ಕೆರಳ್ಳಿ ಗ್ರಾಮದಲ್ಲಿ ಡಬಲ್ ಮರ್ಡರ್; ಚಿಕನ್ ಊಟ ಮಾಡಿ ಮನೆ ಮಕ್ಕಳನ್ನೇ ಕೊಂದ ಕೆಲಸದಾತ
ಉಂಡ ಮನೆಗೆ ದ್ರೋಹ ಬಗೆದ ಹಂತಕನಿಗೆ ಗಲ್ಲು ಶಿಕ್ಷೆಯೇ ಆಗಬೇಕು ಅಂತ ಎಸ್ಪಿ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ. ಹೆಣ್ಣು ಹೊನ್ನು ಮಣ್ಣಿಗಾಗಿ ಕೊಲೆ ನಡೆಯಬೇಕು. ಆದ್ರೆ ಡಬಲ್ ಮರ್ಡರ್ ರಹಸ್ಯ ನಿಗೂಢವಾಗಿದೆ.
ಗದಗ: ಜಿಲ್ಲೆಯ ಮನೆಯೊಂದರಲ್ಲಿ ಡಬಲ್ ಮರ್ಡರ್(Double Murder) ಆಗಿದೆ. ಮದುವೆ ಹುಡಗಿ ನೋಡಲು ಊರಿಗೆ ಬಂದಿದ್ದ ಮಗ ಬಹಳ ದಿನಗಳ ಬಳಿಕ ಮನೆಗೆ ಬಂದಿದ್ದಾನೆ ಅಂತ ತಾಯಿ ರಾತ್ರಿ ರುಚಿ ರುಚಿಯಾದ ಚಿಕನ್ ಮಾಡಿದ್ಲು. ಹೆತ್ತ ಮಗ, ಹಂತಕ ಹಾಗೂ ಇನ್ನೋರ್ವ ಯುವಕ ಸೇರಿ ರಾತ್ರಿ ಭರ್ಜರಿಯಾಗಿ ಚಿಕನ್ ಊಟ ಮಾಡಿದ್ರು. ಬಳಿಕ ಮನೆಯ ಮೇಲ್ಚಾವಣಿಯಲ್ಲಿ ಗಾಢ ನಿದ್ರೆಯಲ್ಲಿದ್ರು. ಆದ್ರೆ ಹಂತಕ ಮಾತ್ರ ಏನೋ ಪ್ಲಾನ್ ಮಾಡಿಕೊಂಡಿದ್ದ, ಇಬ್ಬರು ಯುವಕರನ್ನು ಕೊಲೆ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಬಾಳಿ ಬದುಕ ಬೇಕಾದ ಇಬ್ಬರು ಯುವಕರನ್ನು ಮಸಣ ಸೇರಿಸಿದ್ದಾನೆ. ಆದ್ರೆ ಕೊಲೆಗೆ ಕಾರಣ ಮಾತ್ರ ನಿಗೂಢವಾಗಿದೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೆರಳ್ಳಿ ಗ್ರಾಮದಲ್ಲಿ ಡಬಲ್ ಮರ್ಡರ್ ಆಗಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಅಂದಹಾಗೇ ಕೆರಳ್ಳಿ ಗ್ರಾಮದ 28 ವರ್ಷದ ಮಹಾಂತೇಶ ಅವರ ಮನೆಯಲ್ಲಿ, 40 ವರ್ಷದ ಹಂತಕ ಮಂಜುನಾಥ ಹಾಗೂ ಮಹಾಂತೇಶ ಅವರ ಸಂಬಂಧಿ 17 ವರ್ಷದ ಫಕ್ಕೀರೇಶ್ ಮೂವರು ನಿನ್ನೆ ರಾತ್ರಿ ಚಿಕನ್ ಊಟ ಮಾಡಿದ್ರು. ಮಹಾಂತೇಶ ಅವರ ತಾಯಿ ಫಕ್ಕಿರವ್ವಾ ರುಚಿ ರುಚಿಯಾದ ಚಿಕನ್ ಊಟ ತಯಾರಿಸಿ, ಮೂವರಿಗೆ ಊಟವನ್ನು ಹಾಕಿದ್ದಳ್ಳು. ಮೂವರು ಸೇರಿಕೊಂಡು ಊಟವನ್ನು ಮಾಡಿದ್ದಾರೆ. ಬಳಿಕ ಮೂವರು ಮನೆಯ ಮೇಲ್ಚಾವಣಿಯ ಮೇಲೆ ಮಲಗಿಕೊಂಡಿದ್ರು. ಆದ್ರೆ ಬೆಳಗಿನ ಜಾಗ 4:30 ರ ಸಮಯದಲ್ಲಿ ಮೇಲ್ಚಾವಣಿಯಿಂದ ಡಬ್ ಡಬ್ ಎನ್ನುವ ಸದ್ದು ಜೋರಾಗಿ ಹೇಳಿ ಬರ್ತಾಯಿತ್ತು. ಹೋಗಿ ನೋಡಿದ್ರೆ, ಹಂತಕ ಮಂಜುನಾಥ, ದೊಡ್ಡದೊಂದು ದೊಣ್ಣೆಯಿಂದ, ಹೊಡೆದು ಮಹಾಂತೇಶ ಹಾಗೂ ಫಕ್ಕಿರೇಶ ಎನ್ನುವ ಯುವಕನ್ನು ಕೊಲೆ ಮಾಡಿದ್ದ. ಯಾರಾದರೂ ಮೇಲೆ ಬಂದ್ರೆ ನಿಮ್ಮನ್ನು ಮುಗಿಸುವುದಾಗಿ ಧಮ್ಕಿ ಹಾಕುತ್ತಿದ್ದ, ಗ್ರಾಮಸ್ಥರು ಮಂಜುನಾಥನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿನ್ನೆ ರಾತ್ರಿ ಹೆತ್ತ ಮಕ್ಕಳ ಹಾಗೇ ಹಂತಕನಿಗೆ ಚಿಕನ್ ಊಟ ಮಾಡಿ ಹಾಕಿದ್ದೇ, ನಮ್ಮ ಮನೆಯ ದೀಪವನ್ನೆ ಹಾರಿಸಿದ್ದಾನೆ ಅಂತಾ ಕಣ್ಣೀರು ಹಾಕ್ತಾಯಿದ್ದಾಳೆ. ಯಾಕೆ ಕೊಲೆ ಮಾಡಿದ್ದಾನೆ ಎನ್ನುವುದೇ ಗೊತ್ತಾಗುತ್ತಿಲ್ಲಾ ಎಂದು ಹೆತ್ತ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಇದನ್ನೂ ಓದಿ: ಎರಡು ವರ್ಷಗಳ ನಂತರ ಆಷಾಢ ಮಾಸದ ಮೊದಲ ಶುಕ್ರವಾರ ಭಕ್ತರಿಗೆ ಮೈಸೂರು ಚಾಮುಂಡೇಶ್ವರಿ ದೇವಿಯ ದರ್ಶನ ಭಾಗ್ಯ!
ಇನ್ನೂ ಕುರಿಗಾಯಿ ಮಹಾಂತೇಶ ಅವರ ಮನೆಯಲ್ಲಿ ಕೊಲೆ ಮಾಡಿದ ಆರೋಪಿ ಮಂಜುನಾಥ ದೇಸಳ್ಳಿ ಇರ್ತಾಯಿದ್ದ. ಕೊಲೆಯಾದ ಮಹಾಂತೇಶ ಅವರ ಕುರಿಗಳನ್ನು ಕಾಯಲು ಮಂಜುನಾಥನನ್ನು ನೇಮಕ ಮಾಡಿಕೊಂಡಿದ್ರು. ಮಹಾಂತೇಶ ಅವರ ಕುಟುಂಬಸ್ಥರು ಮಂಜುನಾಥನನ್ನು ಹೆತ್ತ ಮಗನ ಹಾಗೇ ನೋಡಿಕೊಳ್ಳುತ್ತಿದ್ದರು. ಆದ್ರೆ ಈ ಮಂಜುನಾಥ ಎರಡು ವರ್ಷಗಳ ಹಿಂದೆ ಕೆಲಸಕ್ಕೆ ಇದ್ದ. ಆದಾಗ ಮೇಲೆ ಮತ್ತೇ ತನ್ನೂರಾದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಅಲಗಿಲವಾಡ್ ಗ್ರಾಮಕ್ಕೆ ಹೋಗಿದ್ದ, ತಿಂಗಳ ಹಿಂದೆ ಪುನಃ ಕುರಿ ಕಾಯುವ ಕೆಲಸಕ್ಕೆ ಸೇರಿಕೊಂಡಿದ್ದ, ನಿನ್ನೆ ತಾನೇ ಮಹಾಂತೇಶ ಕನ್ಯೆಯನ್ನು ನೋಡಿಕೊಂಡು ಬಂದಿದ್ದು, ಅದೇ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕು ಎನ್ನುವ ಮಾತುಕತೆ ಕೂಡಾ ಮನೆಯಲ್ಲಿ ನಡೆದಿತ್ತು. ಆದ್ರೆ ಊಂಡ ಮನೆಗೆ ದ್ರೋಹ ಬಗೆದ ಹಾಗೇ ಹಂತಕ ಮಂಜುನಾಥ ಮನೆ ಮಕ್ಕಳನ್ನು ಹತ್ಯೆ ಮಾಡಿದ್ದಾನೆ. ಕುರಿಗಾಯಿ ಮಹಾಂತೇಶ ಹಾಗೂ ಹಂತಕ ಮಂಜುನಾಥನ ಜೊತೆಗೆ ಮಲಗಿಕೊಂಡು ಅಮಾಯಕ ಫಕ್ಕಿರೇಶನ್ ಕೂಡ ಕೊಲೆ ಕೊಲೆಯಾಗಿದ್ದಾನೆ. ಎರಡು ಮನೆಯಲ್ಲಿ ಹೆತ್ತವರ ಆಕ್ರಂದನ ಮಗಿಲು ಮುಟ್ಟಿದೆ. ಇನ್ನೂ ಸ್ಥಳಕ್ಕೆ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿದ ಮಂಜುನಾಥನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರ ನಡೆಸುತ್ತಿದ್ದು, ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲಾ ಎಂದು ಎಸ್ಪಿ ಹೇಳ್ತಾರೆ.
ಕುಟುಂಬಸ್ಥರು ಹಂತಕನ ವಿರುದ್ಧ ರೊಚ್ಚಿಗೆದ್ದಾರೆ. ಉಂಡ ಮನೆಗೆ ದ್ರೋಹ ಬಗೆದ ಹಂತಕನಿಗೆ ಗಲ್ಲು ಶಿಕ್ಷೆಯೇ ಆಗಬೇಕು ಅಂತ ಎಸ್ಪಿ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ. ಹೆಣ್ಣು ಹೊನ್ನು ಮಣ್ಣಿಗಾಗಿ ಕೊಲೆ ನಡೆಯಬೇಕು. ಆದ್ರೆ ಡಬಲ್ ಮರ್ಡರ್ ರಹಸ್ಯ ನಿಗೂಢವಾಗಿದೆ. ಪೊಲೀಸರು ಕೊಲೆ ರಹಸ್ಯ ಏನೂ ಅಂತ ಪತ್ತೆ ಹಚ್ಚುತ್ತಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಹೆತ್ತ ಮಗನ ಹಾಗೇ ನೋಡಿಕೊಂಡಿದ್ದ ಕುಟುಂಬದ ಮಕ್ಕಳ್ಳನ್ನೆ ಕೊಲೆ ಮಾಡುವಷ್ಟು ವೈಷಮ್ಯ ಏನು ಇತ್ತು ಎನ್ನುವದು ಪೊಲೀಸ ತನಿಖೆಯಿಂದಲೇ ಬಹಿರಂಗವಾಗಬೇಕಾಗಿದೆ.