ಗದಗ: ತವರಿನಿಂದ ಕೊಟ್ಟ ಬೆಳ್ಳಿ ಉಡುಗೊರೆ ಕಳ್ಳತನ, ಕಣ್ಣೀರು ಹಾಕುತ್ತಿರುವ ತಾಯಿ ಮಗಳು

ವೈದ್ಯೆಯಾಗಿರುವ ಮನೆಮಗಳು ಮದುವೆಯಾಗಿ ಪತಿ ಮನೆಗೆ ಹೋಗುವಾಗ ತವರಿನಿಂದ ಉಡುಗೊರೆಯಾಗಿ ಲಕ್ಷಾಂತರ ಮೌಲ್ಯದ ಬೆಳ್ಳಿ ಕೊಡ, ಬೆಳ್ಳಿ ತಾಟುಗಳು, ತಂಬಿಗೆಗಳು, ಆರತಿ ತಟ್ಟೆ ಇತ್ಯಾದಿಗಳನ್ನು ನೀಡಲಾಗಿತ್ತು. ಆದರೆ ಭಾನುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳರು ಬೆಳ್ಳಿ ವಸ್ತುಗಳನ್ನೆಲ್ಲಾ ದೋಚಿದ್ದಾರೆ.

ಗದಗ: ತವರಿನಿಂದ ಕೊಟ್ಟ ಬೆಳ್ಳಿ ಉಡುಗೊರೆ ಕಳ್ಳತನ, ಕಣ್ಣೀರು ಹಾಕುತ್ತಿರುವ ತಾಯಿ ಮಗಳು
ಮನೆಯಲ್ಲಿದ್ದ ಬೆಳ್ಳಿ ಉಡುಗೊರೆಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ತಾಯಿ ಮತ್ತು ಮಗಳು
Edited By: Rakesh Nayak Manchi

Updated on: Jul 31, 2023 | 10:05 PM

ಗದಗ, ಜುಲೈ 31: ಮನೆ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ತವರಿನಿಂದ ಉಡುಗೊರೆಯಾಗಿ ಕೊಟ್ಟಿದ್ದ ಲಕ್ಷಾಂತರ ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡಿದ ಘಟನೆ ಗದಗ (Gadag) ನಗರದ ಧೋಬಿ ಘಾಟ್ ಬಳಿ ನಡೆದಿದೆ. 15 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ತವರು ಮನೆಯ ಪ್ರೀತಿಯ ಉಡುಗೊರೆಗಳನ್ನು ಕಳೆದುಕೊಂಡ ವೈದ್ಯೆ ಕಣ್ಣೀರು ಹಾಕುತ್ತಿದ್ದಾರೆ.

ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಚೆನ್ನಮ್ಮ ರೆಡ್ಡಿ ಅವರು ಅಕ್ಕ ಬಂದಿದ್ದಾಳೆ ಎಂದು ಹೇಳಿ ಶನಿವಾರ ಮನೆಗೆ ಬೀಗ ಹಾಕಿ ಪತಿಯೊಂದಿಗೆ ಧಾರವಾಡದಲ್ಲಿರುವ ತಾಯಿ ಮನೆಗೆ ಹೋಗಿದ್ದರು. ಇಂದು (ಜುಲೈ 31) ಧಾರವಾಡದಿಂದ ಮನೆ ವಾಪಸ್ ಬಂದಾಗ ಮನೆಯ ಬೀಗ ಮುರಿದಿರುವುದನ್ನು ನೋಡಿ ದಂಪತಿ ಆಘಾತಗೊಂಡಿದ್ದಾರೆ.

ಇದನ್ನೂ ಓದಿ: ಜುವೆಲ್ಲರಿ ಶಾಪ್ ಮಾಲೀಕನ ಕಳ್ಳಾಟ ಬಯಲು, ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿದ್ದವನನ್ನೇ ಬಂಧಿಸಿದ ಪೊಲೀಸ್ರು

ಮನೆಯೊಳಗೆ ಹೋಗಿ ನೋಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಮನೆಯ ಬೆಡ್ ರೂಂನಲ್ಲಿದ್ದ ಟ್ರಿಜರಿ ಬಾಗಿಲನ್ನು ಕಬ್ಬಿಣದ ರಾಡ್​ನಿಂದ ಮುರಿದು ಬೆಳ್ಳಿ ಕೊಡ, ಬೆಳ್ಳಿ ತಾಟುಗಳು, ತಂಬಿಗೆಗಳು, ಆರತಿ ತಟ್ಟೆ ಸೇರಿದಂತೆ 5 ಕೆ.ಜಿ.ಗೂ ಅಧಿಕ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಎರಡು ಬೆಡ್ ರೂಂನಲ್ಲಿದ್ದ ಮೂರು ಕಪಾಟಿನಲ್ಲಿನ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.

ಕಳ್ಳತನ ವಿಚಾರ ತಿಳಿದ ಗದಗ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಿ.ಸಿ.ಟಿವಿ ಕ್ಯಾಮರಾ ಮನೆ ಹೊರವಲಯದಲ್ಲಿ ಇರುವುದರಿಂದ ಕಳ್ಳರು ಪಕ್ಕಾ ಪ್ಲಾನ್ ಮಾಡಿ ಲೂಟಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಸ್ಥಳಕ್ಕೆ ಬಂದಿದ್ದ ಶ್ವಾನದಳವು ಕಳ್ಳರು ಪರಾರಿಯಾಗಿರುವ ದಿಕ್ಕು ತೋರಿಸಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 pm, Mon, 31 July 23

Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us