ಗದಗ: 6 ವರ್ಷಗಳಿಂದ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಿಲ್ಲ; ಶಿಕ್ಷಣ ಇಲಾಖೆ ವಿರುದ್ಧ ಮಕ್ಕಳು, ಪೋಷಕರ ಆಕ್ರೋಶ
Gadag News: ಆರು ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರಿಲ್ಲದೇ ಹೈಸ್ಕೂಲ್ ವಿದ್ಯಾರ್ಥಿಗಳು ಗೋಳಾಟ ಪಡುತ್ತಿದದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ಧ ವಿಧ್ಯಾರ್ಥಿಗಳು, ಪೋಷಕರು ಸಿಟ್ಟಿಗೆದ್ದಿದ್ದಾರೆ.
ಗದಗ: ಕಳೆದ 6 ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರಿಲ್ಲದೇ ಮಕ್ಕಳು ಪರದಾಟ ಪಡುತ್ತಿರುವ ಪರಿಸ್ಥಿತಿ ಗದಗದಲ್ಲಿ ಇರುವ ಬಗ್ಗೆ ವಿಚಾರ ಬಯಲಾಗಿದೆ. ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಿಲ್ಲದ್ದಕ್ಕೆ ಮಕ್ಕಳು ಹಾಗೂ ಪೋಷಕರು ಪರದಾಟ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ತಾಲೂಕಿನ ಕದಡಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ್ಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಇದ್ದ ಶಿಕ್ಷಕಿ ಪಲ್ಲವಿಯವರನ್ನೇ ನೇಮಿಸುವಂತೆ ಆಗ್ರಹಿಸಿದ್ದಾರೆ. ಡಿಡಿಪಿಐ ಜಿ.ಎಂ. ಬಸವಲಿಂಗಪ್ಪ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದ್ದಾರೆ.
ಗದಗ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಇಂಗ್ಲಿಷ್ ಶಿಕ್ಷಕರ ನೇಮಕಕ್ಕೆ ಒತ್ತಾಯ ಮಾಡಿದ್ದಾರೆ. ಬಿಇಒರನ್ನು ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಲಕ್ಷ ಲಕ್ಷ ಸಂಬಳ ತಗೊಂಡು ನಿಮ್ಮ ಮಕ್ಕಳನ್ನು ಖಾಸಗಿ ಶಾಲೆ ಹಾಕ್ತೀರಿ ಅಂತ ಕಿಡಿ ಕಾರಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಗದಗ ಡಿಡಿಪಿಐ ಜಿ.ಎಮ್ ಬಸವಲಿಂಗಪ್ಪ ವಿರುದ್ಧ ಮಕ್ಕಳು ಧಿಕ್ಕಾರ ಕೂಗಿದ್ದಾರೆ. ಡಿಡಿಪಿಐ ಮತ್ತು ಬಿಇಓಗೆ ಮಕ್ಕಳ ಎದುರಲ್ಲೇ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಕ್ರಮವಾಗಿ ಇಂಗ್ಲಿಷ್ ಶಿಕ್ಷಕಿಯನ್ನ ಬೇರೆ ಜಿಲ್ಲೆಗೆ ನಿಯೋಜನೆ ಆರೋಪ ವ್ಯಕ್ತವಾಗಿದೆ. ಆರು ವರ್ಷದ ಹಿಂದೆ ಇದ್ದ ಇಂಗ್ಲಿಷ್ ಶಿಕ್ಷಕಿಯನ್ನು ನಿಯಮ ಉಲ್ಲಂಘಿಸಿ ಡೆಪ್ಟೇಷನ್ ಮೇಲೆ ಬೇರೆ ಶಾಲೆಗೆ ಅಧಿಕಾರಿಗಳು ಕಳಿಹಿಸಿದ್ದಾರೆ. ಆರು ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರಿಲ್ಲದೇ ಹೈಸ್ಕೂಲ್ ವಿದ್ಯಾರ್ಥಿಗಳು ಗೋಳಾಟ ಪಡುತ್ತಿದದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ಧ ವಿಧ್ಯಾರ್ಥಿಗಳು, ಪೋಷಕರು ಸಿಟ್ಟಿಗೆದ್ದಿದ್ದಾರೆ.
ಈ ಮೊದಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳ ಗೋಳಾಟ ಕಂಡುಬಂದಿತ್ತು. ಹಾಸ್ಟೆಲ್ನಲ್ಲಿ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿನಿಯರು ಪರದಾಟ ಪಡುತ್ತಿದ್ದರು. ಗದಗ ಜಿಲ್ಲೆಯ ರೋಣದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ಟಾಯ್ಲೆಟ್ನಲ್ಲೇ ಸ್ನಾನ ಮಾಡುವ ದುಸ್ಥಿತಿ ಎದುರಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕೊವಿಡ್ ನಿಯಮಗಳನ್ನ ಗಾಳಿಗೆ ತೂರಿದ ಹಾಸ್ಟೆಲ್ ಸಿಬ್ಬಂದಿ, ಕುರಿ ದೊಡ್ಡಿಯಂತೆ ಮಕ್ಕಳನ್ನು ತುಂಬಿದ್ದರು. ಅಧಿಕಾರಿಗಳ ಬಗ್ಗೆ ಈ ವಿಚಾರದಲ್ಲೂ ಅಸಮಾಧಾನ ಉಂಟಾಗಿತ್ತು. ಒಂದೇ ಹಾಲಿನಲ್ಲಿ 30-40 ಮಕ್ಕಳಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಕಾಟ್, ಬೆಡ್ ಇಲ್ಲದೇ ನೆಲದ ಮೇಲೆ ಮಕ್ಕಳು ಮಲಗಿದ್ದರು. ಕಿಟ್ಗಳನ್ನ ನೀಡದೇ ಹಾಸ್ಟೆಲ್ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿತ್ತು.
ಇದನ್ನೂ ಓದಿ: ಗದಗದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ; ಮಹಿಳೆಯರ ಆರೋಪ
ಇದನ್ನೂ ಓದಿ: ಗದಗದ ಕೊಕ್ಕರಗುಂದಿ ಗ್ರಾಮಕ್ಕೆ ಬಂದೇ ಬಿಡ್ತು ಬಸ್; ಟಿವಿ9ನಲ್ಲಿ ವರದಿ ಪ್ರಸಾರದ ಬಳಿಕ ಎಚ್ಚೆತ್ತ ಅಧಿಕಾರಿಗಳು