ಯೂರಿಯಾ ಗೊಬ್ಬರಕ್ಕಾಗಿ ಹಗಲು-ರಾತ್ರಿ ರೈತರ ಪರದಾಟ: ಕೇಳೋರಿಲ್ಲ ರೈತರ ಗೋಳು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 14, 2022 | 11:51 AM

ಶಿರಹಟ್ಟಿ ಪಟ್ಟಣದ ಕೃಷಿ ಇಲಾಖೆ ಪಕ್ಕದಲ್ಲೇ ರೈತರಿಗೆ ಶೋಷಣೆ ನಡೆದ್ರೂ ಕೃಷಿ ಇಲಾಖೆ ಡೋಂಟ್ ಕೇರ್ ಎನ್ನುತ್ತಿದೆ. ಕೃಷಿ ಇಲಾಖೆ, ಜಿಲ್ಲಾಡಳಿತ ನಿರ್ಲಕ್ಷ್ಯ ವಿರುದ್ಧ ರೈತರು ಗರಂ ಆಗಿದ್ದಾರೆ.

ಯೂರಿಯಾ ಗೊಬ್ಬರಕ್ಕಾಗಿ ಹಗಲು-ರಾತ್ರಿ ರೈತರ ಪರದಾಟ: ಕೇಳೋರಿಲ್ಲ ರೈತರ ಗೋಳು
ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ
Follow us on

ಗದಗ: ಯೂರಿಯಾ ಗೊಬ್ಬರಕ್ಕಾಗಿ ಹಗಲು ರಾತ್ರಿ ರೈತರು (Farmers) ಪರದಾಡುವಂತ್ತಾಗಿದ್ದು, ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಕೃಷಿ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ರೈತರ ಗೋಳು ಕೇಳೋರಿಲ್ಲ ಎನ್ನುವಂತ್ತಾಗಿದೆ. ಗೋಡೌನ್​ನಲ್ಲಿ ಗೊಬ್ಬರ ಇದ್ರೂ ರೈತರಿಗೆ ಸರಿಯಾಗಿ ಗೊಬ್ಬರ ಸಿಗುತ್ತಿಲ್ಲ. ಸರ್ಕಾರ ನಿಗದಿ ಮಾಡಿದ ದರಕ್ಕಿಂತಲೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಸರ್ಕಾರ ದರ ನಿಗದಿ ಮಾಡಿದ್ದು, 266 ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಗೊಬ್ಬರ ಅಂಗಡಿಗಳಲ್ಲಿ 330 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ರಸೀದಿ ನೀಡದೇ ಜಿಲ್ಲೆಯಲ್ಲಿ ರೈತರಿಗೆ ಮಹಾ ಮೋಸ ಮಾಡಲಾಗುತ್ತಿದೆ.

ಇದನ್ನೂ ಓದಿ; Shocking Video: ಫೋಟೋ ಆಸೆಯಿಂದ ಸಮುದ್ರದಲ್ಲಿ ಕೊಚ್ಚಿ ಹೋದ ಕುಟುಂಬ; ಶಾಕಿಂಗ್ ವಿಡಿಯೋ ವೈರಲ್

ಶಿರಹಟ್ಟಿ ಪಟ್ಟಣದ ಕೃಷಿ ಇಲಾಖೆ ಪಕ್ಕದಲ್ಲೇ ರೈತರಿಗೆ ಶೋಷಣೆ ನಡೆದ್ರೂ ಕೃಷಿ ಇಲಾಖೆ ಡೋಂಟ್ ಕೇರ್ ಎನ್ನುತ್ತಿದೆ. ಕೃಷಿ ಇಲಾಖೆ, ಜಿಲ್ಲಾಡಳಿತ ನಿರ್ಲಕ್ಷ್ಯ ವಿರುದ್ಧ ರೈತರು ಗರಂ ಆಗಿದ್ದು, ಏಜೆಂಟ್​ರಿಗೆ ಎಷ್ಟು ಬೇಕು ಅಷ್ಟು ಗೊಬ್ಬರ ನೀಡಲಾಗುತ್ತಿದ್ದು, ರೈತರಿಗೆ ಮಾತ್ರ ಕೇವಲ ಎರಡು ಚೀಲ್ ಅಂತ ಕಿಡಿ ಕಾಡಿರಿದ್ದಾರೆ. ಏಜೆಂಟ್​ರು ಹೆಚ್ಚಿನ ಹಣಕ್ಕೆ ರೈತರಿಗೆ ಮಾರಾಟ ಮಾಡಲಾಗುತ್ತಿದ್ದು, ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ರೈತರು ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು.

ಇದನ್ನೂ ಓದಿ: ತುಂಗಭದ್ರಾ ಜಲಾಶಯ ಭರ್ತಿ‌: ನದಿ ಪಾತ್ರದ ಗ್ರಾಮಗಳ‌ ಜನರಿಗೆ ಆತಂಕ, ಬಾಗಿನ ಅರ್ಪಣೆ

ಜಡಿ ಮಳೆಗೆ ರೈತರ ಬದುಕು ಮೂರಾಬಟ್ಟೆ..!

ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಶುರುವಾದ ತುಂತುರು ಮಳೆ ಮುಂದುವರೆದಿದ್ದು, ಜಡಿ ಮಳೆಗೆ ರೈತರ ಬದುಕು ಮೂರಾಬಟ್ಟೆಯಂತ್ತಾಗಿದೆ. ನಿರಂತರ ಮಳೆಗೆ ಬೆಳೆದ ಲಕ್ಷಾಂತರ ಹೆಕ್ಟೇರ್ ಹೆಸರು ಬೆಳೆ ಹಾಳಾಗುವ ಆತಂಕ ಹೆಚ್ಚಾಗಿದೆ.
ಸುಮಾರು 1 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆಯಲಾಗಿದೆ. ನಿರಂತರ ಮಳೆಗೆ ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಸತತ ಮಳೆಯಿಂದ ರೈತರಲ್ಲಿ ಆತಂಕ ಹೆಚ್ಚಿದ್ದು, ಅತಿಯಾದ ಮಳೆಗೆ ಹೆಸರು ಬೆಳೆ ಕೊಳೆಯುವ ಭೀತಿ ಎದುರಾಗಿದೆ.