ್ಲಾಘಿಸಿದ್ದಾರೆ. ಟಿವಿ9 ಉತ್ತಮವಾದ ಕೆಲಸ ಮಾಡುತ್ತಿದೆ. ಟಿವಿ9 ವರದಿ ನೋಡಿ ಯುವತಿಗೆ ಸೈಕಲ್ ವಿತರಣೆ ಮಾಡಿದ್ದೇನೆ. ನನಗೆ ಸಂತೃಪ್ತಿ ಭಾವನೆ ಇದೆ ಎಂದು ಟಿವಿ9ಗೆ ಧನ್ಯವಾದ ತಿಳಿಸಿದರು.

ಆರ್ಗೋನ್-18 ಕಂಪನಿಯ ಟಾಪ್ ಮಾಡೆಲ್ ಸೈಕಲ್ ಇದಾಗಿದ್ದು, ಥೈವಾನ್‌ನಿಂದ ಬೆಂಗಳೂರಿಗೆ ತರಿಸಲಾಗಿದೆ. ಒಟ್ನಲ್ಲಿ ಬಾಲಕಿ ಸಾಧನೆಗೆ ಬೇಕಾಗಿದ್ದ ಸೈಕಲ್ ಸಮಸ್ಯೆ ಟಿವಿ9 ಮೂಲಕ ನಿವಾರಣೆಯಾಗಿದೆ. ಪವಿತ್ರಾ ರಾಷ್ಟ್ರ ಮಾತ್ರವಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲೂ ಒಳ್ಳೆಯ ಸಾಧನೆ ಮಾಡಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಲಿ ಅನ್ನೋದು ಟಿವಿ9 ಹಾರೈಕೆ.

ವರದಿ: ಸಂಜೀವ ಪಾಂಡ್ರೆ

ಇದನ್ನೂ ಓದಿ: ಕಯಾಕಿಂಗ್, ಸೈಕ್ಲಿಂಗ್​ನಲ್ಲಿ ಸಮಂತಾ ಬ್ಯುಸಿ; ಆದರೂ ಅವರ ಪ್ರತೀ ಸ್ಟೇಟಸ್​ಗೆ ಹೊಸ ಅರ್ಥ ಕಲ್ಪಿಸುತ್ತಿದ್ದಾರೆ ಅಭಿಮಾನಿಗಳು

Published On - 9:38 am, Fri, 24 September 21